Google ವಿರುದ್ಧ ಅಮೆರಿಕ ಮಹಿಳೆ ಕೇಸು- ಕುಸಿದ ಸೇತುವೆಯ ಮಾರ್ಗ ಮ್ಯಾಪ್ ತೋರಿಸಿದ ಆರೋಪ
ಮ್ಯಾಪ್ ನೋಡಿ ಕುಸಿದ ಸೇತುವೆಯಲ್ಲಿ ಕಾರು ಚಲಾಯಿಸಿ ಪತಿ ಸಾವು
Team Udayavani, Sep 21, 2023, 10:04 PM IST
ವಾಷಿಂಗ್ಟನ್: ಗೂಗಲ್ ಮ್ಯಾಪ್ ಹಿಂಬಾಲಿಸಿ ಕುಸಿದ ಸೇತುವೆ ಮೇಲೆ ಕಾರು ಚಲಾಯಿಸಿ ವ್ಯಕ್ತಿ ಸಾವಿಗೀಡಾಗಿದ್ದ. ಈ ಹಿನ್ನೆಲೆಯಲ್ಲಿ ಅಮೆರಿಕದ ಉತ್ತರ ಕೆರೊಲಿನಾದ ವ್ಯಕ್ತಿಯ ಪತ್ನಿ ಸಂಸ್ಥೆ ವಿರುದ್ಧ ದಾವೆ ಹೂಡಿದ್ದಾರೆ.
ವೇಕ್‌ಕೌಂಟಿ ಸುಪೀರಿಯರ್ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಾಗಿದೆ. ಆ ಪ್ರಕಾರ, 2022ರ ಸೆ. 30ರ ರಾತ್ರಿ ಫಿಲಿಪ್ ಪ್ಯಾಕ್ಸನ್ ಎಂಬ ವ್ಯಕ್ತಿ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಆ ಸ್ಥಳ ಅಪರಿಚಿತವಾದ ಹಿನ್ನೆಲೆಯಲ್ಲಿ ಮರಳಿ ಬರುವಾಗ ಗೂಗಲ್ ಮ್ಯಾಪ್ ನಿರ್ದೇಶನಗಳನ್ನು ಅನುಸರಿಸಿ ಅದು ತೋರಿಸಿದ ಮಾರ್ಗದಲ್ಲೇ ಕಾರು ಚಲಾಯಿಸಿದ್ದಾರೆ.
ಮ್ಯಾಪ್ ಕುಸಿದ ಸೇತುವೆ ಮೇಲೆ ಮಾರ್ಗ ತೋರಿಸಿದ್ದು, ಅದೇ ಮಾರ್ಗದಲ್ಲಿ ತೆರಳಿದಾಗ ಕಾರು ಕಂದಕಕ್ಕೆ ಉರುಳಿ ಫಿಲಿಪ್ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗೂಗಲ್‌ನ ಬೇಜವಾಬ್ದಾರಿಯೇ ಫಿಲಿಪ್ ಸಾವಿಗೆ ಕಾರಣವೆಂದು ಆರೋಪಿಸಿ ಆಕೆಯ ಪತ್ನಿ ಗೂಗಲ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ರಸ್ತೆ ಕುಸಿದ ಬಗ್ಗೆ ಹಲವು ವರ್ಷದ ಹಿಂದೆಯೇ ಜನರು ಗೂಗಲ್‌ಗೆ ಮಾಹಿತಿ ನೀಡಿದ್ದರೂ, ಸಂಸ್ಥೆ ಅದನ್ನು ಅಪ್‌ಡೇಟ್ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.