USA: ಶಟ್‌ಡೌನ್‌ನತ್ತ ಅಮೆರಿಕ…
Team Udayavani, Sep 30, 2023, 8:02 PM IST
ಅಮೆರಿಕ ಮತ್ತೆ “ಶಟ್‌ಡೌನ್” ಭೀತಿಯಲ್ಲಿದೆ. ಹಣಕಾಸು ಮಸೂದೆ ವಿಚಾರದಲ್ಲಿ ಆಡಳಿತಾರೂಢ ಡೆಮಾಕ್ರಾಟ್ ಮತ್ತು ಪ್ರತಿಪಕ್ಷ ರಿಪಬ್ಲಿಕನ್ ನಡುವೆ ಉಂಟಾಗಿರುವ ಬಿಕ್ಕಟ್ಟು ಈಗ ಅಮೆರಿಕದ ಆಡಳಿತ ಯಂತ್ರವನ್ನೇ ಸ್ಥಗಿತಗೊಳಿಸುವ ಮಟ್ಟಕ್ಕೆ ತಲುಪಿದೆ. ಮಸೂದೆಗೆ ಸಹಿ ಬೀಳದಿದ್ದರೆ ಅ.1ರಿಂದಲೇ ದೊಡ್ಡಣ್ಣ ಮೌನವಾಗಲಿದ್ದಾನೆ.
ಏನಿದು ಶಟ್‌ಡೌನ್?
ಅ.1ರಿಂದ ಅಮೆರಿಕದಲ್ಲಿ ಹೊಸ ಹಣಕಾಸು ವರ್ಷ ಆರಂಭವಾಗುತ್ತದೆ. ಸೆ.30ರೊಳಗಾಗಿ ಸರ್ಕಾರವು ರಾಷ್ಟ್ರೀಯ ಮುಂಗಡ ಪತ್ರಕ್ಕೆ, ಹಣಕಾಸು ಮಸೂದೆಗಳಿಗೆ ಅಂಗೀಕಾರ ಪಡೆಯಬೇಕು. ಈಗ 12 ಮಸೂದೆಗಳು ಅಂಗೀಕಾರಕ್ಕೆ ಬಾಕಿಯಿದ್ದು, ಸರ್ಕಾರವು ಭಾರೀ ಪ್ರಮಾಣದಲ್ಲಿ ವೆಚ್ಚ ಕಡಿತ ಮಾಡದೇ ಇದ್ದರೆ ಈ ಮಸೂದೆಗಳಿಗೆ ನಾವು ಬೆಂಬಲ ನೀಡುವುದಿಲ್ಲ ಎಂದು ರಿಪಬ್ಲಿಕನ್ ಪಕ್ಷದ ಸಂಸದರು ಪಟ್ಟುಹಿಡಿದಿದ್ದಾರೆ. ಅ.1ರೊಳಗೆ ಮಸೂದೆಗಳಿಗೆ ಅಧ್ಯಕ್ಷ ಜೋ ಬೈಡೆನ್ ಅವರ ಸಹಿ ಬೀಳದೇ ಇದ್ದರೆ, ಅಮೆರಿಕದ ಆಡಳಿತ ಯಂತ್ರವೇ ಸ್ತಬ್ಧವಾಗಲಿದೆ.
ಏನೇನಾಗುತ್ತದೆ?
– ಹಣಕಾಸು ಮಸೂದೆ ಅಂಗೀಕಾರಗೊಳ್ಳದಿದ್ದರೆ ಭಾನುವಾರದಿಂದಲೇ ಸೈನಿಕರು ಸೇರಿದಂತೆ ಸಾವಿರಾರು ಸರ್ಕಾರಿ ಉದ್ಯೋಗಿಗಳು ವೇತನರಹಿತ ರಜೆಯಲ್ಲಿ ತೆರಳಬೇಕಾಗುತ್ತದೆ.
– ಷೇರು ಮತ್ತು ವಿನಿಮಯ ಆಯೋಗವು ತನ್ನೆಲ್ಲ ಚಟುವಟಿಕೆಗಳನ್ನೂ ಸ್ಥಗಿತಗೊಳಿಸಲಿವೆ. ನ್ಯಾಷನಲ್ ಪಾರ್ಕ್ ಸೇವೆಗಳು ಸ್ಥಗಿತಗೊಳ್ಳಲಿವೆ.
– ಸಾರಿಗೆ ವಲಯವು ದಿನಕ್ಕೆ 140 ದಶಲಕ್ಷ ಡಾಲರ್ ನಷ್ಟ ಅನುಭವಿಸಲಿದೆ.
– ಪಾಸ್‌ಪೋರ್ಟ್, ಶಸ್ತ್ರಾಸ್ತ್ರ ಲೈಸೆನ್ಸ್ ಸೇರಿದಂತೆ ಸರ್ಕಾರಿ ಸೇವೆಗಳಿಂದ ಜನ ವಂಚಿತರಾಗುತ್ತಾರೆ.
– ಹಣಕಾಸು ಮಾರುಕಟ್ಟೆ ಅಲ್ಲೋಲಕಲ್ಲೋಲವಾಗಲಿದೆ. ಪ್ರತಿ ವಾರವೂ ಆರ್ಥಿಕ ಪ್ರಗತಿ ಶೇ.0.2ರಷ್ಟು ಕುಸಿಯಲಿದೆ.
ಶಟ್‌ಡೌನ್ ಎಷ್ಟು ಸಮಯ?
ಬಜೆಟ್‌ಗೆ ಅನುಮೋದನೆ ದೊರೆಯದಿದ್ದರೆ ಅ.1ರಿಂದ ಅಮೆರಿಕ ಶಟ್‌ಡೌನ್ ಆಗುವುದು ಖಚಿತ. ಆದರೆ, ಇದು ಎಷ್ಟು ದಿನಗಳವರೆಗೆ ಮುಂದುವರಿಯುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ದೀರ್ಘಾವಧಿ ಶಟ್‌ಡೌನ್ ಮುಂದುವರಿದರೆ, ಇಡೀ ದೇಶ ಆರ್ಥಿಕ ಹಿಂಜರಿತಕ್ಕೆ ತುತ್ತಾಗಲಿದೆ. ಅದಕ್ಕೂ ಮುನ್ನವೇ ಸರ್ಕಾರವು ಪ್ರತಿಪಕ್ಷಗಳ ಸದಸ್ಯರ ಮನವೊಲಿಸಿ ಬಜೆಟ್‌ಗೆ ಅಂಗೀಕಾರ ಪಡೆದರೆ ಸಮಸ್ಯೆ ಪರಿಹಾರ ಸಾಧ್ಯ.
ಇದೇ ಮೊದಲಲ್ಲ
1976ರಿಂದ ಈವರೆಗೆ ಒಟ್ಟು 22 ಬಾರಿ ಇಂಥ ಪರಿಸ್ಥಿತಿ ಅಮೆರಿಕಕ್ಕೆ ಎದುರಾಗಿದೆ. ಈ ಪೈಕಿ 10 ಬಾರಿ ತೀವ್ರ ಸಮಸ್ಯೆ ಉಂಟಾಗಿ, ಸರ್ಕಾರಿ ನೌಕರರು ವೇತನವಿಲ್ಲದೇ ಮನೆಗಳಲ್ಲಿ ಕುಳಿತುಕೊಳ್ಳುವಂಥ ಸ್ಥಿತಿ ನಿರ್ಮಾಣವಾಗಿತ್ತು. ದೀರ್ಘಾವಧಿಯ ಶಟ್‌ಡೌನ್ ಆಗಿದ್ದು 2018 ಮತ್ತು 2019ರಲ್ಲಿ. ಆಗ ಅಧ್ಯಕ್ಷರಾಗಿದ್ದ ಟ್ರಂಪ್ ಅವರು ಗಡಿ ಗೋಡೆ ನಿರ್ಮಿಸಲು ಮುಂದಾಗಿದ್ದೇ ರಿಪಬ್ಲಿಕನ್ ಮತ್ತು ಡೆಮಾಕ್ರಾಟ್ ನಡುವಿನ ಕಿತ್ತಾಟ ತೀವ್ರಗೊಂಡು, ಬಜೆಟ್‌ಗೆ ಅನುಮೋದನೆ ವಿಳಂಬವಾಗಲು ಕಾರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.