ಜಾಗ್ರೇಬ್ ಓಪನ್ ಕುಸ್ತಿ ಅಮಾನ್ ಸೆಹ್ರಾವತ್ಗೆ ಚಿನ್ನ
Team Udayavani, Jan 12, 2024, 12:18 AM IST
ಜಾಗ್ರೇಬ್: ಭಾರತದ ಕುಸ್ತಿಪಟು ಅಮಾನ್ ಸೆಹ್ರಾವತ್ ಜಾಗ್ರೇಬ್ ಓಪನ್ ರ್ಯಾಂಕಿಂಗ್ ಸರಣಿ ಕುಸ್ತಿ ಕೂಟದ ಪಂದ್ಯದಲ್ಲಿ ಚೀನದ ವಿಶ್ವದ ಏಳನೇ ರ್ಯಾಂಕಿನ ವಾನ್ಹಾವೊ ಝೊ ಅವರನ್ನು 10-0 ಅಂತರದಿಂದ ಉರುಳಿಸಿ ಚಿನ್ನದ ಪದಕ ಗೆದ್ದರು.
ತಾಂತ್ರಿಕವಾಗಿ ಶ್ರೇಷ್ಠ ಗುಣಮಟ್ಟದ ಆಟದ ಪ್ರದರ್ಶನ ನೀಡಿದ ಸೆಹ್ರಾವತ್ ಅವರು ಹಲವು ಸಮಸ್ಯೆಗಳಿಂದ ಒದ್ದಾಡುತ್ತಿರುವ ಭಾರತೀಯ ಕುಸ್ತಿ ಸಮುದಾಯದಲ್ಲಿ ಹೊಸ ಬೆಳಕನ್ನು ತಂದರು. ನೂತನವಾಗಿ ಆಯ್ಕೆಯಾದ ಫೆಡರೇಶನ್ನ ಸದಸ್ಯರ ಅಮಾನತು, ಕಿರಿಯ ಕುಸ್ತಿಪಟುಗಳ ಪ್ರತಿಭಟನೆಯಿಂದ ಕುಸ್ತಿ ರಂಗ ಸಮಸ್ಯೆಯಿಂದ ಒದ್ದಾಡುತ್ತಿದೆ. ಭಾರತೀಯ ಕುಸ್ತಿ ಫೆಡರೇಶನ್ ಅಮಾನತುಗೊಂಡಿದ್ದರಿಂದ ಭಾರತೀಯ ತಂಡವು ಯುನೈಟೆಡ್ ವಿಶ್ವ ಕುಸ್ತಿ (ಯುಡಬ್ಲ್ಯುಡಬ್ಲ್ಯು) ಅಡಿ ಸ್ಪರ್ಧಿಸುತ್ತಿದೆ.
ಟರ್ಕಿಯ ಮುಹಮ್ಮತ್ ಕರಾವುಸ್ ಅವರನ್ನು 15-4 ಅಂಕಗಳಿಂದ ಉರುಳಿಸಿ ಶುಭಾರಂಭ ಮಾಡಿದ್ದ 13ನೇ ರ್ಯಾಂಕಿನ ಅಮಾನ್ ಮುಂದಿನ ಹೋರಾಟದಲ್ಲಿ ಅಮೆರಿಕದ ರಿಚರ್ಡ್ಸ್ ಜಾನೆ ರಿಯಿ ರೋಡ್ಸ್ ಅವರನ್ನು ಕೆಡಹಿ ಸೆಮಿಫೈನಲ್ ಹಂತಕ್ಕೇರಿದರು. ಅಂತಿಮ ನಾಲ್ಕರ ಸೆಣಸಾಟದಲ್ಲಿ ಜಾರ್ಜಿಯದ ರಾಬರ್ಟಿ ದಿಂಗಸ್ವಿಲಿ ಅವರನ್ನು 11-0 ಅಂತರದಿಂದ ನೆಲಕ್ಕುರುಳಿಸಿದ ಅಮಾನ್ ಚಿನ್ನದ ಹೋರಾಟದಲ್ಲಿ ಚೀನದ ಝೊ ಅವರನ್ನು ಸುಲಭವಾಗಿ ಮಣಿಸಿ ಚಿನ್ನಕ್ಕೆ ಮುತ್ತಿಟ್ಟರು.
ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಮತ್ತು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಜಯಿಸಿದ್ದ ದೀಪಕ್ ಪೂನಿಯ 86 ಕೆ.ಜಿ. ವಿಭಾಗದಲ್ಲಿ ಪದಕ ಸುತ್ತಿಗೇರಲು ವಿಫಲರಾಗಿದ್ದಾರೆ. ಅವರು ಮೊದಲ ಸುತ್ತಿನಲ್ಲಿಯೇ ಕಜಾಕ್ಸ್ಥಾನದ ಅಜಮತ್ ದೌಲೆಟ್ಬೆಕೋವ್ ಅವರಿಗೆ ಶರಣಾಗಿ ಹೊರಬಿದ್ದರು. ರಿಪಚೇಜ್ ಸುತ್ತಿನಲ್ಲಿ ಅವರು ಮೊದಲ ಹೋರಾಟದಲ್ಲಿ ಗೆದ್ದರೂ ಇನ್ನೊಂದರಲ್ಲಿ ಸೋತು ಪದಕ ಗೆಲ್ಲಲು ವಿಫಲರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.