ಅನ್ನಭಾಗ್ಯ: ನಗದು ಬದಲು ಅಕ್ಕಿಗೆ ಫಲಾನುಭವಿಗಳ ಬೇಡಿಕೆ
ನಗದು ಬೇಡ ಅಂತಿದ್ದಾರೆ ಶೇ.80 ಗ್ರಾಹಕರು; ಆಹಾರ ಇಲಾಖೆ ಸಮೀಕ್ಷೆಯಲ್ಲಿ ಬಯಲು
Team Udayavani, Dec 28, 2023, 7:10 AM IST
ಬೆಂಗಳೂರು: ಸರಕಾರ “ಅನ್ನಭಾಗ್ಯ”ದಡಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ನಗದು ನೀಡುತ್ತಿದೆ. ಆದರೆ ಫಲಾನುಭವಿಗಳು “ನಗದು ಬದಲಿಗೆ ಅಕ್ಕಿ ಕೊಡಿ’ ಎಂನ್ನುತ್ತಿದ್ದಾರೆ!
ಜುಲೈ ತಿಂಗಳಿನಿಂದ ಸರಕಾರ ಅನ್ನಭಾಗ್ಯಕ್ಕೆ ಚಾಲನೆ ನೀಡಿದೆ. ಇದರಡಿ ಅಕ್ಕಿ ಬದಲಿಗೆ ಪ್ರತಿ ಕೆಜಿಗೆ 35 ರೂ.ಗಳಂತೆ ತಲಾ 170 ರೂ. ನೇರ ನಗದು ವರ್ಗಾವಣೆ ಮೂಲಕ ನೀಡುತ್ತಿದೆ. ಇದರ ನಡುವೆಯೇ ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯಹವಾರಗಳ ಇಲಾಖೆಯಿಂದ ಫಲಾನುಭವಿಗಳ ಆಯ್ಕೆ ಏನು ಎಂಬುದರ ಸಮೀಕ್ಷೆ ನಡೆಸಿದೆ. ಅದರಲ್ಲಿ ಶೇ. 80ರಷ್ಟು ಗ್ರಾಹಕರು ತಮಗೆ ನಗದು ಬದಲಿಗೆ ಅಕ್ಕಿ ನೀಡುವುದೇ ಸೂಕ್ತ ಎಂದು ಹೇಳಿರುವುದು ಬೆಳಕಿಗೆ ಬಂದಿದೆ.
ಪ್ರತಿ ತಾಲೂಕಿನ ಕನಿಷ್ಠ ಎರಡು ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ನಿರೀಕ್ಷಕರು, ಕೆಲವೆಡೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡಿತರ ಚೀಟಿದಾರರಿಂದ ಸಿದ್ಧ ಮಾದರಿ ಪ್ರಶ್ನೆಗಳನ್ನು ಮುಂದಿಟ್ಟು ಅಭಿಪ್ರಾಯ ಸಂಗ್ರಹಿಸಲಾಗಿದೆ. ಅವುಗಳನ್ನು ಕ್ರೋಢೀಕರಿಸಿ ವರದಿ ಸಿದ್ಧಪಡಿಸಲಾಗಿದೆ. ಅದರಂತೆ ಶೇ. 80ರಿಂದ 82ರಷ್ಟು ಗ್ರಾಹಕರು ಅಕ್ಕಿ ಬದಲಿಗೆ ನಗದು ನೀಡುತ್ತಿರುವ ಬಗ್ಗೆ ತೃಪ್ತವಾಗಿಲ್ಲ. ನಗದು ಬದಲಿಗೆ ಅಕ್ಕಿ ನೀಡುವುದೇ ಉತ್ತಮ. ಇದರಿಂದ ಬಡ ಕುಟುಂಬಗಳ ಹಸಿವು ನೀಗುವುದರ ಜತೆಗೆ ಸರಕಾರದ ಮೂಲ ಉದ್ದೇಶವೂ ಈಡೇರಿದಂತಾ ಗುತ್ತದೆ ಎಂದು ಹೇಳಿರುವುದಾಗಿ ಇಲಾಖೆ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಪ್ರಸ್ತುತ ನೀಡುತ್ತಿರುವ ನಗದು ಅನ್ಯಉದ್ದೇಶಗಳಿಗೆ ಬಳಕೆಯಾಗುತ್ತದೆ ಮತ್ತು ಆಗುತ್ತಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ನೀಡಿದರೆ, ತಿಂಗಳ ಪೂರ್ತಿ ಮನೆಮಂದಿಯ ಹಸಿವು ನೀಗುತ್ತದೆ. ಕೆಲವೆಡೆ ಸೋರಿಕೆ ಆಗಬಹುದು ಅಥವಾ ಹಲವರು ಬೇರೆಯವರಿಗೆ ಮಾರಾಟವೂ ಮಾಡಬಹುದು. ಆದರೆ ಅತಿಹೆಚ್ಚು ಜನರಿಗೆ ಅನು ಕೂಲ ಆಗಲಿದೆ. ಈ ನಿಟ್ಟಿನಲ್ಲಿ ಸರಕಾರ ಮುಂದಾಗ ಬೇಕು ಎಂದು ಹೇಳಿರುವುದು ವರದಿಯಿಂದ ತಿಳಿದುಬಂದಿದೆ. ಜನರ ನಾಡಿ ಮಿಡಿತ ಕೂಡ ಅಕ್ಕಿ ನೀಡಬೇಕು ಎನ್ನುವುದೇ ಆಗಿದೆ. ವಿಪಕ್ಷಗಳ ಒತ್ತಡವೂ ಇದೇ ಆಗಿದೆ. ಆದರೆ ಸರಕಾರಕ್ಕೆ ಹೆಚ್ಚುವರಿ ಅಕ್ಕಿ ದೊರೆಯುತ್ತಿಲ್ಲ. ಇದೇ ಕಾರಣಕ್ಕೆ ವರದಿಯನ್ನು ಬಿಡುಗಡೆ ಮಾಡುತ್ತಿಲ್ಲ. ತೆಲಂಗಾಣದಲ್ಲಿ ತಮ್ಮದೇ ಪಕ್ಷ ಅಧಿಕಾರಕ್ಕೆ ಬಂದ ಬೆನ್ನಲ್ಲೇ ನಿರೀಕ್ಷೆಗಳು ಗರಿಗೆದರಿದ್ದವು. ಆದರೆ, ಅಲ್ಲಿಯೂ ಅಕ್ಕಿಗೆ ಬೇಡಿಕೆ ಇದೆ.
ಮತ್ತೂಂದೆಡೆ ಮಳೆ ಕೊರತೆಯಿಂದ ಭತ್ತದ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಖೋತಾ ಆಗಿದೆ. ಈ ಅಂಶಗಳ ಹಿನ್ನೆಲೆಯಲ್ಲಿ ತಾನೇ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ವರದಿಯನ್ನು ಬಿಡುಗಡೆಗೊಳಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
“ಎರಡೂ ಬೇಡ; ತೊಗರಿ, ಅಡುಗೆ ಎಣ್ಣೆ ಕೊಡಿ”
ಕೆಲವು ಜಿಲ್ಲೆಗಳಿಂದ ಹೆಚ್ಚುವರಿ ಅಕ್ಕಿಯೂ ಬೇಡ; ನಗದು ಬೇಡ. ಇವೆರಡರ ಬದಲಿಗೆ ಸಿಎಂ ಸಿದ್ದರಾಮಯ್ಯ ಅವರ ಮೊದಲ ಆಡಳಿತ ಅವಧಿಯಲ್ಲಿ ಅಂದರೆ 2013-2017ರಲ್ಲಿ ನೀಡಲಾಗುತ್ತಿದ್ದ ಅಕ್ಕಿ ಜತೆಗೆ ತೊಗರಿಬೇಳೆ, ಸಕ್ಕರೆ, ಅಡುಗೆ ಎಣ್ಣೆ ನೀಡಬೇಕು ಎಂದು ಪಡಿತರ ಚೀಟಿದಾರರು ಮನವಿ ಮಾಡಿದ್ದಾರೆ. ತೊಗರಿ, ಅಡುಗೆ ಎಣ್ಣೆ, ಸಕ್ಕರೆ ಬೆಲೆ ಗಗನಕ್ಕೇರಿದೆ. ತಲಾ ಯೂನಿಟ್‌ಗೆ 170 ರೂ. ನೀಡುತ್ತಿರುವ ಸರಕಾರ, ಅದೇ ಹಣದಲ್ಲಿ ಈ ಉತ್ಪನ್ನಗಳನ್ನು ನೀಡಬೇಕು. ಆಗ ಬಡ ಕುಟುಂಬಗಳಿಗೆ ನೆರವಾಗುವುದರ ಜತೆಗೆ ಹಣ ಅನ್ಯ ಉದ್ದೇಶಕ್ಕೆ ಬಳಕೆಯಾಗುವುದೂ ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
ಈಗಿರುವುದೇ ಮುಂದುವರಿಯಲಿ; ಕರಾವಳಿ ಜಿಲ್ಲೆಗಳು
ಕರಾವಳಿ ಭಾಗದ ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಈಗಿರುವ ವ್ಯವಸ್ಥೆಯನ್ನೇ ಮುಂದುವರಿಸುವುದು ಸೂಕ್ತ ಎಂದು ಆ ಭಾಗದ ಪಡಿತರ ಚೀಟಿದಾರರು ಹೇಳಿದ್ದಾರೆ. ಇದಕ್ಕೆ ಮುಖ್ಯವಾಗಿ ಅಲ್ಲಿನ ಜನ ಕುಚಲಕ್ಕಿ ಸೇವಿಸುತ್ತಾರೆ. ಹಾಗಾಗಿ ಈ ಅಭಿಪ್ರಾಯ ವ್ಯಕ್ತವಾಗಿದೆ ಎಂದೂ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.