Amasebailu: ಪೋಕ್ಸೋ ಆರೋಪಿ ಬಂಧನ; ಜೂ.21ರ ತನಕ ನ್ಯಾಯಾಂಗ ಬಂಧನ
Team Udayavani, Jun 7, 2024, 10:05 PM IST
ಸಿದ್ದಾಪುರ: ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣದ ಆರೋಪಿ ಶಂಕರನಾರಾಯಣ ಗ್ರಾಮದ ಶ್ರೇಯಾ ನಾಯ್ಕನನ್ನು ಪೊಲೀಸರು ಶುಕ್ರವಾರ ಸಿದ್ದಾಪುರದಲ್ಲಿ ಬಂದಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಜೂ.21ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.ಆರೋಪಿ ಶ್ರೇಯಾ ನಾಯ್ಕ ವಿರುಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಮೇ 18ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು.ಅಂದಿನಿಂದ ಆರೋಪಿಯು ತಲೆ ಮರೆಸಿಕೊಂಡಿದ್ದು, ಪೊಲೀಸರು ತಂಡ ರಚಿಸಿಕೊಂಡು ಆರೋಪಿಗಾಗಿ ಬಲೆ ಬಿಸಿದರು.
ಶಿವಮೊಗ್ಗದಿಂದ ಬಸ್ನಲ್ಲಿ ಬರುತ್ತಿರುವ ಖಚಿತ ಮಾಹಿತಿಯ ಮೇರೆಗೆ ಸಿದ್ದಾಪುರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಕ್ಕೆ ಹಾಜರು ಪಡಿಸಿದರು.
ಪ್ರಕರಣ: ಆರೋಪಿ ಶಂಕರನಾರಾಯಣ ಗ್ರಾಮದ ಶ್ರೇಯಾ ನಾಯ್ಕ ಅಮಾಸೆಬೈಲು ನಿವಾಸಿಯಾಗಿರುವ ಪಿಯುಸಿ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡು ಪ್ರೀತಿಯ ನಾಟಕವಾಡುತ್ತಿದ್ದನ್ನು. ಅಪ್ರಾಪೆಯನ್ನು ಮದುವೆಯಾಗುದ್ದಾಗಿ ನಂಬಿಸಿ, ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಸುತ್ತಾಡಿಸುತ್ತಿದ್ದನ್ನು. ಪುಸಲಾಯಿಸಿ ತನ್ನ ಕಾರಿನಲ್ಲಿ ಅಮಾಸೆಬೈಲುನಿಂದ ಹಾಲಾಡಿ ರಸ್ತೆಯ ಹೆಗ್ಗೊàಡ್ಲು ಎಂಬಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಕಾರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿದನ್ನು. ಅರೆ ಬೆತ್ತಲೆ ಪೋಟೋವನ್ನು ಮೊಬೈಲ್ನಲ್ಲಿ ಕ್ಲಿಕ್ಸಿಕೊಂಡು, ನಿರಂತರವಾಗಿ ಅತ್ಯಚಾರ ನಡೆಸುತ್ತಿದ್ದನ್ನು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.