ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಯಾವ ಸಿನಿಮಾ ನಿಮಗಿಷ್ಟ ? ಆ ಚಿತ್ರದ ವೈಶಿಷ್ಟ್ಯವೇನು ?
Team Udayavani, Oct 20, 2019, 4:29 PM IST
ಅಮಿತಾಬ್ ಬಚ್ಚನ್ ಭಾರತೀಯ ಚಿತ್ರರಂಗದ ಮೇರು ಪ್ರತಿಭೆ. ಅವರ ನಟನೆಗೆ ಸರಿಸಾಟಿಯಿಲ್ಲ, ಹಿಂದಿ ಸಿನಿಮಾರಂಗದಲ್ಲಿ ಅವರು ಸೃಷ್ಟಿಸಿದ ಅಲೆ ಎಂದೂ ಮರೆಯಲೂ ಸಾಧ್ಯವಿಲ್ಲ. ಯಾವ ಪಾತ್ರ ನಿಡಿದರೂ ಅದಕ್ಕೆ ಜೀವ ತುಂಬಿ ಅಭಿನಯಿಸುವ ಅತ್ಯದ್ಭುತ ನಟ. ಈ ಹಿನ್ನಲೆಯಲ್ಲಿ ಉದಯವಾಣಿ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಯಾವ ಸಿನಿಮಾ ನಿಮಗಿಷ್ಟ ? ಆ ಚಿತ್ರದಲ್ಲಿ ಬಿಗ್ ಬಿ ಪಾತ್ರದ ವೈಶಿಷ್ಟ್ಯವೇನು ? ಎಂಬ ಪ್ರಶ್ನೆಯನ್ನು ಕೇಳಿತ್ತು. ಇದಕ್ಕೆ ಓದುಗರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ, ಶರಾಭಿ, ಶೋಲೆ ,ಸರ್ಕಾರ್ , ಪಾ, ಶಮಿತಾಬ್ , ಪಿಂಕ್ ಆನಂದ್ , ಮುಕಂದರ್ ಕಾ ಸಿಕಂದರ್ ,ಅಮರ್ ಅಕ್ಬರ್ ಅಕ್ಬರ್ ಆಂಥೋನಿ, ಝಂಝೀರ್ , ಶೇನ್ ಶಾ ,ನಮಕ್ ಹಲಾಲ್ ,ಅಗ್ನಿಪತ್ ಮುಂತಾದ ಹಲವು ಚಿತ್ರಗಳು ಅತ್ಯುತ್ತಮವಾದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ
ರವಿ ಪ್ರಕಾಶ್: ಭೂತ್ ನಾಥ್ ರಿಟರ್ನ್ಸ್ ಅತ್ಯುತ್ತಮ ಸಿನಿಮಾ . ಕಾರಣ ಅವರು ತೆಗೆದುಕೊಳ್ಳುವ ವಿಷಯ. ನಮ್ಮ ದೇಶದ ರಾಜಕಾರಣ ಮತ್ತದರಲ್ಲಿರುವ ಕೊಳಕನ್ನು ಸಂಪೂರ್ಣ ಅನಾವರಣ. ಮಾಡುತ್ತಾರೆ.
ಸೋಮಣ್ಣ: ಎರಡನೆಯ ಬಾರಿ ಬಂದ ದಿವಾರ್ ಸಿನಿಮಾ ಹಾಗೂ ‘ಪಾ’ ಸಿನಿಮಾ ಉತ್ತಮ ಮೌಲ್ಯಾಧರಿತ ಸಿನಿಮಾ .
ಮಹೇಶ್ ಕುಮಾರ್ : ಝಂಝೀರ್ ಸಿನಿಮಾ. ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಆಗಿ ಅವರು ಮೂಡಿಸಿದ ಛಾಪು ಬಾಲಿವುಡ್ ಹೊಸ ಅಧ್ಯಾಯ ಹುಟ್ಟು ಹಾಕಿತ್ತು.
ಮಹೇಂತ್ ಕುಮಾರ್ : ಶರಬಿ 1985ರ ಸಿನಿಮಾ. ಪ್ರಕಾಶ್ ಮೇಹರ್ ನಿರ್ದೇಶನದಲ್ಲಿ ಬಪ್ಪಿ ಲಹಿರಿ ಸಂಗೀತ, ಇಂದಿವಾರ್ ಸಾಹಿತ್ಯ ವನ್ನು ಒಳಗೊಂಡಿತ್ತು. ಚಿತ್ರದಲ್ಲಿ ಅಮಿತಾಬ್ ಬ್ಯುಸಿನೆನ್ ಮ್ಯಾನ್ ಮಗನಿಗೆ ತಂದೆಯ ಪ್ರೀತಿ ವಂಚಿತನಾಗಿ ಶರಾಭಿ ಆಗಿ ನಟನೆ ಮಾಡಿದ್ದು ಸೂಪರ್ ಎನಿಸಿತ್ತು.
ಅವಿಲ್ ಡೋರಾ: ನನ್ನ ಪ್ರಕಾರ ಅಮಿತಾ ಬಚ್ಚನ್ ನಟಿಸಿದ ಬಹುತೇಕ ಚಿತ್ರ ಗಳು ಡ್ಯುಯಲ್ ಹೀರೋ ಚಿತ್ರ ಗಳು. ರಾಜೇಶ್ ಖನ್ನಾ ,ಧರ್ಮೇಂದ್ರ, ಈವರುಗಳ ಜೊತೆ ನಟಿಸಿ ಸಿನಿಮಾ ಹಿಟ್ ಮಾಡಿಕೊಂಡವರು. ಇದರಿಂದ ಅವರನ್ನು ನಾನು ಹಿಟ್ ಹೀರೋ ಎಂದು ಪರಿಗಣಿಸುವುದಿಲ್ಲ.
ಪೂರ್ಣಪ್ರಜ್ಞಾ: ಸೂರ್ಯ ವಂಶಂ ತುಂಬಾ ಇಷ್ಟ. ಆದರೆ ‘ಪಾ’ ಚಿತ್ರದ ಅವರ ಪಾತ್ರ ನಿಜಕ್ಕೂ ತುಂಬಾ ಚಾಲೆಂಜ್ ಆಗಿರುವಂತದ್ದು, ಯಾಕೆಂದರೆ ಆ ಚಿತ್ರದ ಆರಂಭದಿಂದ ಅಂತ್ಯದವರೆಗೆ ಎಲ್ಲೂ ಅದು ಅಮಿತಾಭ್ ಬಚ್ಚನ್ ಎಂದು ತಿಳಿಯೋದಿಲ್ಲ. ಅಷ್ಟು ಅದ್ಬುತ ವಾದ ನಟನೆ ಮತ್ತು ಮೇಕಪ್.
ಕೃಷ್ಣ ಮೂರ್ತಿ : ಶೋಲೆ ಸಿನಿಮಾ ಗೆಳೆತನಕ್ಕಿಂತ ಮಿಗಿಲಾದ ಐಶ್ವರ್ಯ ಏನಿದೆ ನನ್ನ ಪಾಲಿಗೆ ಎಂದು ತೋರಿಸಿಕೊಟ್ಟ ಸಿನಿಮಾ
ಹರಿಪ್ರಸಾದ್ : ಪಿಂಕ್ ಚಿತ್ರದಲ್ಲಿ ಅಡ್ವೊಕೇಟ್ ಆಗಿ ಅಭಿನಯಿಸಿದ್ದು ಎಂದೂ ಮರೆಯಲಾಗುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.