ಪಿಲಿಕುಳದಲ್ಲಿ ಪ್ರಾಣಿಗಳಿಗೆ ಮಾಂಸ ಸಿಗುತ್ತಿಲ್ಲ !
Team Udayavani, Apr 7, 2020, 6:00 AM IST
ಮಂಗಳೂರು: ದೇಶದೆಲ್ಲೆಡೆ ಲಾಕ್‌ಡೌನ್ ಜಾರಿಯಲ್ಲಿರುವಾಗ ಜನರು ದಿನಸಿ ವಸ್ತುಗಳ ಖರೀದಿಗೆ ತೊಂದರೆ ಅನುಭವಿಸುತ್ತಿರಬೇಕಾದರೆ, ಅತ್ತ ಪಿಲಿಕುಳ ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿರುವ ಪ್ರಾಣಿಗಳಿಗೂ ಎರಡು ವಾರಗಳಿಂದ ಮಾಂಸ ಸಿಗುತ್ತಿಲ್ಲ!
ಇಲ್ಲಿ ಸುಮಾರು 100ಕ್ಕೂ ಅಧಿಕ ಜಾತಿಯ 1,200ರಷ್ಟು ಪ್ರಾಣಿ-ಪಕ್ಷಿಗಳಿವೆ. ಇದರಲ್ಲಿ 13 ಹುಲಿ, 4 ಸಿಂಹ, 12 ಚಿರತೆ, 2 ಕರಡಿ, ಕಾಡುಬೆಕ್ಕು, ಚಿರತೆ ಬೆಕ್ಕು ಸಹಿತ ಹಲವು ಮಾಂಸಾಹಾರಿ ಪ್ರಾಣಿಗಳಿವೆ. ನಿತ್ಯ ಇವುಗಳಿಗೆ ಸುಮಾರು 150 ಕೆಜಿಗಿಂತಲೂ ಅಧಿಕ ವಿವಿಧ ರೀತಿಯ ಮಾಂಸ, ಸುಮಾರು 50 ಕೆಜಿ ಕೋಳಿ ಮಾಂಸ ಅಗತ್ಯವಿದೆ. ಪ್ರತೀ ಹುಲಿಗೆ ದಿನಕ್ಕೆ 8ರಿಂದ 10 ಕಿಲೋ ಮಾಂಸ ಅಗತ್ಯವಿದೆ. ಇದನ್ನು ಪ್ರತೀದಿನ ಪಿಲಿಕುಳ ಆಡಳಿತ ಮಂಡಳಿಯು ಟೆಂಡರ್ ಪಡೆದವರಿಂದ ತರಿಸುತ್ತದೆ. ಆದರೆ ಲಾಕ್‌ಡೌನ್ ಆದ ಬಳಿಕ ಮಾಂಸದ ಕೊರತೆ ಎದುರಾಗಿದೆ. ಹೀಗಾಗಿ ಪ್ರಾಣಿಗಳ ನಿರ್ವಹಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮಾಂಸದ ಬದಲು ಕೋಳಿ ಮಾಂಸ!
ಕಳೆದೆರಡು ವಾರಗಳಿಂದ ಕೋಳಿ ಮಾಂಸ ತರಿಸಲಾಗುತ್ತಿದೆ. ಹೊರಜಿಲ್ಲೆಗಳ ಕೋಳಿಗಳಲ್ಲಿ ಹಕ್ಕಿಜ್ವರ ಇತ್ತು ಎಂಬ ಕಾರಣದಿಂದ ಅದನ್ನು ನಿಲ್ಲಿಸಿ, ಸದ್ಯ ಸ್ಥಳೀಯವಾಗಿ ಅಧಿಕ ಕೆಜಿ ಕೋಳಿ ಮಾಂಸವನ್ನೇ ಪ್ರಾಣಿಗಳಿಗೆ ಹಾಕಲಾಗುತ್ತಿದೆ. ಹುಲಿ, ಸಿಂಹ, ಚಿರತೆಗಳಿಗೆ ಕೋಳಿ ಮಾಂಸವನ್ನೇ ಹಲವು ದಿನ ನೀಡುವುದು ಅವುಗಳ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ ಎಂದು ಕೂಡ ಹೇಳಲಾಗುತ್ತಿದೆ.
5 ಎಕರೆ ಜಾಗದಲ್ಲಿ ಹುಲ್ಲು ಬೆಳೆದಿರುವ ಕಾರಣ, ಸಸ್ಯಾಹಾರಿ ಪ್ರಾಣಿಗಳು ತಿನ್ನುವ ಆಹಾರ ಲಭ್ಯತೆ ಇರುವುದರಿಂದ ಸದ್ಯಕ್ಕೇನು ಸಮಸ್ಯೆ ಇಲ್ಲ. ಆದರೆ ಕೆಲವು ಪಕ್ಷಿಗಳಿಗೆ ಮೀನು ಬೇಕಾಗಿದ್ದು ಅದು ಬೇಕಾದಷ್ಟು ಸಿಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.