Vitla: ಆನೆಕಲ್ಲು; ನದಿಯಲ್ಲಿ ಶಿವಲಿಂಗ ಪತ್ತೆ
Team Udayavani, Nov 10, 2024, 11:34 PM IST
ವಿಟ್ಲ: ಆನೆಕಲ್ಲು ಪಡ್ಪು ಶ್ರೀ ಜಲದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನಾಡಿ ವಿಧಾನದ ಮೂಲಕ ನಡೆಯುತ್ತಿದ್ದ ಪ್ರಶ್ನಾಚಿಂತನೆ ಸಂದರ್ಭ ದೇವಸ್ಥಾನದ ಮುಂಭಾಗ ಹರಿಯುವ ನದಿಯಲ್ಲಿ ಶಿವಲಿಂಗ ಇರುವ ವಿಚಾರ ತಿಳಿದು ಬಂದಿದ್ದು, ಅದನ್ನು ಪತ್ತೆ ಮಾಡುವ ಕಾರ್ಯ ಶನಿವಾರ ಸಂಜೆ ನಡೆದಿದೆ.
ಪಡ್ಪು ತೋಟದಲ್ಲಿ ದಶಕದ ಹಿಂದೆ ದೇವಸ್ಥಾನದ ಕುರುಹು ಪತ್ತೆಯಾದ ಸಂದರ್ಭದಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ಜಲದುರ್ಗೆಯ ಜತೆಗೆ ಶಿವನ ಸಾನಿಧ್ಯವೂ ಇದೆ ಎಂಬುದು ಕಾಣಿಸಿತ್ತು. ಜಲದುರ್ಗಾ ಪರಮೇಶ್ವರೀ ನೀರಿನಲ್ಲಿ ನಿಂತು ಶಿವನಿಗೋಸ್ಕರ ತಪಸ್ಸು ಮಾಡಿರುವ ಬಗ್ಗೆ ತಿಳಿದುಬಂದಿದೆ ಮತ್ತು ಶಿವ ಲಿಂಗ ಸಿಗುವ ಮೂಲಕ ದೇವಿಯ ತಪಸ್ಸು ಸಾಕಾರಗೊಂಡಿದೆ. ನದಿಯಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಶಿವ ಯೋಗೇಶ್ವರ ಎಂದು ಕರೆಯಲ್ಪಡುತ್ತಿದ್ದು, ಪ್ರತಿಯೊಬ್ಬ ಭಕ್ತರೂ ಪುರೋಹಿತ ಸಹಾಯದಲ್ಲಿ ಅರ್ಚನೆ ಮಾಡುವ ರೀತಿ ಶಿವಾಲಯವನ್ನು ನಿರ್ಮಾಣ ಮಾಡಲಾಗುವುದು ಎನ್ನಲಾಗಿದೆ.
ನಾಡಿ ಶೋಧನೆಯನ್ನು ಕರೂರು ಪಂಚಮದೇವಿ ಕಲಿಪಾಳ್ಯಮ್ ಶ್ರೀ ನಂದೀಶ್ವರರ್ ಜ್ಞಾನಪೀಠಂನ ಸ್ವಾಮಿ ಸಿದ್ಧ ಗುರೂಜಿಯವರು ನಡೆಸಿದ್ದಾರೆ. ಆನೆಕಲ್ಲು ಶ್ರೀ ಜಲದುರ್ಗಾ ಪರಮೇಶ್ವರೀ ಟ್ರಸ್ಟ್ ಗೌರವಾಧ್ಯಕ್ಷ ಒ. ಶ್ಯಾಮ್ ಭಟ್, ಜ್ಞಾನಪೀಠಂನ ಕಾರ್ಯನಿರ್ವಾಹಕ ಧರ್ಮದರ್ಶಿ ನಂದಿನಿ ಕೃಷ್ಣಕುಮಾರ್, ಟ್ರಸ್ಟಿ ಶಿವರಾಮನ್, ವೆಂಕಟ್, ಮಾತಾ ಅಮೃತಾನಂದಮಯೀ ಆಶ್ರಮದ ಎ.ಪಿ. ಲಲಿತಾ, ಶ್ರೀ ಜಲದುರ್ಗಾ ಪರಮೇಶ್ವರೀ ಕ್ಷೇತ್ರದ ಸಂಚಾಲಕ ಸುರೇಶ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುಷ್ಪರಾಜ್, ನೆಲಜಲ ಹೋರಾಟ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಪಾಲಿಗೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.