ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ: ಕೋವಿಡ್ ಆತಂಕದ ನಡುವೆ ದಾಖಲೆ ಸಂಖ್ಯೆ ಭಕ್ತರ ಆಗಮನ
ಸಂಭ್ರಮದ ವಿನಾಯಕ ಚತುರ್ಥಿ
Team Udayavani, Aug 22, 2020, 4:04 PM IST
ತೆಕ್ಕಟ್ಟೆ : ಕೋವಿಡ್ ಆತಂಕದ ನಡುವೆಯೂ ಕೂಡಾ ಸಪ್ತಕ್ಷೇತ್ರಗಳಲ್ಲಿ ಒಂದಾದ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿನಾಯಕ ಚತುರ್ಥಿ ಆ.22 ರಂದು ಸಂಭ್ರಮದಿಂದ ಜರುಗಿತು .
ದಾಖಲೆ ಸಂಖ್ಯೆ ಭಕ್ತರ ಆಗಮನ : ದೇವಳಕ್ಕೆ ಮುಂಜಾನೆಯಿಂದಲೇ ದಾಖಲೆ ಸಂಖ್ಯೆಯ ಭಕ್ತರು ಆಗಮಿಸಿದ್ದು , ಹದಿನೈದು ಸಾವಿರಕ್ಕೂ ಅಧಿಕ ಮಂದಿ ಭಕ್ತರು ಶ್ರೀದೇವರ ದರ್ಶನವನ್ನು ಪಡೆದಿದ್ದಾರೆ. ದೇವಳವನ್ನು ಸಂಪೂರ್ಣ ಹೂವಿನ ಅಲಂಕಾರಗೊಳಿಸುತ್ತಿದೆ.
ದರ್ಶನಕ್ಕೆ ಮಾತ್ರ ಅವಕಾಶ : ಗಣೇಶ ಚತುರ್ಥಿಯಂದು ಕೇಂದ್ರ , ರಾಜ್ಯ ಹಾಗೂ ಜಿಲ್ಲಾಡಳಿತಗಳ ಮಾರ್ಗಸೂಚಿಯಂತೆ ದೇವಾಲಯದಲ್ಲಿ ಬೆಳಗ್ಗೆ ಗಂಟೆ 5ರಿಂದ ರಾತ್ರಿ ಗಂಟೆ 8ರ ವರೆಗೆ ಶ್ರೀ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಥರ್ಮಲ್ ಸ್ಕಾನ್‌ಬಳಕೆ : ದೇವರ ದರ್ಶನಕ್ಕೂ ಮುನ್ನ ಸರಕಾರದ ಮಾರ್ಗಸೂಚಿ ಹಾಗೂ ಆದೇಶದಂತೆ ಥರ್ಮಲ್ ಸ್ಕಾÂನ್ ಮಾಡಿಸಿ ನಂತರ ಸರತಿ ಸಾಲಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಜತೆಗೆ ಸ್ಯಾನಿಟೈಸರ್‌ನಿಂದ ಕೈಗಳನ್ನು ಉಜ್ಜಿಕೊಂಡು ಕಡ್ಡಾಯ ವಾಗಿ ಮಾಸ್ಕ್ ಅಥವಾ ಕರವಸ್ತ್ರವನ್ನು ಧರಿಸಿ ಒಳಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ . ದೇವಾಲಯದಲ್ಲಿ ಯಾವುದೇ ತೀರ್ಥ ಪ್ರಸಾದವನ್ನು ವಿತರಿಸುವುದಿಲ್ಲ ಹಾಗೂ ಹಣ್ಣು ಕಾಯಿಗಳಿಗೆ ಅವಕಾಶವಿರುವುದಿಲ್ಲ ಬದಲಾಗಿ ಹಣ್ಣು ಕಾಯಿ ತಂದವರು ದೇವಳದಲ್ಲಿ ಇರಿಸಿದ ಬುಟ್ಟಿಯಲ್ಲಿ ಇರಿಸಿ ಹೋಗಲು ಅವಕಾಶ ಕಲ್ಪಿಸಲಾಗಿದೆ.
ವಿಶೇಷ ಪೊಲೀಸ್ ಭದ್ರತಾ ವ್ಯವಸ್ಥೆ : ಕೋವಿಡ್ ಭೀತಿಯ ನಡುವೆಯೂ ಕೂಡಾ ನಿರೀಕ್ಷೆಗೂ ಮೀರಿ ಭಕ್ತರು ಮಾಸ್ಕ್ ಧರಿಸಿ ಆಗಮಿಸಿದ್ದು , ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದಂತೆ ದೇವಳದಲ್ಲಿ ವಿಶೇಷವಾದ ಪೊಲೀಸ್‌ಭದ್ರತೆಯ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕ ಕೆ. ಗಣೇಶ್ ಉಪಾಧ್ಯಾಯ ಸಹೋದರ, ಅರ್ಚಕ ವೃಂದ, ದೇವಳದ ಮೆನೇಜರ್ ತೆಕ್ಕಟ್ಟೆ ನಟೇಶ್ ಕಾರಂತ್ ಸಿಬಂದಿಗಳು ಉಪಸ್ಥಿತರಿದ್ದರು.
ಚಿತ್ರಗಳು : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.