ಅನ್ಯಗ್ರಹ ಜೀವಿಗಳ ಸಂಚಾರ?: 3 ದಿನಗಳಲ್ಲಿ 3ನೇ ವಸ್ತು ಹೊಡೆದುರುಳಿಸಿದ ಅಮೆರಿಕ
Team Udayavani, Feb 14, 2023, 7:27 AM IST
ವಾಷಿಂಗ್ಟನ್: ಸೋಮವಾರ ಮತ್ತೊಂದು ಅನುಮಾನಾಸ್ಪದ ವಸ್ತುವನ್ನು ಅಮೆರಿಕ ಸೇನೆ ಹೊಡೆದುರುಳಿಸಿದೆ. ಕಳೆದ 3 ದಿನಗಳಲ್ಲಿ ನಡೆದ 3ನೇ ಪ್ರಕರಣ ಇದಾಗಿದೆ. ಚೀನದ ಬೇಹುಗಾರಿಕಾ ಬಲೂನನ್ನು ಅಮೆರಿಕದ ಯುದ್ಧನೌಕೆಯು ಛಿದ್ರಗೊಳಿಸಿದ ಒಂದೇ ವಾರದಲ್ಲಿ ಈ 3 ಶಂಕಾಸ್ಪದ ವಸ್ತುಗಳೂ ಆಗಸದಲ್ಲಿ ಸಂಚರಿಸಿದ್ದು, ಮೂರನ್ನೂ ಹೊಡೆದು ಹಾಕಲಾಗಿದೆ. ಇದೇ ವೇಳೆ, ಆಗಸದಲ್ಲಿ ಸಂಚರಿಸುತ್ತಿದ್ದುದು ಅನ್ಯಗ್ರಹ ಜೀವಿಗಳು ಕಳುಹಿಸಿರುವಂಥ ವಸ್ತುವಾಗಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ.
ಸೋಮವಾರ ಅಮೆರಿಕದ ಮಿಚಿಗನ್‌ನಲ್ಲಿ 20 ಸಾವಿರ ಅಡಿ ಎತ್ತರದಲ್ಲಿ ಅಷ್ಟಭುಜಾಕೃತಿಯ ವಸ್ತುವು ಸಂಚರಿ ಸುತ್ತಿತ್ತು. ಅದರ ಕೆಳಭಾಗದಲ್ಲಿ ಕೆಲವು ತಂತಿಗಳೂ ನೇತಾಡುತ್ತಿರುವುದು ಕಂಡುಬಂದಿತ್ತು. ಕೂಡಲೇ ಅಧ್ಯಕ್ಷ ಬೈಡೆನ್ ಆದೇಶ ಪಡೆದು, ಅದನ್ನು ಹೊಡೆದುರುಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನ್ಯಗ್ರಹ ಜೀವಿಗಳ ಕೈವಾಡವೇ?
ಕಳೆದ ವಾರ ಮೊದಲು ಕಂಡುಬಂದಿದ್ದ ಬಲೂನು ಚೀನದ್ದು ಎಂಬುದು ಸ್ಪಷ್ಟವಾಗಿತ್ತು. ಆದರೆ ಅನಂತರದಲ್ಲಿ ಹಾರಾಡಿದ ಮೂರೂ ವಸ್ತುಗಳ ಮೂಲ ಪತ್ತೆಯಾಗಿಲ್ಲ. ಇದೇ ವೇಳೆ, ಇವುಗಳು ಅನ್ಯಗ್ರಹ ಜೀವಿಗಳೇ ಅಥವಾ ಅವುಗಳು ಸಂಶೋಧನೆಗೆಂದು ಕಳುಹಿಸಿರುವ ವಸ್ತುಗಳೇ ಎಂಬ ಪ್ರಶ್ನೆಯೂ ಮೂಡಿದೆ. ಈ ವಾದವನ್ನೂ ಅಲ್ಲಗಳೆಯುವಂತಿಲ್ಲ ಎಂದು ಅಮೆರಿಕದ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನೊಂದೆಡೆ ಉದ್ಯಮಿ ಎಲಾನ್ ಮಸ್ಕ್ ಅವರೂ ಪ್ರತಿಕ್ರಿಯಿಸಿ, “ಯಾರೂ ತಲೆಕೆಡಿಸಿಕೊಳ್ಳಬೇಡಿ. ಅದು ನನ್ನ ಏಲಿಯನ್ ಫ್ರೆಂಡ್ಸ್ ಇರಬಹುದು’ ಎಂದು ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ ಕಳೆದ ವರ್ಷ ಅಮೆರಿಕದ ಬೇಹುಗಾರಿಕಾ ಡ್ರೋನ್‌ಗಳು 10 ಬಾರಿ ನಮ್ಮ ಆಗಸದಲ್ಲಿ ಸಂಚರಿಸಿದ್ದವು ಎಂದು ಚೀನ ಆರೋಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan;ಬಲೂಚಿಸ್ಥಾನದಲ್ಲಿ ಉಗ್ರರ ವಿರುದ್ಧ ಸಮಗ್ರ ಕಾರ್ಯಾಚರಣೆಗೆ ಮುಂದಾದ ಪಾಕ್
Modi; 56 ವರ್ಷಗಳಲ್ಲಿ ಗಯಾನಾಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ
‘New Phase’ of War: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅಣ್ವಸ್ತ್ರ ದಾಳಿ ಎಚ್ಚರಿಕೆ!
Copper: ಕಾಂಗೋದಲ್ಲಿ ಕುಸಿದ ಪರ್ವತ: ಸಾವಿರಾರು ಟನ್ ತಾಮ್ರ ಪ್ರತ್ಯಕ್ಷ!
bomb cyclone: ಶೀಘ್ರ ಅಮೆರಿಕ ಕರಾವಳೀಲಿ “ಬಾಂಬ್ ಸೈಕ್ಲೋನ್’ ಸ್ಫೋಟ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.