ಅಂಡಿಂಜೆ ಶಾಲೆ: ಬಣ್ಣ ಬಣ್ಣದ ಚಿತ್ತಾರ
Team Udayavani, Sep 4, 2021, 5:11 AM IST
ವೇಣೂರು: ಕೋವಿಡ್ ಲಾಕ್‌ಡೌನ್‌ನಿಂದ ದೀರ್ಘ ಸಮಯ ದಿಂದ ಶಾಲೆಯಿಂದ ದೂರ ಉಳಿದಿದ್ದ ಮಕ್ಕಳಿಗೆ ಶಾಲೆ ಆರಂಭದ ಸೂಚನೆ ದೊರೆತಿದೆ. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ಸಂತೋಷದಿಂದ ಇರಲು ಅಂಡಿಂಜೆ ಶಾಲೆಯ ಗೋಡೆಯನ್ನು ಚಿತ್ರಗಳಿಂದ ಅಲಂಕರಿಸಲಾಗಿದೆ.
ಗೋಡೆಯಲ್ಲಿ ಬಿಡಿಸಲಾದ ಸರಕಾರಿ ಬಸ್‌ನ ಚಿತ್ರ ಆಕರ್ಷವಾಗಿ ಮೂಡಿ ಬಂದಿದ್ದು, ಕಿಟಕಿಯನ್ನು ತೆರೆದರೆ ವಿದ್ಯಾರ್ಥಿಗಳು ಬಸ್‌ನಲ್ಲಿ ಕುಳಿತಂತೆ ಭಾಸವಾಗಲಿದೆ.
ಇನ್ನೊಂದು ಭಾಗದಲ್ಲಿ ಮೆಟ್ರೋ ರೈಲಿನ ಚಿತ್ರ ಬಿಡಿಸಲಾಗಿದೆ. ಅಲ್ಲದೆ ಪ್ರಾಣಿ, ಪಕ್ಷಿ, ಕನ್ನಡ-ಇಂಗ್ಲೀಷ್ ಅಕ್ಷರ ಸರಮಾಲೆ, ತರಕಾರಿ, ಹಣ್ಣು ಸೇರಿ ದಂತೆ ಇನ್ನಿತರ ಕಲಾಕೃತಿಗಳೊಂದಿಗೆ ಗೋಡೆಯನ್ನು ಅಂದಗೊಳಿಸಲಾಗಿದೆ. ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಇದ್ದು, ಪ್ರಸಕ್ತ 238 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಕಡ್ಡಾಯ : ಪದವಿಪೂರ್ವ ಶಿಕ್ಷಣ ಇಲಾಖೆ ಸೂಚನೆ
ಆಕರ್ಷಕ ಗ್ರಂಥಾಲಯ
ಅಂಡಿಂಜೆ ಶಾಲೆ 65 ಸವಂತ್ಸರಗಳನ್ನು ಪೂರೈಸುತ್ತಿದ್ದು, ಜಿಲ್ಲೆಯಲ್ಲೇ ಮಾದರಿ ಗ್ರಂಥಾಲಯ ಹೊಂದಿದೆ. ಶಿಕ್ಷಕ ಶಿವಶಂಕರ ಭಟ್ ಅವರ ಶ್ರಮದಲ್ಲಿ 2014ರಲ್ಲಿ ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ಗುಬ್ಬಿ ವೀರಣ್ಣ ಶ್ರದ್ಧಾ ಶಾಲಾ ಗ್ರಂಥಾಲಯ ನಿರ್ಮಿಸಲಾಗಿದೆ. ಉಷ್ಣ ಮತ್ತು ಗೆದ್ದಲು ನಿರೋಧಕ ಕಟ್ಟಡ ಇದಾಗಿದ್ದು, 3,500ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ಇಲ್ಲಿದೆ.
ಪ್ರೇರಣೆ ಆಗಲಿದೆ
ಮಕ್ಕಳನ್ನು ಆಕರ್ಷಿಸಲು ಮತ್ತು ಶಾಲೆಯಲ್ಲಿ ಚಂದದ ವಾತಾವರಣ ಸೃಷ್ಟಿಯಾಗಲು ಆಕರ್ಷಕವಾಗಿ ಬಣ್ಣ ಬಳಿಯಲಾಗಿದೆ. ಇದು ಮಕ್ಕಳಿಗೆ ಓದಿನ ಕಡೆ ಗಮನ ಕೇಂದ್ರೀಕರಿಸಲು ಪ್ರೇರಣೆ ಆಗಲಿದೆ. ಶಾಲೆಯ ಅಭಿವೃದ್ಧಿಯಲ್ಲಿ ಎಸ್‌ಡಿಎಂಸಿ ಮತ್ತು ಶಿಕ್ಷಕರ ಶ್ರಮ ಅಡಗಿದೆ. -ಗುರುಮೂರ್ತಿ ಎಚ್.,
ಮುಖ್ಯ ಶಿಕ್ಷಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.