ನಂಜನಗೂಡಿನಲ್ಲಿ ತಾರಕಕ್ಕೇರಿದ ಅಂದಕಾಸುರ ಸಂಹಾರ ವಿವಾದ
ಶ್ರೀಕಂಠೇಶ್ವರನ ಭಕ್ತರಿಂದ ದೇಗುಲದ ಮುಂಭಾಗ ಬೃಹತ್ ಪ್ರತಿಭಟನೆ
Team Udayavani, Dec 28, 2023, 9:37 PM IST
ನಂಜನಗೂಡು: ಅಂದಕಾಸುರ ಸಂಹಾರ ಆಚರಣೆ ವಿವಾದ 3 ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ, ದೇವರ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ್ದಾರೆಂದು ಆರೋಪಿಸಿ, ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಗುರುವಾರ ಶ್ರೀಕಂಠೇಶ್ವರನ ಭಕ್ತರು ದೇಗುಲದ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.
ಉತ್ಸವಮೂರ್ತಿಯನ್ನು ಅಪವಿತ್ರಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಹಿ ಸಂಗ್ರಹ ಅಭಿಯಾನ ನಡೆಯಿತು. ದೇಗುಲದ ಮುಂಭಾಗ ಬೃಹತ್ ಬ್ಯಾನರ್ ಅಳವಡಿಸಲಾಗಿತ್ತು. ಸಾವಿರಾರು ಭಕ್ತರು ಬ್ಯಾನರ್‌ನಲ್ಲಿ ಸಹಿ ಹಾಕಿದರು. ತೇರಿನ ಬೀದಿಯಲ್ಲಿ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಕಣ್ಣೀರಿಟ್ಟ ಅರ್ಚಕ: ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದೇಗುಲದ ಹಿರಿಯ ಅರ್ಚಕರಾದ ಶ್ರೀಕಂಠ ದೀಕ್ಷಿತ್, ದೇವರ ಮೂರ್ತಿಗೆ ಎಂಜಲು ನೀರನ್ನು ಎರಚಿ ಅಪವಿತ್ರಗೊಳಿಸಿರುವುದು ಅಪಮಾನಕರ. ಇತಿಹಾಸ ಪ್ರಸಿದ್ಧ ನಂಜನಗೂಡಿನಲ್ಲಿ ಇಂತಹ ಘಟನೆ ನಡೆಯುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದು ಕಣ್ಣೀರಿಟ್ಟರು.
ಅಂದಕಾಸುರ ಸಂಹಾರ ವಿಚಾರವಾಗಿ ನಡೆದ ವಿವಾದ ಬುಧವಾರ ಆರೋಪ ಪ್ರತ್ಯಾರೋಪ ತಾರಕಕ್ಕೇರಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಲೇರಿ ಎರಡು ಗುಂಪುಗಳ ಸದಸ್ಯರ ಮೇಲೆ ಪ್ರಕರಣ ದಾಖಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.