ದೇಶದ 13 ನಿಲ್ದಾಣಗಳಿಗೆ “ಅಮೃತ” ಘಳಿಗೆ
Team Udayavani, Aug 6, 2023, 5:22 AM IST
ದೇಶದ ಸಂಚಾರ ವ್ಯವಸ್ಥೆಯ ಜಿವನಾಡಿಯಾಗಿರುವ ರೈಲ್ವೇ ಸಂಪರ್ಕ ಜಾಲದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಪೂರ್ತಿಗೊಂಡ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಹಲವು ಯೋಜನೆಗಳ ಪೈಕಿ “ಅಮೃತ ಭಾರತ ನಿಲ್ದಾಣ ಯೋಜನೆ” (ಎಬಿಎಸ್‌ಎಸ್) ಕೂಡ ಒಂದು. ಅದರ ಅನ್ವಯ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಕರ್ನಾಟಕದ 13 ಸೇರಿದಂತೆ 508 ರೈಲು ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಗೊಳಿಸುವ ಯೋಜನೆಗೆ ನವದೆಹಲಿಯಿಂದಲೇ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
27 ರಾಜ್ಯಗಳು ಮತ್ತು ನಿಲ್ದಾಣಗಳು
ರಾಜಸ್ಥಾನ ಮತ್ತು ಉತ್ತರ ಪ್ರದೇಶ-55, ಬಿಹಾರ-49, ಮಹಾರಾಷ್ಟ್ರ-44, ಪಶ್ಚಿಮ ಬಂಗಾಳ-37, ಮಧ್ಯಪ್ರದೇಶ-34, ಅಸ್ಸಾಂ-32, ಒಡಿಶಾ-25, ಪಂಜಾಬ್-22, ಗುಜರಾತ್ ಮತ್ತು ತೆಲಂಗಾಣ-21, ಜಾರ್ಖಂಡ್-20, ಆಂಧ್ರಪ್ರದೇಶ ಮತ್ತು ತಮಿಳುನಾಡು-18, ಹರ್ಯಾಣ-15
ರಾಜ್ಯದಲ್ಲಿ ಯಾವ ನಿಲ್ದಾಣಕ್ಕೆ ಎಷ್ಟು ಮೊತ್ತ ಮಂಜೂರು?
ಅಳ್ನಾವರ-17 ಕೋಟಿ ರೂ., ಘಟಪ್ರಭಾ-18.2 ಕೋಟಿ ರೂ., ಮಂಗಳೂರು ಜಂಕ್ಷನ್- 19.32 ಕೋಟಿ ರೂ, ಗೋಕಾಕ್ ರೋಡ್ -17 ಕೋಟಿ ರೂ., ಗದಗ-23.2 ಕೋಟಿ ರೂ., ಕೊಪ್ಪಳ-21.1 ಕೋಟಿ ರೂ., ಬಳ್ಳಾರಿ-16.7 ಕೋಟಿ ರೂ., ಅರಸೀಕೆರೆ-34.1 ಕೋಟಿ ರೂ., ಹರಿಹರ-25.2 ಕೋಟಿ ರೂ.
ಯೋಜನೆಯಲ್ಲಿ ಏನು ಇರಲಿದೆ?
– ಮುಂದಿನ ಹಲವು ವರ್ಷಗಳನ್ನು ಗಮನಿಸಿಕೊಂಡು ನಿಲ್ದಾಣಗಳ ನಿರಂತರ ಅಭಿವೃದ್ಧಿ.
– ಉಚಿತ ವೈ-ಫೈ, 5ಜಿ ಮೊಬೈಲ್ ಟವರ್ ಸ್ಥಾಪನೆ.
– ಪಾದಚಾರಿಗಳಿಗೆ ನಡೆಯಲು ಪ್ರತ್ಯೇಕ ವ್ಯವಸ್ಥೆ, ಸದ್ಯ ಇರುವ ಅನಗತ್ಯ ನಿರ್ಮಾಣಗಳ ತೆರವು, ಅಗಲವಾಗಿರುವ ರಸ್ತೆಗಳು.
– ವಾಹನಗಳನ್ನು ನಿಲ್ಲಿಸಲು ಬೇಕಾದ ವ್ಯವಸ್ಥೆ, ದಿವ್ಯಾಂಗರಿಗೆ ಅನುಕೂಲವಾಗುವಂತೆ ಆಸನ ಮತ್ತು ಇತರ ಸೌಲಭ್ಯಗಳು.
– ಪ್ರಯಾಣಿಕರಿಗಾಗಿ ಪ್ಲಾಟ್‌ಫಾರಂ, ವೆಯಿಂಟಿಂಗ್ ರೂಂ, ವಿಶ್ರಾಂತಿ ಗೃಹಗಳಲ್ಲಿ ಉತ್ತಮ ಆಸನ ವ್ಯವಸ್ಥೆ.
– ನಿಲ್ದಾಣಕ್ಕೆ ಚಾವಣಿ ನಿರ್ಮಾಣಕ್ಕೆ ಆದ್ಯತೆ.
– ಅತ್ಯಾಧುನಿಕ ಲಿಫ್ಟ್, ಎಸ್ಕಲೇಟರ್‌ಗಳು, ಹೆಚ್ಚಿನ ರೀತಿಯ ಶುಚಿತ್ವಕ್ಕೆ ಕ್ರಮ.
– ಅತ್ಯಾಧುನಿಕ ರೀತಿಯ ಶೌಚಾಲಯ.
– ಸ್ಥಳೀಯ ಸಂಸ್ಕೃತಿ, ಪರಂಪರೆ, ವಾಸ್ತುಶಿಲ್ಪದಿಂದ ಕೂಡಿದ ಕಟ್ಟಡಗಳು
1,309– ಗುರುತಿಸಲಾಗಿರುವ ನಿಲ್ದಾಣಗಳು
2022 ಡಿಸೆಂಬರ್- ಯೋಜನೆ ಆರಂಭವಾದದ್ದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.