UNO: ಜಗತ್ತಿನಲ್ಲಿ ಈಗಲೂ ದ್ವಂದ್ವ ನಿಲುವು: ಜೈಶಂಕರ್
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವ್ಯವಸ್ಥೆ ಬಗ್ಗೆ ಸಚಿವ ಜೈಶಂಕರ್ ಟೀಕೆ
Team Udayavani, Sep 24, 2023, 10:19 PM IST
ನ್ಯೂಯಾರ್ಕ್: ಜಗತ್ತಿನಲ್ಲಿ ಈಗಲೂ ಹಲವು ರಾಷ್ಟ್ರಗಳು ದ್ವಂದ್ವ ನಿಲುವುಗಳನ್ನು ಹೊಂದಿವೆ. ಉನ್ನತ ಹಾಗೂ ಪ್ರಭಾವಯುತ ಸ್ಥಾನಗಳಲ್ಲಿ ಇದ್ದರೂ ವ್ಯವಸ್ಥೆಯಲ್ಲಿ ಬದಲಾವಣೆ ತರಲು, ಅದಕ್ಕೆ ಒಗ್ಗಲು ಸಿದ್ಧರಿಲ್ಲ. ಬದಲಾವಣೆ ಸಾಧ್ಯವಾಗದಂತೆ ಅವುಗಳು ಪ್ರಭಾವ ಬೀರುತ್ತಿವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಆರೋಪಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಆಬ್ಸರ್ವರ್ ರಿಸರ್ಚ್ ಫೌಂಡೇಷನ್, ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಕಚೇರಿ ಜತೆಗೂಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಹಾಗೂ ಐತಿಹಾಸಿಕವಾಗಿ ಪ್ರಬಲ ಸ್ಥಾನಗಳನ್ನು ಹೊಂದಿರುವವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿದ್ದಾರೆ.
ಅವರು ಜಗತ್ತಿನ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬದಲಾವಣೆ ಆಗಬೇಕು ಎಂಬ ರಾಜಕೀಯ ಒತ್ತಾಸೆಗಿಂತ ಆ ರೀತಿ ಆಗಲೇಬಾರದು ಎಂಬ ಒತ್ತಡಗಳೂ ಹೆಚ್ಚಿವೆ ಎಂದು ಸಚಿವರು ಹೇಳಿದ್ದಾರೆ. ಕೊರೊನಾ ಕಾಲದಲ್ಲಿ ಜಗತ್ತಿನಲ್ಲಿ ದಕ್ಷಿಣದ ರಾಷ್ಟ್ರಗಳಿಗೆ ಈ ಮನೋಭಾವ ಹೆಚ್ಚು ಅನುಭವಕ್ಕೆ ಬಂದಿದೆ ಎಂದರು.
ಜಗತ್ತಿನ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು ಎಂದು ಮುಖ ಸ್ತುತಿಗಾಗಿ ಹೇಳಿಕೊಳ್ಳುತ್ತಾರೆ. ಯಥಾಸ್ಥಿತಿಯಲ್ಲಿ ಅವರಿಗೆ ಅಂಥ ಇಚ್ಛಾಶಕ್ತಿಯೇ ಇಲ್ಲ. ಜಗತ್ತು ಈಗಲೂ ದ್ವಂದ್ವ ನೀತಿಯನ್ನೇ ಹೊಂದಿದೆ ಎಂದಿದ್ದಾರೆ ಜೈಶಂಕರ್. ನವದೆಹಲಿಯಲ್ಲಿ ಸೆ.9, 10ರಂದು ಮುಕ್ತಾಯವಾದ ಜಿ20 ರಾಷ್ಟ್ರಗಳ ಸಮ್ಮೇಳನದಲ್ಲಿ ಸಾಂಸ್ಕೃತಿಕವಾಗಿ ಸಮನ್ವಯ ಸಾಧಿಸಲಾಗಿತ್ತು ಎಂಬುದಕ್ಕೆ ಸಿರಿಧಾನ್ಯಗಳನ್ನು ಯಶಸ್ವಿಯಾಗಿ ಆಹಾರ ಪದ್ಧತಿಯಲ್ಲಿ ಅಳವಡಿಸಲಾಗಿರುವುದೇ ಸಾಕ್ಷಿ ಎಂದೂ ಅವರು ಹೇಳಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala: ತಂಜಾವೂರು ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ಅಪಘಾತ: ನಾಲ್ವರು ಮೃತ್ಯು
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ
Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಬಂಧನ
Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್ ರದ್ದು: ಸುಪ್ರೀಂ ಕೋರ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.