Anegudde: ಆನೆಗುಡ್ಡೆ ದೇವಸ್ಥಾನ- ನಾಳೆ ಬ್ರಹ್ಮರಥೋತ್ಸವ
Team Udayavani, Dec 15, 2023, 12:19 AM IST
ತೆಕ್ಕಟ್ಟೆ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ, ಅಷ್ಟೋತ್ತರ ಸಹಸ್ರ ನಾಳಿಕೇರ ಗಣಪತಿ ಯಾಗವು ಡಿ. 16ರಂದು ಜರಗಲಿದೆ.
ಡಿ. 15ರ ಪೂರ್ವಾಹ್ನ ನವಕ ಪ್ರಧಾನ ಕಲಶಾಭಿಷೇಕ, ಅಗ್ನಿ ಜನನ, ಗಣಪತಿ ಹೋಮ, ರಾತ್ರಿ ಮೆರವಣಿಗೆ ರಂಗಪೂಜೆ, ಪಲ್ಲಕಿ ಉತ್ಸವ ಹಾಗೂ ಡಿ. 16ರಂದು ಪೂರ್ವಾಹ್ನ ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಪತಿ ಯಾಗ, ಪಾನಕ ವಿತರಣೆ, ಅನ್ನಸಂತರ್ಪಣೆ, ಸಂಜೆ 7ಕ್ಕೆ ರಥೋತ್ಸವ, ಸುಡುಮದ್ದು ಪ್ರದರ್ಶನ, ಡಿ. 17ರಂದು ಪೂರ್ವಾಹ್ನ ಚೂರ್ಣೋತ್ಸವ, ಅವಭೃಥ ಸ್ನಾನ, ವಸಂತಾರಾಧನೆ, ಮಂತ್ರಾಕ್ಷತೆ ನಡೆಯಲಿದೆ.
ಡಿ. 15ರಂದು ಸಂಜೆ 6ರಿಂದ ಜಾದೂ ಪ್ರದರ್ಶನ, ಡಿ. 16ರಂದು ಸಂಜೆ 5ರಿಂದ ಸ್ಯಾಕ್ಸೋಫೋನ್ ವಾದನ, 9.30ರಿಂದ ಯಕ್ಷಗಾನ ಪ್ರದರ್ಶನ, ಡಿ. 13ರಿಂದ ಡಿ. 16ರ ವರೆಗೆ ಅಪರಾಹ್ನ 3.30ರಿಂದ 5.30ರ ವರೆಗೆ ಭಜನೆ ಕಾರ್ಯಕ್ರಮ ಜರಗಲಿದೆ ಎಂದು ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.