Byndoor 50 ಕಡೆ ಬಸ್‌, ಲಾರಿ ಚಾಸಿಸ್‌ ಬಳಸಿ ಕಾಲುಸಂಕ! ಆರಂಭಿಕ ಹಂತದಲ್ಲಿ 3 ಕಡೆ ನಿರ್ಮಾಣ

ಬೈಂದೂರು ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿನೂತನ ಪ್ರಯತ್ನ

Team Udayavani, May 28, 2024, 6:41 AM IST

Byndoor 50 ಕಡೆ ಬಸ್‌, ಲಾರಿ ಚಾಸಿಸ್‌ ಬಳಸಿ ಕಾಲುಸಂಕ! ಆರಂಭಿಕ ಹಂತದಲ್ಲಿ 3 ಕಡೆ ನಿರ್ಮಾಣ

ಕುಂದಾಪುರ: ಮಳೆಗಾಲ ಬಂತೆಂದರೆ ಬೈಂದೂರು ಕ್ಷೇತ್ರದ ಹಲವೆಡೆ ಸಂಪರ್ಕವೇ ಸವಾಲು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಶಾಸಕ ಗುರುರಾಜ್‌ ಗಂಟಿಹೊಳೆ ಆರಂಭಿಕ ಹೆಜ್ಜೆಯಿಟ್ಟಿದ್ದಾರೆ. ಸಮೃದ್ಧ ಬೈಂದೂರು ಟ್ರಸ್ಟ್‌ ಮತ್ತು ಬೆಂಗಳೂರು ಮೂಲದ ಅರುಣಾಚಲಂ ಟ್ರಸ್ಟ್‌ ಸಹಯೋಗ, ವಿವಿಧ ಸಂಘ – ಸಂಸ್ಥೆಗಳ ನೆರವಿನೊಂದಿಗೆ ಲಾರಿ, ಹಳೆಯ ಲಾರಿ, ಬಸ್‌ ಇನ್ನಿತರ ವಾಹನಗಳ ಚಾಸಿಸ್‌ ಬಳಸಿ ಕಡಿಮೆ ಖರ್ಚಿನಲ್ಲಿ ಕಾಲುಸಂಕಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ.

50 ಕಡೆಗಳಲ್ಲಿ ಇಂತಹ ಕಾಲುಸಂಕಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಈ ಮಳೆಗಾಲಕ್ಕೂ ಮೊದಲು ಪ್ರಾಯೋಗಿಕವಾಗಿ 3 ಕಡೆ (ಯಡ ಮೊಗೆಯ ರಾಂಪೈಜೆಡ್ಡು, ವಂಡ್ಸೆಯ ಅಬ್ಬಿ ಹಾಗೂ ತೊಂಬಟ್ಟು -ಕಬ್ಬಿನಾಲೆ ಬಳಿ) ಕಾಮಗಾರಿ ನಡೆಯಲಿದೆ. ಯೋಜನೆಯಡಿ 35ರಿಂದ 72 ಅಡಿ ಉದ್ದದ ಕಾಲುಸಂಕ ನಿರ್ಮಿಸಲಾಗುವುದು.

ಹಳ್ಳಿಗರಿಗೆ ವರದಾನ:ಬೈಂದೂರು ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಅಪಾಯಕಾರಿ ಮರದ ಕಾಲುಸಂಕಗಳಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತುಂಬಿ ಹರಿಯುವ ನದಿ, ಹಳ್ಳ, ತೊರೆ, ಹೊಳೆ ದಾಟುವ ಪರಿಸ್ಥಿತಿಯಿದೆ. 260ಕ್ಕೂ ಅಧಿಕ ಕಡೆಗಳಲ್ಲಿ ಶಾಶ್ವತ ಕಾಲುಸಂಕದ ಅಗತ್ಯವಿದೆ. ಹಲವು ವರ್ಷಗಳಿಂದ ಜನರು ಬೇಡಿಕೆ ಸಲ್ಲಿಸುತ್ತಿದ್ದರೂ ಈವರೆಗೆ ಆಗಿರುವುದು ಬೆರಳೆಣಿಕೆ ಯಷ್ಟೇ. ಶಾಸಕರ ಹೊಸ ಯೋಜನೆ ಜಾರಿಯಾದರೆ ನದಿ, ತೊರೆ, ಹೊಳೆ ಬದಿಯ ವಾಸಿಗಳಿಗೆ ವರದಾನವಾಗಲಿದೆ.

ರಾಂಪೈಜೆಡ್ಡಿನಲ್ಲಿ ಮೊದಲ ಕಾಲುಸಂಕ
ಯಡಮೊಗೆಯ  ಹತ್ತಿರದ ರಾಂಪೈಜೆಡ್ಡುವಿನಲ್ಲಿ ಕುಬ್ಜಾ ನದಿಗೆ ಬಸ್ಸಿನ ಚಾಸಿಸ್‌ ಬಳಸಿ ಮೊದಲ ಕಾಲು ಸಂಕ ನಿರ್ಮಾಣವಾಗುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ. ಇದರೊಂದಿಗೆ 30ಕ್ಕೂ ಮಿಕ್ಕಿ ಮನೆಯವರು ಮಳೆಗಾಲದಲ್ಲಿ ಅನುಭವಿಸುತ್ತಿದ್ದ ಬವಣೆ ಬಗೆಹರಿಯಲಿದೆ.

ಈ ಕಾಲು ಸಂಕದಿಂದಾಗಿ ಯಡಮೊಗೆ – ಹೊಸಂಗಡಿ ಗ್ರಾಮಗಳ ಸಂಪರ್ಕ ಹತ್ತಿರವಾಗಲಿದೆ. ಇದಲ್ಲದೆ ರಾಂಪೈಜೆಡ್ಡು ಜನರು ಪಡಿತರ, ಪಂಚಾಯತ್‌, ಪೇಟೆಗೆ 6 ಕಿ.ಮೀ. ದೂರ ಸಂಚರಿಸುತ್ತಿದ್ದು, ಈಗ ಇದು ಕೇವಲ 1 ಕಿ.ಮೀ. ಅಷ್ಟೇ ದೂರವಾಗಲಿದೆ. ಹೊಸಂಗಡಿಗೆ ಬಸ್ಸಿಗೆ ತೆರಳಲು ಹತ್ತಿರವಾಗಲಿದೆ. ಈ ಕಾಲು ಸಂಕದಲ್ಲಿ ಬೈಕ್‌, ರಿಕ್ಷಾ, ಆಮ್ನಿ ಸಂಚರಿಸಬಹುದು. ಅನಾರೋಗ್ಯ ಪೀಡಿತರನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಹಕಾರಿ. ಮಳೆಗಾಲದಲ್ಲಿ ಶಾಲೆ ಮಕ್ಕಳಿಗೂ ಅನುಕೂಲ ಎಂದು ಸ್ಥಳೀಯರಾದ ರಮೇಶ್‌ ನಾಯ್ಕ ಹೇಳಿದರು.

ಕಾಲುಸಂಕ ಇಲ್ಲದ ಕಡೆ ಮಳೆಗಾಲದಲ್ಲಿ ಜನರಿಗೆ ನೆರವಾಗಲಿ ಅನ್ನುವ ಕಾರಣಕ್ಕೆ ಎರಡು ಟ್ರಸ್ಟ್‌ ಗಳ ವತಿಯಿಂದ ಈ ಕಾರ್ಯ ಕೈಗೊಂಡಿದ್ದೇವೆ. ದಾನಿಗಳು ಕೈಜೋಡಿಸಲು ಮುಂದೆ ಬಂದಿದ್ದಾರೆ. 50 ಕಡೆ ಮಾಡುವ ಯೋಚನೆಯಿದೆ.ಸದ್ಯ 3 ಕಡೆ ನಿರ್ಮಾಣ ವಾಗಲಿದೆ. ಬಳಿಕ ಅದರ ಗುಣಮಟ್ಟ ನೋಡಿಕೊಂಡು ಮುಂದುವರಿ ಯಲಾಗುವುದು. ಇದಕ್ಕೆ ತಲಾ ಅಂದಾಜು 2 ಲಕ್ಷ ರೂ. ವೆಚ್ಚವಾಗಲಿದೆ.
– ಗುರುರಾಜ್‌ ಗಂಟಿಹೊಳೆ,
ಬೈಂದೂರು ಶಾಸಕ

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Congress: ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

POlice

Kundapura: ನಿಂದನೆ, ಜೀವ ಬೆದರಿಕೆ: ಕೇಸು ದಾಖಲು

13

Udupi: ಅಪಾಯಕಾರಿಯಾಗಿ ಬಸ್‌ ಚಾಲನೆ: ಪ್ರಕರಣ ದಾಖಲು

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

sand

Malpe: ಮರಳು ಅಕ್ರಮ ಸಂಗ್ರಹ, ಕೇಸು ದಾಖಲು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

1-wewewqeqwewqe

Edible oil; ದಾಸ್ತಾನಿದ್ದರೂ ಖಾದ್ಯ ತೈಲ ಬೆಲೆ ಏರಿಸಿದ್ದೇಕೆ: ಸರಕಾರ ಪ್ರಶ್ನೆ

Madikeri ಭಾಗದ ಅಪರಾಧ ಸುದ್ದಿಗಳು

Madikeri ಭಾಗದ ಅಪರಾಧ ಸುದ್ದಿಗಳು

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Congress: ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.