BJP-JDS: ಮೈತ್ರಿ ಮುನಿಸು: ಇಬ್ರಾಹಿಂ “ನಾಟ್ ರೀಚೆಬಲ್”
"ಘರ್ ವಾಪಸಿ'ಗೆ ತೆರೆಮರೆ ಕಸರತ್ತು: ಅ.16ಕ್ಕೆ ಗುಟ್ಟು ರಟ್ಟು
Team Udayavani, Sep 29, 2023, 9:36 PM IST
ಬೆಂಗಳೂರು: ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಮುನಿಸಿಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಸದ್ಯ ಯಾರ ಸಂಪರ್ಕಕ್ಕೂ ಸಿಗದೆ “ನಾಟ್ ರೀಚೆಬಲ್’ ಆಗಿದ್ದಾರೆ. ಈ ಮಧ್ಯೆ ಅವರನ್ನು ಕಾಂಗ್ರೆಸ್‌ಗೆ “ಘರ್‌ವಾಪಸಿ’ ಮಾಡಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆದಿವೆ ಎಂದೂ ಹೇಳಲಾಗುತ್ತಿದೆ.
ಮೈತ್ರಿ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡರು ದಿಲ್ಲಿ ಮಟ್ಟದಲ್ಲಿ ನಡೆಸಿದ ಮಾತುಕತೆ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದ ಬಳಿಕ ಸಿ.ಎಂ ಇಬ್ರಾಹಿಂ ತೆರೆಗೆ ಸರಿದಿದ್ದಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿಯವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಪಕ್ಷದ ಸಭೆಗಳಿಗೂ ಹೋಗಿಲ್ಲ.
ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರದಲ್ಲಿ “ದೊಡ್ಡವರು’ (ದೇವೇಗೌಡರು) ಅಥವಾ ಕುಮಾರಸ್ವಾಮಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ನೋವು ಅವರನ್ನು ಕಾಡಿದೆ. ಆ ಕಾರಣಕ್ಕಾಗಿ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅಲ್ಲದೆ ದೋಸ್ತಿ ಫೈನಲ್ ಆದಂದಿನಿಂದ ದೇವೇಗೌಡರಾಗಲಿ, ಕುಮಾರಸ್ವಾಮಿಯಾಗಲಿ ಇಬ್ರಾಹಿಂ ಅವರಿಗೆ “ಒನ್ ಟು ಒನ್’ ಸಂಪರ್ಕ ಮಾಡಿಲ್ಲ. ಸಭೆ, ಪತ್ರಿಕಾಗೋಷ್ಠಿಗೆ ಪಕ್ಷದ ಕಚೇರಿಯಿಂದ ಕರೆ ಹೋಗಿದೆಯಷ್ಟೇ ಎಂದು ಜೆಡಿಎಸ್‌ನ ಕೆಲವರು ಹೇಳುತ್ತಾರೆ.
ಮೈತ್ರಿ ತೀರ್ಮಾನದಿಂದ ಆಘಾತ
ಕಾಂಗ್ರೆಸ್‌ನಲ್ಲಿದ್ದಾಗ ಅಧಿಕಾರ-ಸ್ಥಾನಮಾನ ಎಲ್ಲವನ್ನೂ ಅನುಭವಿಸಿದರು. ಸಿದ್ದರಾಮಯ್ಯ ಸಹಿತ ಕಾಂಗ್ರೆಸ್‌ನ ಘಟಾನುಘಟಿಗಳಿಗೆ ಸಡ್ಡು ಹೊಡೆದು ಜೆಡಿಎಸ್ ಸೇರಿದ್ದ ಇಬ್ರಾಹಿಂ ಜೆಡಿಎಸ್-ಬಿಜೆಪಿ ಮೈತ್ರಿ ನಿರೀಕ್ಷೆ ಮಾಡಿರಲಿಲ್ಲ. ಈಗ ಮೈತ್ರಿ ಆಗಿರುವುದರಿಂದ ಅವರು ಆಘಾತಗೊಂಡಿದ್ದಾರೆ. ಮುಂದೇನು ಮಾಡಬೇಕೆಂಬ ಬಗ್ಗೆ ಗೊಂದಲದಲ್ಲಿದ್ದಾರೆ. ದೇವೇಗೌಡರನ್ನು ನಂಬಿ ಜೆಡಿಎಸ್‌ಗೆ ಹೋದರೆ, ಕೊನೆಗೆ ಅವರೇ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಬೇಸರ ಅವರಿಗಿದೆ. ಹಾಗಾಗಿ ಮೈತ್ರಿ ಬಳಿಕ ಜೆಡಿಎಸ್‌ನ ಅಲ್ಪಸಂಖ್ಯಾಕ ನಾಯಕರು ಕರೆದ ಸಭೆಗೂ ಅವರು ಬರಲಿಲ್ಲ, ನಮ್ಮನ್ನು ಭೇಟಿಯೂ ಮಾಡುತ್ತಿಲ್ಲ. ದಿನವಿಡೀ ಧ್ಯಾನದಲ್ಲಿ ಮಗ್ನರಾಗಿರುತ್ತಾರೆ ಎಂದು ಜೆಡಿಎಸ್ ಅಲ್ಪಸಂಖ್ಯಾಕ ನಾಯಕರೊಬ್ಬರು “ಉದಯವಾಣಿ’ಗೆ ಹೇಳಿದ್ದಾರೆ.
“ಘರ್ ವಾಪಸಿಗೆ’ ಪ್ರಯತ್ನ
ಇಬ್ರಾಹಿಂ ಅವರನ್ನು “ಘರ್‌ವಾಪಸಿ’ ಮಾಡಿಕೊಳ್ಳಲು ಖುದ್ದು ಡಿಸಿಎಂ ಡಿ.ಕೆ. ಶಿವಕುಮಾರ್ ಮುಂದಡಿ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸಚಿವ ಜಮೀರ್ ಅಹ್ಮದ್ ಅಲ್ಪಸಂಖ್ಯಾಕರ “ಏಕಮೇವಾದ್ವಿತೀಯ’ ನಾಯಕರಾಗಿದ್ದು, ಅವರು ಸಿಎಂ ಸಿದ್ದರಾಮಯ್ಯ ಕ್ಯಾಂಪ್‌ಗೆ ಸೇರಿದವರಾಗಿದ್ದಾರೆ. ಇಬ್ರಾಹಿಂ ಅವರನ್ನು ಕರೆತಂದರೆ ಕೌಂಟರ್ ಕೊಡಬಹುದು ಎಂಬ ಲೆಕ್ಕಾಚಾರ ಡಿ.ಕೆ. ಶಿವಕುಮಾರ್ ಅವರದ್ದು. ಆದರೆ ಆಪರೇಷನ್ ಇಬ್ರಾಹಿಂಗೆ ಸಿದ್ದರಾಮಯ್ಯ ಸುತಾರಾಂ ಒಪ್ಪುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಅಕ್ಟೋಬರ್ 16ಕ್ಕೆ ತೀರ್ಮಾನ
ಈ ನಡುವೆ ಅಕ್ಟೋಬರ್ 16ಕ್ಕೆ ಇಬ್ರಾಹಿಂ ತಮ್ಮ ತೀರ್ಮಾನ ತಿಳಿಸಲಿದ್ದಾರೆ ಎಂದು ಅವರ ಆಪ್ತ ವಲಯ ಹೇಳುತ್ತಿದೆ. ಈ ಬಗ್ಗೆ ಸ್ವತಃ ಇಬ್ರಾಹಿಂ ಖುದ್ದು ಏನೂ ಹೇಳಿಲ್ಲ. ಅ.16ಕ್ಕೆ ಸಭೆ ಕರೆದಿದ್ದಾರೆ, ಅದರಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಕೆಲವು ಆಪ್ತರು ಹೇಳುತ್ತಿದ್ದಾರೆ. ಆದರೆ ಯಾರು ಸಭೆ ಕರೆಯುತ್ತಾರೆ ಮತ್ತು ಅಕ್ಟೋಬರ್ 16ರ ಗುಟ್ಟೇನು ಎಂದು ತಿಳಿದಿಲ್ಲ.
ರವಿವಾರ ಸಭೆ
ಮೈತ್ರಿ ಹಾಗೂ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ಮಾಜಿ ಸಿಎಂ ಕುಮಾರಸ್ವಾಮಿ ಅ.1ರಂದು ಬಿಡದಿಯ ತಮ್ಮ ತೋಟದ ಮನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರು, ಜಿಲ್ಲಾ ಮಟ್ಟದ ಮುಖಂಡರು, ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳ ಸಭೆ ಕರೆದಿದ್ದಾರೆ. ಈ ಸಭೆಗೆ ಇಬ್ರಾಹಿಂ ಅವರನ್ನೂ ಆಹ್ವಾನಿಸಲಾಗುತ್ತದೆ. ಅವರಿಗೆ ಬೇಸರ ಇರಬಹುದು. ಆದರೆ “ದೊಡ್ಡವರು’ ಸರಿ ಮಾಡುತ್ತಾರೆ. ಕುಮಾರಸ್ವಾಮಿ ಮಾತನಾಡಿಸಿದರೆ ಎಲ್ಲವೂ ಸರಿ ಹೋಗುತ್ತದೆ. ಈ ಹಂತದಲ್ಲಿ ಸಾಹೇಬರು ಪಕ್ಷ ಬಿಡಲಿಕ್ಕಿಲ್ಲ ಎಂದು ವಿಧಾನಪರಿಷತ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.