ಹಾಸನ : ಸೊಸೆಯನ್ನ ಮೂರು ಮತಗಳ ಅಂತರದಿಂದ ಮಣಿಸಿದ ಸೋದರತ್ತೆ
Team Udayavani, Dec 30, 2020, 5:00 PM IST
ಹಾಸನ: ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಎದುರಾಳಿಯಾಗಿದ್ದ ಸೊಸೆಯನ್ನ ಮಣಿಸಿ ಸೋದರತ್ತೆ ಮೂರು ಮತಗಳ ಆನಂತರದಿಂದ ಗೆಲುವು ಸಾಧಿಸಿದ್ದಾರೆ.
ಹಾಸನ ತಾಲೂಕಿನ ಹೆರಗು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈರಾಪುರ ಕ್ಷೇತ್ರದಿಂದ ಸೋದರತ್ತೆ ಸೊಂಬಮ್ಮ ಜೆಡಿಎಸ್ ಅಭ್ಯರ್ಥಿಯಾಗಿ ಮತ್ತು ಸೊಸೆ ಪವಿತ್ರ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.
ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಪವಿತ್ರ 273 ಮತಗಳನ್ನ ಪಡೆದರೆ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸೊಂಬಮ್ಮ 276 ಮತಗಳನ್ನ ಪಡೆಯುವ ಮೂಲಕ ಕೇವಲ 3 ಮತಗಳ ಅಂತರದಿಂದ ವಿಜಯದ ಮಾಲೆಯನ್ನ ಮುಡಿಗೇರಿಸಿಕೊಂಡಿದ್ದಾರೆ. ಹೀಗಾಗಿ ಸೋದರತ್ತೆಯ ಮುಂದೆ ಸೊಸೆ ಸೋಲನುಭಬಿಸಿದ್ದಾರೆ.
ಇದನ್ನೂ ಓದಿ:ಗ್ರಾ.ಪಂ ಚುನಾವಣೆ: ಸೋದರ ಸಂಬಂಧಿಯನ್ನೇ ಸೋಲಿಸಿದ ನಿವೃತ್ತ ಪೊಲೀಸ್ ಅಧಿಕಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.