Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ
Team Udayavani, Apr 17, 2024, 12:23 AM IST
ಪುತ್ತೂರು: ಲೋಕಸಭೆ ಚುನಾವಣೆಗೆ ಸಂಬಂಧಿಸಿ ಮನೆ-ಮನೆಗೆ ಮತ ಚೀಟಿ ವಿತರಣೆಗೆ ತೆರಳಿದ್ದ ರೋಟರಿಪುರ ಅಂಗನವಾಡಿ ಕಾರ್ಯಕರ್ತೆಗೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ ಘಟನೆ ಎ. 16ರಂದು ನಡೆದಿದೆ.
ಚುನಾವಣಾಧಿಕಾರಿ ಸೂಚನೆಯಂತೆ ಅಂಗನವಾಡಿ ಕಾರ್ಯಕರ್ತೆ ಯರು ಮನೆ ಮನೆಗೆ ತೆರಳುವ ಕಾರ್ಯ ಎ. 16ರಿಂದ ನಡೆಯುತ್ತಿದೆ. ರೋಟರಿಪುರ ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ಅವರು ಚೀಟಿ ವಿತರಣೆಗೆಂದು ಮತದಾರರ ಮನೆಯೊಂದಕ್ಕೆ ಹೋಗುತ್ತಿದ್ದ ವೇಳೆ ಫಾತಿಮಾ ಎಸ್. ಏಕಾಏಕಿಯಾಗಿ ಬಂದು ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಗಾಯಗೊಂಡ ಅಂಗನವಾಡಿ ಕಾರ್ಯಕರ್ತೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಈ ಪ್ರಕರಣವನ್ನು ಅಂಗನವಾಡಿ ಕಾರ್ಯಕತೆರ್ಯರ ಮತ್ತು ಸಹಾಯಕಿಯರ ಸಂಘ ಖಂಡಿಸಿದೆ. ಸಂಘದ ಅಧ್ಯಕ್ಷೆ ಕಮಲಾ ಮತ್ತು ಪದಾಧಿಕಾರಿಗಳು ಗಾಯಾಳುವನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಈ ಘಟನೆಯಿಂದಾಗಿ ಬಿಎಲ್‌ಒಗಳು ಭೀತರಾಗಿದ್ದಾರೆ. ನಮಗೆ ಯಾವುದೇ ರಕ್ಷಣೆ ಇಲ್ಲ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಹೆಚ್ಚಿನ ಬಿಎಲ್‌ಒಗಳು ಅಸ್ವಸ್ಥರಾಗಿದ್ದಾರೆ. ಆದುದರಿಂದ ಮತದಾರರ ಚೀಟಿಯನ್ನು ಒಂದು ಕಡೆ ನಿಗದಿತ ಜಾಗದಲ್ಲಿ ವಿತರಿಸುವಂತೆ ನಾವು ಸಹಾಯಕ ಚುನಾವಣಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಮನವಿ ಮಾಡಲಿದ್ದೇವೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.