ಸದ್ಯವೇ 1 ಲಕ್ಷ ದಾಟಲಿದೆ ಅಮೆರಿಕದ ಸಾವಿನ ಸಂಖ್ಯೆ
Team Udayavani, May 17, 2020, 12:47 PM IST
ಲಾಸ್ ವೇಗಸ್: ಅಮೆರಿಕದಲ್ಲಿ ಕೋವಿಡ್‌ಗೆ ಬಲಿಯಾಗುವವರ ಸಂಖ್ಯೆ ಮುಂದಿನ ವಾರಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಮತ್ತು ಜೂನ್ 1ರ ಮೊದಲು 1,00,000 ಹಾಗೂ ಆ. 4ರ ಮೊದಲು 1,47,000 ಗಡಿಯನ್ನು ದಾಟಬಹುದೆಂದು ಸಿ.ಡಿ.ಸಿ. ನಿರ್ದೇಶಕ ಡಾ| ರಾಬರ್ಟ್ ರೆಡ್‌ಫಿಲ್ಡ್ ಹೇಳಿದ್ದಾರೆ.
ಅಮೆರಿಕದಲ್ಲಿ ಈಗ 15 ಲಕ್ಷದ ಆಸುಪಾಸು ಸೋಂಕು ಪೀಡಿತರಿದ್ದು 89,000ಕ್ಕಿಂತ ಅಧಿಕ ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಆದರೆ ಇಂಥ ನಿರಾಶಾದಾಯಕ ವಾತಾವರಣದ ನಡುವೆಯೂ ಒಂದು ಆಶಾಕಿರಣ ಗೋಚರಿಸಿದೆ. ಪ್ರತಿದಿನ ವರದಿಯಾಗುತ್ತಿರುವ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಜಾರ್ಜಿಯ ಮತ್ತು ದಕ್ಷಿಣ ಕೆರೊಲಿನ ಸಹಿತ 28 ರಾಜ್ಯಗಳಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಆದರೆ ಟೆಕ್ಸಾಸ್‌ನಲ್ಲಿ ಮಾತ್ರ ಪ್ರತಿದಿನ ಶೇ. 20ರಿಂದ 30ರಷ್ಟು ಹೆಚ್ಚಳವಾಗುತ್ತಿದೆ. 7 ರಾಜ್ಯಗಳಲ್ಲಿ ಈಗಲೂ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದ್ದರೆ 15 ರಾಜ್ಯಗಳಲ್ಲಿ ಸ್ಥಿರವಾಗಿದೆ. ಕೋವಿಡ್‌ನಿಂದ ಅತೀ ಹೆಚ್ಚು ಬಾಧಿತವಾಗಿರುವ ನ್ಯೂಯಾರ್ಕ್ ಸ್ಟೇಟ್‌ನ ಸೆಂಟ್ರಲ್ ನ್ಯೂಯಾರ್ಕ್, ಫಿಂಗರ್ ಲೇಕ್ಸ್, ಮೊಹಾಕ್ ವ್ಯಾಲಿ, ನಾರ್ತ್ ಕಂಟ್ರಿ ಮತ್ತು ಸದರ್ನ್ ಟಿಯರ್‌ವಲಯಗಳಲ್ಲಿ ಶುಕ್ರವಾರದಿಂದ ಹಂತಗಳಲ್ಲಿ ಮರು ತೆರೆಯುವಿಕೆ ಆರಂಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ: ನರಿಂಗಾನ ಕಂಬಳ್ಳೋತ್ಸವದಲ್ಲಿ ಸಿಎಂ
ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ
ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ
ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್ ಸಿಂಗ್
Suvarna Bharathi Mahotsava: ಶೃಂಗೇರಿಯಲ್ಲಿ ದಾಖಲೆ ಬರೆದ ತ್ರಿವೇಣಿ ಸ್ತೋತ್ರ ಪಠಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.