ಅವಳು ಒಂದು ಅದ್ಭುತ
Team Udayavani, Mar 8, 2021, 3:41 PM IST
ಎಲ್ಲಿ ಮಹಿಳೆಯನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವರು ನೆಲೆಸುತ್ತಾನೆ ಎಂಬ ಮಾತಿದೆ.
ನಮ್ಮ ದೇಶದ ಬಹುದೊಡ್ಡ ಆಸ್ತಿ ನಮ್ಮ ಮಹಿಳೆ, ನಮ್ಮ ಪೂರ್ವಜರಿಂದ ಇಲ್ಲಿಯ ವರೆಗೆ ನಮ್ಮ ಮಹಿಳೆಯನ್ನು ಅತ್ಯಂತ ಗೌರವದಿಂದ ನಡೆಸಿಕೊಂಡು ಬಂದಿದ್ದೇವೆ. ಅವಳ ಹಕ್ಕುಗಳನ್ನು ಕಾಯುತ್ತಾ ಬಂದಿದ್ದೇವೆ. ನಮ್ಮ ಬದುಕಿನ ಪುಸ್ತಕದ ಪ್ರತೀ ಪುಟದಲ್ಲಿಯೂ ಅವಳ ಪಾತ್ರವು ಮಹತ್ವದ್ದಾಗಿದ್ದು ಅವಳಿಲ್ಲದೇ ನಮ್ಮ ಬಾಳಿನ ಬಂಡಿ ಸಾಗುವುದಿಲ್ಲ.
ಈ ಮಹಿಳಾ ದಿನಾಚರಣೆ ಅಂದಾಕ್ಷಣ ನೆನಪಿಗೆ ಬರುವುದು ನಮ್ಮ ನಿಮ್ಮ ಮನೆಗಳಲ್ಲಿ ಏನೂ ಅಪೇಕ್ಷೆ ಮಾಡದೆ ಕೆಲಸ ಮಾಡುವ ಅಮ್ಮಂದಿರು. ಎಲ್ಲರೂ ರಜೆ ಇರಬೇಕು, ಬಿಡುವಿರಬೇಕು, ಸಂಬಳ ಬರಬೇಕು ಎಂದು ಉಸುರುವ ಸಾಮಾಜಿಕ ನ್ಯಾಯ ನಮ್ಮ ಮನೆಯಲ್ಲೇ ಠುಸ್ಸೆಂದು ಕೈ ಕೊಡುತ್ತದೆ. ಅವಳಿಗೆ ಕೊಂಚ ಬಿಡುವು ಕೊಡುವ ಯೋಚನೆಯನ್ನೂ ಸಹ ನಾವು ಮಾಡುವುದಿಲ್ಲ.
ಪ್ರಾಯಶಃ ಇದನ್ನು ಅವಳೇ ಎಸಗಿಕೊಂಡ ಸ್ವಯಂಕೃತ ಅಪರಾಧ ಎಂದೂ ನಾನು ತಿಳಿದುಕೊಳ್ಳುತ್ತೇನೆ ಮತ್ತು ಮಹಿಳೆಯರಿಗೆ ರಾಜಕೀಯ, ಉದ್ಯೋಗ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಕಲ್ಪಿಸಿ, ಅವರಿಗೂ ಗೌರವದ ಬದುಕನ್ನು ನಡೆಸುವ ಅವಕಾಶ ಕಲ್ಪಿಸಲಾಗುತ್ತಿದೆ.
ಸಮಾಜದಲ್ಲಿ ಹೆಣ್ಣನ್ನು ಅವಳ ದುಖಃಗಳನ್ನು ಮರೆಮಾಚಲಾಗುತ್ತಿದೆ. ಹೆಣ್ಣಿಗೆ ಎಲ್ಲಿ ಗೌರವವಿದೆ ಎಂಬ ಮಾತು ಕೇಳಿದರೆ ನಮಗೆ ಸಿಗುವ ಉತ್ತರ ಮಾತ್ರ ಶೂನ್ಯವಾಗಿರುತ್ತದೆ. ಇಂದಿಗೂ ಹಳ್ಳಿಗಳಲ್ಲಿ ಅವಳಿಗೆ ಸಮಾನ ಕೂಲಿ ಸಿಗುತ್ತಿಲ್ಲ. ಕೆಲಸ ಮಾತ್ರ ಗಂಡಸಿಗಿಂತ ಹೆಚ್ಚಿನ ಕೆಲಸವಿದೆ ಆದರೂ ಗಂಡು ಸಮಾಜ ಸುಮ್ಮನೆ ಕುಳಿತಿದೆ. ಸ್ವತಃ ಮನೆಯಿಂದ ದೂರದ ಸಂಬಂಧಗಳಿಗೂ ಅಲ್ಲದೇ ಬೇರೆಯವರ ಹೆಣ್ಣಿಗೂ ನಾವಿಂದು ಎಷ್ಟು ಗೌರವ ಕೊಟ್ಟಿದ್ದೇವೆ ಎಂಬ ಕಟುಸತ್ಯ ಮಾತ್ರ ಯಾರು ಬಲ್ಲರು.
ಈ ಬೆಳೆದುನಿಂತ ಸಮಾಜದಲ್ಲಿ ಹೆಣ್ಣನ್ನು, ಅವಳ ದುಖಃಗಳನ್ನು ಮರೆಮಾಚಲಾಗುತ್ತಿದೆ. ಹೆಣ್ಣಿಗೆ ಎಲ್ಲಿ ಗೌರವವಿದೆ ಎಂಬ ಮಾತು ಕೇಳಿದರೆ ನಮಗೆ ಸಿಗುವ ಉತ್ತರ ಮಾತ್ರ ಶೂನ್ಯವಾಗಿರುತ್ತದೆ. ಇಂದಿಗೂ ಹಳ್ಳಿಗಳಲ್ಲಿ ಅವಳಿಗೆ ಸಮಾನ ಕೂಲಿ ಸಿಗುತ್ತಿಲ್ಲ ಕೆಲಸ ಮಾತ್ರ ಗಂಡಸಿಗಿಂತ ಹೆಚ್ಚಿನ ಕೆಲಸವಿದೆ ಆದರೂ ಪುರುಷ ಪ್ರಧಾನ ಸಮಾಜ ಸುಮ್ಮನೆ ಕುಳಿತಿದೆ.
ಹೆಣ್ಣು ನಾಲ್ಕು ಗೋಡೆಗಷ್ಟೇ ಸೀಮಿತ ಎಂಬ ಕಾಲದಿಂದ ದೇಶದ ಅತ್ಯುನ್ನತ ಸ್ಥಾನವನ್ನೂ ಪಡೆಯುವ ಮಟ್ಟಿಗೆ ಹೆಣ್ಣು ಬದಲಾಗಿದ್ದಾಳೆ. ಎಲ್ಲ ಕ್ಷೇತ್ರಗಳಲ್ಲೂ ಪುರುಷನಿಗೆ ಸರಿಸಮನಾಗಿ ನಿಂತು ತನ್ನ ಸಾಮರ್ಥ್ಯದ ಅರಿವು ಮೂಡಿಸಿದ್ದಾಳೆ.
ಆಕರ್ಷ ಆರಿಗ, ಎಸ್.ಡಿ.ಎಂ. ಕಾಲೇಜು ಉಜಿರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.