70 ವರ್ಷ ದಾಟಿದ ಮರಗಳಿಗೂ ಪಿಂಚಣಿ ಘೋಷಣೆ !
Team Udayavani, Oct 8, 2023, 12:51 AM IST
ಚಂಡೀಗಢ: ಹರಿಯಾಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹುಲ್ಲು ಗಾವಲು ಸುಡುವ ಪ್ರಕರಣ ಹೆಚ್ಚುತ್ತಿದ್ದು, ಇದರಿಂದ ವಾಯು ಮಾಲಿನ್ಯವೂ ಅಧಿಕವಾಗಿರುವ ಹಿನ್ನೆಲೆಯಲ್ಲಿ ಮರಗಳನ್ನು ರಕ್ಷಿಸುವ ಮೂಲಕ ಸಮಸ್ಯೆ ಬಗೆಹರಿಸಲು ಸರಕಾರ ಮುಂ ದಾಗಿದೆ. ಇದಕ್ಕಾಗಿ 70 ವರ್ಷ ಮೇಲ್ಪಟ್ಟ ಮರಗಳನ್ನು ಪೋಷಿ ಸುವವರಿಗೆ 2,750 ರೂ.ಗಳ ಪಿಂಚಣಿ ಯನ್ನು ಘೋಷಿಸಿದೆ.
ಹೌದು, ಪ್ರಾಣವಾಯು ದೇವತಾ ಪಿಂಚಣಿ ಯೋಜನೆಯನ್ನು ನವೆಂ ಬರ್ 1ರಿಂದ ಆರಂಭಿಸುವುದಾಗಿ ರಾಜ್ಯ ಪರಿಸರ ಮತ್ತು ಅರಣ್ಯ ಸಚಿವ ಕನ್ವರ್‌ಪಾಲ್ ಗುರ್ಜರ್ ತಿಳಿಸಿದ್ದಾರೆ. ರಾಜ್ಯದಲ್ಲಿ 70 ವರ್ಷ ದಾಟಿದ 4 ಸಾವಿರ ಮರಗಳನ್ನು ಈಗಾಗಲೇ ಗುರುತಿಸಲಾಗಿದೆ. ಅಂಥ ಮರಗಳನ್ನು ಪೋಷಿಸುವವರಿಗೆ ವಾರ್ಷಿಕವಾಗಿ 2,750 ರೂ. ಪಿಂಚಣಿ ನೀಡಲಾಗುತ್ತದೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಈ ಉಪಕ್ರಮ ಆರಂಭಿಸಲಾಗುತ್ತಿದ್ದು, ದೇಶದಲ್ಲಿ ಇಂಥ ಪಿಂಚಣಿ ಯೋಜನೆ ಜಾರಿಗೆ ತರುತ್ತಿರುವ ಮೊದಲ ರಾಜ್ಯವೆಂಬ ಖ್ಯಾತಿಯೂ ಹರಿಯಾಣಕ್ಕೆ ಸೇರಲಿದೆ. ಯಾವುದೇ ನಿವಾಸಿಗಳ ಮನೆಯ ವ್ಯಾಪ್ತಿಯಲ್ಲಿ 70 ವರ್ಷ ದಾಟಿದ ಮರವಿದ್ದರೆ ಅದರ ಪಿಂಚಣಿ ಅವರಿಗೆ, ಹೊಲದಲ್ಲಿದ್ದರೆ ಆ ಹೊಲದ ರೈತರನಿಗೆ, ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿದ್ದರೆ ಅರಣ್ಯ ಇಲಾಖೆಯೂ ಫಲಾನುಭವಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.