Udupi: ಉಡುಪಿಯಲ್ಲಿ ಪರ್ಯಾಯ ಮಹೋತ್ಸವ – ವಾಹನ ಸಂಚಾರದಲ್ಲಿ ಬದಲಾವಣೆ


Team Udayavani, Jan 12, 2024, 1:23 AM IST

puthige shree

ಉಡುಪಿ: ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ಜನವರಿ 17, 18ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿರುವುದರಿಂದ ಸಾರ್ವಜನಿಕರಿಗೆ ಹಾಗೂ ಭಕ್ತರ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಈ ಕೆಳಕಂಡ ರಸ್ತೆಗಳಿಗೆ ಬದಲಿ ಮಾರ್ಗ ಹಾಗೂ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ಜ. 17ರಂದು ಸಂಜೆ 4 ಗಂಟೆಯಿಂದ ಮಂಗಳೂರಿನಿಂದ ಉಡುಪಿ ಮತ್ತು ಮಣಿಪಾಲ ಕಡೆಗೆ ಹೋಗುವ ಎಲ್ಲ ಖಾಸಗಿ ಬಸ್‌ಗಳು ಸ್ವಾಗತಗೋಪುರ ರಸ್ತೆಯಲ್ಲಿ ಸಂಚರಿಸದೆ ರಾ.ಹೆ.-66 ಮೂಲಕ ಕರಾವಳಿ ಜಂಕ್ಷನ್‌-ಬನ್ನಂಜೆ-ಶಿರಿಬೀಡು-ಸಿಟಿ ಬಸ್‌ ನಿಲ್ದಾಣ ಐರೋಡಿಕರ್‌-ಸರ್ವಿಸ್‌ ಬಸ್‌ ನಿಲ್ದಾಣ- ಕಿದಿಯೂರು ಹೊಟೇಲ್‌ ಮೂಲಕ ಕೆಳಗೆ ಇಳಿದು ಶಿರಿಬೀಡು-ಬನ್ನಂಜೆ – ಕರಾವಳಿ ಜಂಕ್ಷನ್‌-ರಾ.ಹೆ. 66ರ ಮೂಲಕ ಮಂಗಳೂರಿಗೆ ಸಂಚರಿಸಬೇಕು.

ಜ. 17ರಂದು ಸಂಜೆ 4 ಗಂಟೆಯಿಂದ ಕುಂದಾಪುರ ಕಡೆಯಿಂದ ಉಡುಪಿಗೆ ಬರುವ ಎಲ್ಲ ಖಾಸಗಿ ಬಸ್‌ಗಳು ಸಂತೆಕಟ್ಟೆ- ಅಂಬಾಗಿಲು- ನಿಟ್ಟೂರು- ಕರಾವಳಿ ಜಂಕ್ಷನ್‌- ಬನ್ನಂಜೆ- ಶಿರಿಬೀಡು- ಸಿಟಿ ಬಸ್‌ ನಿಲ್ದಾಣ- ಐರೋಡಿ ಸರ್ವಿಸ್‌ ಬಸ್‌ ನಿಲ್ದಾಣ- ಕಿದಿಯೂರು ಹೊಟೇಲ್‌ ಮೂಲಕ ಕೆಳಗೆ ಇಳಿದು ಶಿರಿಬೀಡು- ಬನ್ನಂಜೆ ಕರಾವಳಿ ಜಂಕ್ಷನ್‌ ರಾ.ಹೆ. 66 ಮೂಲಕ ಕುಂದಾಪುರಕ್ಕೆ ಸಂಚರಿಸಬೇಕು.

ಜ. 17ರಂದು ಸಂಜೆ 4 ಗಂಟೆಯಿಂದ ಕಾರ್ಕಳ, ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಎಲ್ಲ ಖಾಸಗಿ ಬಸ್‌ಗಳು ಇಂದ್ರಾಳಿ-ಎಂಜಿಎಂ-ಕಡಿಯಾಳಿ-ಕಲ್ಸಂಕ- ಉಡುಪಿ ಸಿಟಿ ಬಸ್‌ ನಿಲ್ದಾಣಕ್ಕೆ ಬಂದು ಅಲ್ಲಿಂದ ತಿರುಗಿಸಿ ವಾಪಸ್‌ ಕಲ್ಸಂಕ ಎಂಜಿಎಂ ಇಂದ್ರಾಳಿ ಮೂಲಕ ಮಣಿಪಾಲ, ಕಾರ್ಕಳ ಕಡೆಗೆ ಸಂಚಾರ ಮಾಡಬೇಕು.

ಜ. 17ರಂದು ಸಂಜೆ 4ರಿಂದ ರಾಂಪುರ, ಕುಕ್ಕಿಕಟ್ಟೆ, ಮೂಡುಬೆಳ್ಳೆ ಕಡೆಯಿಂದ ಉಡುಪಿಗೆ ಬರುವ ಎಲ್ಲ ಖಾಸಗಿ ಬಸ್‌ಗಳು ಮಿಷನ್‌ ಕಾಂಪೌಂಡ್‌ನಿಂದ ಬಲಕ್ಕೆ ತಿರುಗಿ ಅಮ್ಮಣಿ ರಾಮಣ್ಣ-ಚಿಟಾ³ಡಿ ಜಂಕ್ಷನ್‌ನಿಂದ ಎಡಕ್ಕೆ ತಿರುಗಿ-ಬೀಡಿನಗುಡ್ಡೆ ಜಂಕ್ಷನ್‌-ಶಾರದಾ ಕಲ್ಯಾಣ ಮಂಟಪ ಜಂಕ್ಷನ್‌ ಎಡಕ್ಕೆ ತಿರುಗಿ-ಕಲ್ಸಂಕ-ಸಿಟಿ ಬಸ್‌ ನಿಲ್ದಾಣ ಐರೋಡಿಕರ್‌-ಸಿಟಿ ಬಸ್‌ ನಿಲ್ದಾಣಕ್ಕೆ ಬಂದು ಅನಂತರ ಅದೇ ರಸ್ತೆ ಮಾರ್ಗವಾಗಿ ವಾಪಸು ಸಂಚರಿಸಬೇಕು.

ಜ. 17ರಂದು ಸಂಜೆ 4 ಗಂಟೆಯಿಂದ ಮಲ್ಪೆ ಕಡೆಯಿಂದ ಉಡುಪಿಗೆ ಬರುವಂತಹ ಖಾಸಗಿ ಬಸ್‌ಗಳು ಆದಿಉಡುಪಿ-ಕರಾವಳಿ ಜಂಕ್ಷನ್‌ -ಬನ್ನಂಜೆ-ಶಿರಿಬೀಡು-ಐರೋಡಿಕರ್‌-ಸಿಟಿ ಬಸ್‌ ನಿಲ್ದಾಣಕ್ಕೆ ಬಂದು ವಾಪಸು ಶಿರಿಬೀಡು-ಬನ್ನಂಜೆ ಕರಾವಳಿ ಜಂಕ್ಷನ್‌ ಆದಿಉಡುಪಿ ಮಾರ್ಗವಾಗಿ ಮಲ್ಪೆ ಕಡೆಗೆ ಸಂಚರಿಸಬೇಕು.

ಜ. 17ರಂದು ಬುಕ್ಕಿಂಗ್‌ ಏಜೆಂಟ್‌ ಮತ್ತು ಬಸ್‌ ಕಂಪೆನಿಯವರು ರಾತ್ರಿ ಉಡುಪಿ ಸಿಟಿ ಒಳಗೆ ಪ್ರವೇಶ ಮಾಡದೇ ಕರಾವಳಿ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿ, ಇಳಿಸಬೇಕು.
ಪಾರ್ಕಿಂಗ್‌ ನಿಷೇಧಿತ ಸ್ಥಳಗಳು

ಜ. 17ರಂದು ಸಂಜೆ 6ರಿಂದ ಜ. 18ರ ಬೆಳಗ್ಗೆ 6ರ ವರೆಗೆ ಸ್ವಾಗತ ಗೋಪುರ, ಕಿನ್ನಿಮೂಲ್ಕಿ, ಗೋವಿಂದ ಕಲ್ಯಾಣ ಮಂಟಪ, ಜೋಡುಕಟ್ಟೆ, ಟಿ.ಎಂ.ಎ. ಪೈ ಆಸ್ಪತ್ರೆ, ಲಯನ್ಸ್‌ ಸರ್ಕಲ್‌, ಹಳೇ ಡಯಾನ ಸರ್ಕಲ್‌, ಮಿತ್ರ ಜಂಕ್ಷನ್‌, ತೆಂಕಪೇಟೆ, ರಥಬೀದಿ ರಸ್ತೆಯಲ್ಲಿ ಅಕ್ಕಪಕ್ಕ ವಾಹನ ಸಂಚಾರ ಮತ್ತು ಪಾರ್ಕಿಂಗ್‌ ನಿಷೇಧಿಸಲಾಗಿದೆ. ಕಲ್ಸಂಕ ಜಂಕ್ಷನ್‌ನಿಂದ ವಿದ್ಯೋದ್ಯಯ ಶಾಲೆಯವರೆಗೆ ರಸ್ತೆಯ ಬದಿಯ ಪಾರ್ಕಿಂಗ್‌ ನಿಷೇಧಿಸಲಾಗಿದೆ. ಜ. 17 ರಂದು ಸಂಜೆ 6 ಗಂಟೆಯಿಂದ ಜ. 18ರ ಬೆಳಗ್ಗೆ 6 ಗಂಟೆಯ ವರೆಗೆ ನಾಗಬನಕ್ರಾಸ್‌ ನಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಕುಂಜೂರು ಎಲೆಕ್ಟ್ರಿಕಲ್ಸ್‌ನಿಂದ ಗೀತಾಂಜಲಿ ರಸ್ತೆಯ ವರೆಗೆ, ಸರ್ವಿಸ್‌ ಬಸ್‌ ನಿಲ್ದಾಣದ ಪೊಲೀಸ್‌ ಔಟ್‌ ಪೋಸ್ಟ್‌ನಿಂದ ಕವಿ ಮುದ್ದಣ ರಸ್ತೆಯವರೆಗೆ, ವಿಷ್ಣು ಫ್ಲವರ್‌ ಸ್ಟಾಲ್‌ನಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಭಾಸ್ಕರ ವಿಹಾರ್‌ ರಸ್ತೆಯಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಕಲ್ಸಂಕದಿಂದ ಬಡಗುಪೇಟೆ ರಸ್ತೆಯವರೆಗೆ, ಸೌತ್‌ ಶಾಲೆಯ ಬಳಿ ವೆಂಕಟರಮಣ ದೇವಸ್ಥಾನಕ್ಕೆ ಹೋಗುವ ರಸ್ತೆಯವರೆಗೆ, ಜೋಡುಕಟ್ಟೆಯಿಂದ ಬ್ರಹ್ಮಗಿರಿಗೆ ಹೋಗುವ ರಸ್ತೆಯ ಬೇತಲ್‌ ಚರ್ಚ್‌ ಬಳಿ, ಎಲ್‌ಐಸಿ ರಸ್ತೆಯ ಸಿಂಡಿಕೇಟ್‌ ಟವರ್‌ ಬಳಿ, ಅಲಂಕಾರ್‌ ಟಾಕೀಸ್‌ ರಸ್ತೆಯ ಬಳಿ, ಮಿಷನ್‌ ಆಸ್ಪತ್ರೆಯಿಂದ ಲಯನ್ಸ್‌ ಸರ್ಕಲ್‌ ಬರುವ ರಸ್ತೆಯಲ್ಲಿ ಮಿಷನ್‌ ಆಸ್ಪತ್ರೆ ಎದುರು, ಅಮ್ಮಣಿ ರಾಮಣ್ಣ ಹಾಲ್‌ ಎದುರಿನ ಪಿಪಿಸಿ ಕಾಲೇಜಿಗೆ ಹೋಗುವ ರಸ್ತೆ, ಟ್ರಿನಿಟಿ ಐಟಿಐ ಕಾಲೇಜಿನ ಎದುರಿನಿಂದ ಸೌತ್‌ ಶಾಲೆಗೆ ಹೋಗುವ ರಸ್ತೆ, ಟ್ರಿನಿಟಿ ಕಾಲೇಜ್‌ ಎದುರು ಹಾಗೂ ಬೀಡಿನಗುಡ್ಡೆಯಿಂದ ವೆಂಕಟರಮಣ ದೇವಸ್ಥಾನಕ್ಕೆ ಬರುವ ರಸ್ತೆಯ ಬೀಡಿನಗುಡ್ಡೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.

 

ಟಾಪ್ ನ್ಯೂಸ್

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

4(1

Manipal: ನಮ್ಮ ಸಂತೆಯಲ್ಲಿ ಜನ ಸಾಗರ

Namma-SANTHE-1

Manipal: ನಮ್ಮ ಸಂತೆಗೆ ಎರಡನೇ ದಿನವೂ ಅಭೂತಪೂರ್ವ ಸ್ಪಂದನೆ: ಇಂದೇ ಕೊನೆಯ ದಿನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.