Anegondi ವಾಲೀಕಿಲ್ಲಾ,ಹೇಮಗುಡ್ಡ ದಸರಾಕ್ಕಿದೆ ಕುಮ್ಮಟದುರ್ಗದ ಇತಿಹಾಸದ ಮೆರಗು
9 ದಿನಗಳ ಕಾಲ ದೇವಿ ಪುರಾಣ ಪ್ರವಚನ...ವಿಜಯದಶಮಿಯಂದು ಉಚಿತ ಸಾಮೂಹಿಕ ವಿವಾಹ
Team Udayavani, Oct 15, 2023, 7:20 PM IST
ಗಂಗಾವತಿ: ನಾಡ ಹಬ್ಬ ದಸರಾ ನವರಾತ್ರಿ ಹಬ್ಬ ತಾಲೂಕಿನ ಆನೆಗೊಂದಿ ವಾಲೀಕಿಲ್ಲಾ, ಹೇಮಗುಡ್ಡ ಸೇರಿ ನಗರ ಮತ್ತು ತಾಲೂಕಿನ ವಿವಿಧೆಡೆ 9 ದಿನಗಳ ಕಾಲ ದೇವಿಯ ಆರಾಧನೆ 10ನೇ ದಿನದಂದು ವಿಜಯದಶಮಿ ಆಚರಣೆಗೆ ರವಿವಾರದಂದು ಘಟಸ್ಥಾಪನೆ ಮೂಲಕ ಚಾಲನೆ ದೊರಕಿದೆ.
ಪ್ರಸ್ತುತ ಮೈಸೂರಿನ ನಾಡ ಹಬ್ಬ ದಸರಾದ ಮೂಲ ತಾಲೂಕಿನ ಕುಮ್ಮಟದುರ್ಗ, ಹೇಮಗುಡ್ಡ ಹಾಗೂ ಆನೆಗೊಂದಿಯಾಗಿದ್ದು ಕಾಲಾಂತರದಲ್ಲಿ ವಿಜಯನಗರ ಸಾಮ್ರಾಜ್ಯ ಪಥನವಾದ ನಂತರ ಮೈಸೂರಿನ ಅರಸರು ದಸರಾವನ್ನು ಆಚರಿಸಿಕೊಂಡು ಬಂದಿದ್ದು ಏಕೀಕರಣದ ನಂತರ ರಾಜ್ಯ ಸರಕಾರ ದಸರಾವನ್ನು ನಾಡ ಹಬ್ಬವೆಂದು ಮೈಸೂರಿನಲ್ಲಿ 9 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಿ 10 ನೇ ದಿನ ಆನೆ ಅಂಬಾರಿಯಲ್ಲಿ ನಾಡದೇವತೆ ಚಾಮುಂಡಿ ತಾಯಿಯ ವಿಗ್ರಹವನ್ನು ಮೆರವಣಿಗೆ ಮಾಡಿ ವಿಜಯೋತ್ಸವದ ಮೂಲಕ ಬನ್ನಿ ಮುಡಿಯಲಾಗುತ್ತದೆ.
ಮೊದಲು ದಸರಾ ಹಬ್ಬವನ್ನು ಕುಮ್ಮಟದುರ್ಗ ಅರಸರು ಆಚರಣೆಗೆ ತಂದರು. ಶತ್ರುಗಳ ವಿರುದ್ಧ ದಸರಾ ಸಂದರ್ಭದಲ್ಲಿ ದೊರೆತ ವಿಜಯವನ್ನು ವಿಜಯದಶಮಿ ಎಂದು ಆಚರಿಸುವ ಮೂಲಕ ಆರಂಭವಾದ ನವರಾತ್ರಿ ಹಬ್ಬ ಪ್ರಸ್ತುತ ಧಾರ್ಮಿಕ ಕಾರ್ಯಕ್ರಮಗಳಿಗೆ ಮೀಸಲಾಗಿದೆ.
ತಾಲೂಕಿನ ಆನೆಗೊಂದಿಯ ವಾಲೀಕಿಲ್ಲಾ ದೇವಾಲಯ, ಪಂಪಾಸರೋವರದಲ್ಲಿ 9 ದಿನಗಳ ಕಾಲ ದೇವಿ ಪುರಾಣ, ಹೋಮ ಹವನ ಸೇರಿ ಹಲವು ಕಾರ್ಯಕ್ರಮಗಳು ನಡೆಯತ್ತವೆ. ಕುಮ್ಮಟದುರ್ಗ ಅರಸರ ದೈವ ಜಟ್ಟಂಗಿ ರಾಮೇಶ್ವರ ಮತ್ತು ದುರ್ಗಾಪರಮೇಶ್ವರಿಯಾಗಿದ್ದರು. ಪ್ರಸ್ತುತ ಹೇಮಗುಡ್ಡದಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯವನ್ನು 35 ವರ್ಷಗಳ ಹಿಂದೆ ಮಾಜಿ ಸಂಸದ ಎಚ್.ಜಿ.ರಾಮುಲು ಜೀರ್ಣೋದ್ಧಾರ ಮಾಡಿದ ನಂತರ ಸತತವಾಗಿ ನವರಾತ್ರಿ ದಸರಾ ಹಬ್ಬವನ್ನು ಅವರ ಕುಟುಂಬದವರು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ನೇತೃತ್ವದಲ್ಲಿ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಗುತ್ತದೆ. ಕೊನೆಯ ದಿನ ಉಚಿತ ಸಾಮೂಹಿಕ ಮದುವೆಗಳು ಹಾಗೂ ಆನೆ ಅಂಬಾರಿಯಲ್ಲಿ ದುರ್ಗಾ ಪರಮೇಶ್ವರಿಯ ಮೂರ್ತಿಯನ್ನಿರಿಸಿ ಜಂಬೂ ಸವಾರಿ ಜರುಗುತ್ತದೆ. ನಾಡಿನ ವಿವಿಧ ಭಾಗದಿಂದ ಸಂಸ್ಕೃತಿಕ ಕಲಾ ತಂಡಗಳು ಆಗಮಿಸಿ ಅಂಬಾರಿ ಮೆರವಣಿಗೆಗೆ ಶೋಭೆ ತರುತ್ತವೆ. 9 ದಿನಗಳ ಕಾಲ ಅನ್ನದಾಸೋಹದ ವ್ಯವಸ್ಥೆಯನ್ನು ಎಚ್‌ಆರ್‌ಜಿ ಕುಟುಂಬದವರು ಮಾಡುತ್ತಾರೆ.
ಗಂಗಾವತಿ ನಗರದ ವೆಂಕಟೇಶ್ವರ ದೇವಾಲಯ, ಇಸ್ಲಾಂಪೂರದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇಗುಲ, ಜುಲೈನಗರದ ಉದ್ಭಲ ಮಹಾಲಕ್ಷ್ಮಿ ದೇಗುಲ, ಪ್ರಶಾಂತನಗರ, ಅಂಗಡಿ ಸಂಗಣ್ಣ ಕ್ಯಾಂಪ್ ಬನಶಂಕರಿ ದೇಗುಲ, ಹಿರೇಜಂತಗಲ್ ದ್ಯಾಮಮ್ಮ ದೇಗುಲ, ನೀಲಕಂಠೇಶ್ವರ ಕ್ಯಾಂಪಿನ ಬನ್ನಿಮಹಾಂಕಾಳಿ ದೇಗುಲ, ಬನ್ನಿಗಿಡದ ಕ್ಯಾಂಪಿನ ಬನ್ನಿಮಹಾಂಕಾಳಿ ದೇಗುಲಗಳಲ್ಲಿ 9 ದಿನಗಳ ಕಾಲ ದೇವಿಯ ಆರಾಧನೆ ಮತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ಮತ್ತು ನಿತ್ಯ ಅನ್ನಸಂತರ್ಪಣೆ ಜರುಗುತ್ತದೆ.
ಕೆ.ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.