ಅಮೆರಿಕ: ಲಾಕ್‌ಡೌನ್ ಹಿಂದೆಯೇ ಹೊಸ ಸವಾಲು
Team Udayavani, May 5, 2020, 3:29 PM IST
ವಾಷಿಂಗ್ಟನ್: ಕೋವಿಡ್ 19 ಎಂಬ ಮಹಾಮಾರಿಯು ಅಮೆರಿಕದಲ್ಲಿ ಕೇವಲ ಆರ್ಥಿಕ ಚಟುವಟಿಕೆಯನ್ನಷ್ಟೆ ಅಪಾಯಕ್ಕೆ ತಳ್ಳಿಲ್ಲ, ಅದು ದೊಡ್ಡ ಸಂಖ್ಯೆಯಲ್ಲಿ ಜನರ ಆರೋಗ್ಯದ ಮೇಲೂ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
ಆರ್ಥಿಕ ಚಟುವಟಿಕೆಗಳನ್ನು ತ್ವರಿತವಾಗಿ ಮರುಪ್ರಾರಂಭಿಸುವ ಪ್ರಯತ್ನಗಳಲ್ಲಿ ಎರಡು ನೆಲೆಯಲ್ಲಿ ಯೋಚಿಸಬೇಕಿದೆೆ. ಒಂದು ಕೋವಿಡ್ ವೈರಸ್‌ನ ಹಾನಿಯನ್ನು ಸಹಿಸುತ್ತಲೇ ಮುಂದುವರಿಯುವುದು, ಇನ್ನೊಂದು ಅನಾರೋಗ್ಯ ಸವಾಲು ಇದ್ದರೂ ಆರ್ಥಿಕ ಚಟುವಟಿಕೆ ಆರಂಭಿಸುವುದು.
ಕೋವಿಡ್ ನಿಂದಾಗಿ ಆರ್ಥಿಕವಾಗಿ ದುರ್ಬಲವಾದ ಕಂಪೆನಿಗಳು ಲಕ್ಷಾಂತರ ಅಮೆರಿಕನ್ನರನ್ನು ಉದ್ಯೋಗದಿಂದ ತೆಗೆದಿವೆ. ಉದ್ಯೋಗಕ್ಕಾಗಿ ಅವರೆಲ್ಲರೂ ತಮ್ಮ ಆರೋಗ್ಯವನ್ನು ಪಣವಾಗಿಟ್ಟುಕೊಂಡು ತಮ್ಮ ಸಂಸ್ಥೆಗಳನ್ನು ಮತ್ತೆ ಕಾರ್ಯಾರಂಭ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಇವು ಅವರ ಆರೋಗ್ಯದ ಮೇಲೆ ದುಬಾರಿ ಪರಿಣಾಮ ಬೀರಬಹುದು.
ವೈರಸ್ ಸೋಂಕು ಹರಡುವುದನ್ನು ತಡೆಯುವ, ಪರೀಕ್ಷಾ ಸಾಮರ್ಥ್ಯ ಹಾಗೂ ಸೂಕ್ತ ಚಿಕಿತ್ಸೆ ದೇಶದಲ್ಲಿಲ್ಲ. ಆದರೂ ಬಹುತೇಕ ಕಂಪೆನಿಗಳು ಹಾಗೂ ಉದ್ಯಮಗಳು ಪುನಾರಂಭಕ್ಕೆ ಯೋಚಿಸುತ್ತಿವೆ. ಇದಕ್ಕೆ ಅಧ್ಯಕ್ಷ ಟ್ರಂಪ್ ಸಹಮತವೂ ಇದೆ. ಆದರೆ ಆರ್ಥಿಕವಾಗಿ ಸಶಕ್ತರು ಮನೆಯಿಂದಲೇ ಕೆಲಸ ಮಾಡಿ ಸೋಂಕಿನಿಂದ ದೂರ ಇರಬಹುದು. ಆದರೆ ಕಡಿಮೆ ಸಂಬಳ ಪಡೆಯುವವರು, ಕೆಲಸಕ್ಕಾಗಿ ಕಚೇರಿಗೆ ಹೋಗಲೇಬೇಕಾದ ಅನಿವಾರ್ಯತೆ ಇರುವವರು ಆರೋಗ್ಯವನ್ನು ಪಣವಿಡಲೇಬೇಕಿದೆ. ಇದಕ್ಕೆ ಸಿದ್ಧರಿಲ್ಲದಿದ್ದರೆ ಉದ್ಯೋಗವನ್ನು ಕಳೆದುಕೊಳ್ಳಬೇಕಾದೀತು. ಈ ಕಷ್ಟಕ್ಕೆ ಸಿಲುಕಿರುವವರು ಕಾರ್ಮಿಕ ಸಮುದಾಯವೇ ಹೆಚ್ಚು, ಅದರಲ್ಲೂ ಲ್ಯಾಟಿನ್ ಅಮೆರಿಕನ್ ರಾಷ್ಟ್ರದವರೇ ತುಸು ಹೆಚ್ಚು.
ಜಾರ್ಜಿಯಾ ಮತ್ತು ದಕ್ಷಿಣ ಕೆರೊಲಿನಾದ ಗವರ್ನರ್‌ಗಳು ಕೆಲವು ವ್ಯವಹಾರಗಳನ್ನು ಪುನರಾರಂಭಿಸಲು ಅನುಮತಿಸಿದ್ದಾರೆ. ಇಲ್ಲಿ ಸೋಂಕು ಈಗಲೂ ಅಪಾಯದ ಮಟ್ಟದಲ್ಲಿದೆ. ಆದರೂ ವ್ಯವಹಾರ ಪುನರಾರಂಭಿಸುವ ನಿರ್ಧಾರವು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ ಆರೋಗ್ಯತಜ್ಞರು. ಜಾರ್ಜಿಯಾ ಶುಕ್ರವಾರ ಹೇರ್ ಸೆಲೂನ್, ಜಿಮ್ ಮುಂತಾದವುಗಳನ್ನು ತೆರೆಯಲು ಅವಕಾಶ ನೀಡಿದೆ. ರೆಸ್ಟೋರೆಂಟ್‌ಗಳಿಗೆ ಅನುಮತಿ ಇದ್ದರೂ ತೆರೆದಿಲ್ಲ ; ಮುಂದೆ ತೆರೆಯಬಹುದು. ಕೊಲೊರಾಡೊ, ಮಿನ್ನೆಸೊಟ, ಮಿಸ್ಸಿಸ್ಸಿಪಿ ಮತ್ತು ಓಹಿಯೋ ಮುಂತಾದ ಕಡೆಗಳಲ್ಲೂ ಕೆಲವು ವ್ಯವಹಾರಗಳ ಆರಂಭಕ್ಕೆ ಸಮ್ಮತಿಸಲಾಗಿದೆ. ಹೆಚ್ಚಿನೆಡೆಗಳಲ್ಲಿ ಸಂಸ್ಥೆಯವರೇ ತೆರೆಯಲು ಹಿಂದೇಟು ಹಾಕುತ್ತಿದ್ದಾರೆ. ಸಣ್ಣ ವರ್ಗದ ಗ್ರಾಹಕರೂ ಇದೇ ಭಯದಲ್ಲಿದ್ದಾರೆ. ಆದರೆ ವ್ಯಾಪಾರ ವಹಿವಾಟು ನಡೆಸುವವರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಅನುಮತಿ ನೀಡಿದ ಮೇಲೂ ಬಾಗಿಲು ಮುಚ್ಚಿದರೆ ನಿರುದ್ಯೋಗ ಸೌಲಭ್ಯ ಸಿಗದು, ಇತ್ತ ವ್ಯಾಪಾರದ ಆದಾಯವೂ ಸಿಗದು ಎಂಬ ಸ್ಥಿತಿ ಅವರದ್ದು.
ಇತ್ತೀಚಿನ ಸಮೀಕ್ಷೆಯ ಪ್ರಕಾರ, ಈಗ ನಿರುದ್ಯೋಗಿಗಳಾದವರಲ್ಲಿ 1.50 ಲ. ಡಾಲರ್ ಅಥವಾ ಅದಕ್ಕಿಂತ ಹೆಚ್ಚು ಸಂಬಳ ಪಡೆಯುವವರಿಗಿಂತ 50 ಸಾವಿರ ಡಾಲರ್ ವೇತನ ಪಡೆಯುವವರು ದುಪ್ಪಟ್ಟಾಗಿದ್ದಾರೆ.
ಕಪ್ಪು ಮತ್ತು ಲ್ಯಾಟಿನ್ ಅಮೆರಿಕನ್ನರು ಉದ್ಯೋಗ ಕಳೆದುಕೊಂಡು ಬದುಕುವುದು ಕಷ್ಟ. ಯಾಕೆಂದರೆ ಅವರಿಗೆ ಸಿಗುವ ಸಂಬಳ ಕಡಿಮೆ. ಆರ್ಥಿಕವಾಗಿ ಸದೃಢರಲ್ಲ. ಎಷ್ಟೇ ಕಷ್ಟವಾದರೂ ಉದ್ಯೋಗ ಮಾಡಲೇಬೇಕು. ಫೆಡರಲ್ ರಿಸರ್ವ್ ಅಂಕಿ-ಅಂಶಗಳ ಪ್ರಕಾರ, ಸರಾಸರಿ ಕಾರ್ಮಿಕ ಕುಟುಂಬವೊಂದು 2016ರಲ್ಲಿ ಕೇವಲ 18,000 ಡಾಲರ್ ಸಂಪತ್ತನ್ನು ಹೊಂದಿತ್ತು. ಇದು ಹಿಸ್ಪಾನಿಕ್ ಕುಟುಂಬದಲ್ಲಿ 21,000 ಡಾಲರ್ ಆಸುಪಾಸಿನಲ್ಲಿತ್ತು. ಆದರೆ ಬೇರೆಯವರು ಇದಕ್ಕಿಂತ ಸುಮಾರು 10 ಪಟ್ಟು ಹೆಚ್ಚು ಆದಾಯ ಹೊಂದಿದ್ದರು. ಹೀಗೆ ಅಮೆರಿಕದ ಆರ್ಥಿಕ ಶಕ್ತರು ಮತ್ತು ಅಶಕ್ತರ ನಡುವಿನ ಅಂತರ ಹಾಗೂ ಪಕ್ಷಪಾತವು ದೊಡ್ಡ ಸವಾಲಾಗಬಹುದು. ಈಗ ಅದು ಮತ್ತಷ್ಟು ಪರಾಕಾಷ್ಠೆಗೇರಲಿದ್ದು, ಹೊಸ ಸಮಸ್ಯೆಗಳನ್ನೂ ಸೃಷ್ಟಿಸಬಹುದು ಎಂದಿದೆ
ದಿ ನ್ಯೂಯಾರ್ಕ್ ಟೈಮ್ಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.