ಹಿಂದೂ ಜಗತ್ತಿನ ಜೀವಂತ ಪುರಾತನ ನಾಗರಿಕತೆ: ಡಾ| ಸುಬ್ರಮಣಿಯನ್ ಸ್ವಾಮಿ
Team Udayavani, Dec 9, 2021, 5:20 AM IST
ಉಡುಪಿ: ಆರ್ಯರು ಮತ್ತು ದ್ರಾವಿಡ ಎನ್ನುವ ಪರಿಕಲ್ಪನೆಯೇ ಇಲ್ಲ. ಇದು ಬ್ರಿಟಿಷರ ಸೃಷ್ಟಿ. ಹಿಂದೂ ಸಂಸ್ಕೃತಿ ಜಗತ್ತಿನ ಏಕೈಕ ಜೀವಂತ ಪುರಾತನ ನಾಗರಿಕತೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯಸಭಾ ಸದಸ್ಯಡಾ| ಸುಬ್ರಮಣಿಯನ್ ಸ್ವಾಮಿ ಹೇಳಿದರು.
ಪರ್ಯಾಯ ಶ್ರೀ ಅದಮಾರು ಮಠದ ವಿಶ್ವಾರ್ಪಣಮ್‌ನಲ್ಲಿ ಬುಧವಾರ “ಬಿ ಪ್ರೌಡ್ ಟು ಬಿ ಎ ಪಾರ್ಟ್ ಆಫ್ ದಿ ಗ್ರೇಟ್ ಏನ್ಶಿಯಂಟ್ ಹಿಂದು ಸಿವಿಲೈಸೇಷನ್, ದಿ ಒನ್ಲಿ ಏನ್ಶಿಯಂಟ್ ಸಿವಿಲೈಸೇಷನ್ ಸ್ಟಿಲ್ ಎಕ್ಸಿಸ್ಟಿಂಗ್’ ಎಂಬ ವಿಷಯ ಮೇಲೆ ಉಪನ್ಯಾಸ ನೀಡಿದರು.
ಉತ್ತರ, ದಕ್ಷಿಣ ಭಾರತೀಯರಲ್ಲಿ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು. ಅದನ್ನು ಹೊರತುಪಡಿಸಿ ಭಾರತೀಯ ರೆಲ್ಲರೂ ಒಂದೆ. ಅದೇ ನಮ್ಮ ಶ್ರೇಷ್ಠತೆ. ಮಹಿಳೆಯರಿಗೆ ಹಿಂದೂ ಧರ್ಮ ನೀಡಿದಷ್ಟು ಗೌರವ ಬೇರೆ ಯಾವುದೇ ಧರ್ಮವೂ ನೀಡಿಲ್ಲ. ಹಿಂದೂಗಳ ಪುನರುತ್ಥಾನಕ್ಕಾಗಿ ಮಹಿಳಾ ಶಕ್ತಿ ಅತಿ ಆವಶ್ಯಕ ಎಂದರು.
ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಎಡನೀರು ಶ್ರೀ ಸಚ್ಚಿದಾನಂದ ಭಾರತೀತೀರ್ಥರು ಆಶೀರ್ವಚನ ನೀಡಿದರು. ನಿವೃತ್ತ ಅಪರ ಜಿಲ್ಲಾಧಿಕಾರಿ ಎಸ್.ಎ. ಪ್ರಭಾಕರಶರ್ಮಾ, ವಿರಾಟ್ ಹಿಂದೂ ಸಂಗಮ್‌ನ ಪ್ರ. ಕಾರ್ಯದರ್ಶಿ ಜಗದೀಶ್ ಶೆಟ್ಟಿಯವರನ್ನು ಸಮ್ಮಾನಿಸಲಾಯಿತು.
ಇದನ್ನೂ ಓದಿ:ರಾಜ್ಯದಲ್ಲಿಂದು 399 ಕೋವಿಡ್ ಪಾಸಿಟಿವ್ ಪತ್ತೆ: 6 ಮಂದಿ ಸಾವು
ಶ್ರೀ ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು. ವಿದ್ವಾಂಸರಾದ ಕೃಷ್ಣರಾಜ ಭಟ್ ಕುತ್ಪಾಡಿ ನಿರೂಪಿಸಿದರು. ಪ್ರೊ|ಎಂ.ಎಲ್. ಸಾಮಗ ಪರಿಚಯಿಸಿದರು.
ದೇಶಕ್ಕೆ ಉತ್ಕೃಷ್ಟ ಸಂವಿಧಾನ ನೀಡಿದ ಡಾ| ಬಿ.ಆರ್. ಅಂಬೇಡ್ಕರ್ ಅವರನ್ನು ಕಾರ್ಯದ ಆಧಾರದಲ್ಲಿ ಬ್ರಾಹ್ಮಣ ಎಂದು ಕರೆಯಬೇಕು. ಬ್ರಾಹ್ಮಣರು ಮಾಡಬೇಕಾದ ಕಾರ್ಯವನ್ನು ಅಂಬೇಡ್ಕರ್ ಮಾಡಿದ್ದಾರೆ. ಜವಾಹರ್‌ಲಾಲ್ ನೆಹರೂ ಅವರಿಗೆ ಪಂಡಿತ್ ಎಂದು ಕರೆಯುತ್ತೇವೆ. ಅವರ ಶೈಕ್ಷಣಿಕ ದಾಖಲೆ ಪರಿಶೀಲಿಸಿದ್ದೇನೆ. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಅನುತ್ತೀರ್ಣರಾಗಿದ್ದರು. ಅವರ ಪರಿವಾರದಲ್ಲಿ ಇಂದಿರಾ ಗಾಂಧಿ, ರಾಜೀವ್‌ಗಾಂಧಿ, ಸೋನಿಯಾ ಹೀಗೆ ಎಲ್ಲರೂ ಫೇಲ್ ಆಗಿದ್ದಾರೆ.
– ಡಾ| ಸುಬ್ರಮಣಿಯನ್ ಸ್ವಾಮಿ, ರಾಜ್ಯಸಭಾ ಸದಸ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.