![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 19, 2024, 1:08 AM IST
ಉಡುಪಿ: ಅಸ್ಸೆಟ್ ಮ್ಯಾನೇಜ್‌ಮೆಂಟ್ ಸೊಸೈಟಿ ಆಫ್ ಇಂಡಿಯಾ(ಎಎಂಎಸ್‌ಐ)ದ ಸಂಸ್ಥಾ ಪಕರ ದಿನಾಚರಣೆಯು ಜ. 17ರಂದು ಆನ್‌ಲೈನ್ ಮೂಲಕ ನಡೆಯಿತು.
ಒಎನ್‌ಜಿಸಿ-ತಿರುಪತಿ ಪವರ್ ಕಂಪೆನಿ ಲಿ.ಯ ಮ್ಯಾನೇಜಿಂಗ್ ಡೈರೆಕ್ಟರ್ ಸನಿಲ್ ನಂಬೂದಿರಿಪಾಡ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಎಎಂಎಸ್‌ಐ ಕಾರ್ಯಚಟುವಟಿಕೆ ಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಸ್ಸೆಟ್ ಮ್ಯಾನೇಜ್‌ಮೆಂಟ್ ಸಂಬಂಧಿಸಿದಂತೆ ತರಬೇತಿ ಹಾಗೂ ಅಪ್ಲಿಕೇಶನ್‌ಗಳ ಕೊರತೆಯಿದೆ. ಎಂಜಿನಿಯರಿಂಗ್ ಪದವೀಧರರ ಪಠ್ಯಕ್ರಮದಲ್ಲಿ ಅಸ್ಸೆಟ್ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ವಿಷಯಗಳನ್ನು ಸೇರಿಸಿ ತರಬೇತಿ ನೀಡುವಂತೆ ಆಗಬೇಕು. ಇದರಿಂದ ಪದವಿಯ ಅನಂತರದಲ್ಲಿ ಅವರಿಗೆ ಅಸ್ಸೆಟ್ ಮ್ಯಾನೇಜ್‌ಮೆಂಟ್ ವೃತ್ತಿಜೀವನದಲ್ಲಿ ಅಸ್ಸೆಟ್ ಮ್ಯಾನೇಜ್‌ಮೆಂಟ್ ಪ್ರಾಕ್ಟಿಸ್ ಸುಲಭವಾಗಲಿದೆ ಎಂದರು.
ಇನ್ನೋರ್ವ ಮುಖ್ಯಅತಿಥಿ ಆಸ್ಟ್ರೇಲಿಯಾದ ಎಸಿಇಎಎಂ ಸಹ ಸಂಸ್ಥಾಪಕ ಆಶಯ್ ಪ್ರಭು ಅವರು ಇನಾ#†ಸ್ಟ್ರಕ್ಚರ್ ಗ್ಯಾಪ್ ಆ್ಯಂಡ್ ಸ್ಟ್ರಟೆಜಿಕ್ ಅಸ್ಸೆಟ್ ಮ್ಯಾನೇಜ್‌ಮೆಂಟ್ ಬಗ್ಗೆ ಮಾತನಾಡಿದರು. ಲೈಫ್ಸೈಕಲ್ ಅಸ್ಸೆಟ್ ಮ್ಯಾನೇಜ್‌ಮೆಂಟ್ ಪರಿಕಲ್ಪನೆ, ಸ್ಮಾರ್ಟ್‌ಸಿಟಿ ಯೋಜನೆಗಳ ಸದ್ಬಳಕೆ, ಮೂಲಸೌಕರ್ಯ ಕುರಿತ ತರಬೇತಿ ಹಾಗೂ ಅಸ್ಸೆಟ್ ನಿರ್ವಹಣೆ ಬಗ್ಗೆ ತಿಳಿಸಿದರು. ಅಸ್ಸೆಟ್ ಮ್ಯಾನೇಜ್‌ಮೆಂಟ್ ವಿಜ್ಞಾನವಲ್ಲ. ಅದು ಅಪಾಯ ತಡೆಯುವ ಹಾಗೂ ಸುರಕ್ಷತೆಯ ಕಲೆಯಾಗಿದೆ. ಎಂಜಿನಿಯರಿಂಗ್, ಫೈನಾನ್ಸ್ ಮತ್ತು ಎಕಾನಮಿಕ್ಸ್ ಒಟ್ಟಾಗಿ ಪದವಿ ವಿದ್ಯಾರ್ಥಿಗಳ ಪಠ್ಯಕ್ರಮಕ್ಕೆ ಅಗತ್ಯವಾದ ವಸ್ತುವಿಷಯವನ್ನು ಒದಗಿಸುವಂತಾಗಬೇಕು ಎಂದರು.
ಎಂಐಟಿಯ ಪ್ರೊ| ರಘುವೀರ್ ಪೈ ಅಧ್ಯಕ್ಷತೆ ವಹಿಸಿ, ಗತವರ್ಷದ ಸಾಧನೆ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. 2024ರಲ್ಲಿ ನಡೆಯುವ ಐಸಿಎಂಐಎಎಂ ಸಮ್ಮೇಳನದ ಬಗ್ಗೆಯೂ ಮಾಹಿತಿ ನೀಡಿದರು.
ಐಐಟಿ ಖರಗ್‌ಪುರ್‌ದ ಇನಾ#†ಸ್ಟ್ರಕ್ಚರ್ ವಿಭಾಗದ ಡೀನ್ ಡಾ| ಖನೀಂದ್ರ ಪಾಟಕ್ ಸ್ವಾಗತಿಸಿ, ಮಂಗಳೂರು ಸೆಂಟ್ ಜೋಸೆಫ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ| ಬಿನು ಕೆ.ಜಿ. ಪ್ರಸ್ತಾವನೆಗೈದರು. ಎವೆರೆಸ್ಟ್ ಗ್ರೂಪ್ ನಿರ್ದೇಶಕ ಅಮಿತ್ ಕಪೂರ್ ಹಿಂದಿನ ವರ್ಷದ ವರದಿ ಮಂಡಿಸಿದರು. ಎಎಂಎಸ್‌ಐ ಜಂಟಿ ಕಾರ್ಯದರ್ಶಿ ಡಾ| ಎಚ್.ಕೆ. ಮಿಶ್ರಾ, ಬಿಇಎಂಎಲ್ ನಿವೃತ್ತ ಡಿಜಿಎಂ ಸತ್ಯೇಶ್ ಸಿಂಹ ಅತಿಥಿ ಪರಿಚಯ ಮಾಡಿದರು. 2023ರಲ್ಲಿ ನಡೆದ ಮೈಟನೆನ್ಸ್ ಆ್ಯಂಡ್ ಇಂಟೆಲಿಜೆಂಟ್ ಅಸ್ಸೆಟ್ ಮ್ಯಾನೇಜ್‌ಮೆಂಟ್ ಸಮ್ಮೇಳನದ ವರದಿಯನ್ನು ಡಾ| ಗೋಪಿನಾಥ ಚಟ್ಟೋಪಾಧ್ಯಾಯ ವಾಚಿಸಿದರು. ಎಎಂಎಸ್‌ಐ ತಾಂತ್ರಿಕ ಸಮಿತಿಯ ಕ| ಸುನಿಲ್ ಯಾದವ್ ವಂದಿಸಿದರು. ಸಂಶೋಧನಾರ್ಥಿ ಮಹುವ ಬ್ಯಾನರ್ಜಿ ನಿರೂಪಿಸಿದರು. ಪ್ರೊ| ಗೌರವ್ ಶೆಣೈ ಹಾಗೂ ಡಾ| ಗಣೇಶ್ ಸಹಕರಿಸಿದರು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.