ಸಂಸ್ಕೃತಿ, ಸಾಹಿತ್ಯದ ಸಂಭ್ರಮಾಚರಣೆ ಆರೋಗ್ಯಪೂರ್ಣ ಸಮಾಜದ ಹೆಗ್ಗುರುತು: ಟಿ.ವಿ. ಮೋಹನದಾಸ ಪೈ
Team Udayavani, Mar 21, 2022, 6:05 AM IST
ಮಂಗಳೂರು: ಯಾವುದೇ ಸಮುದಾಯ ಮುಂದುವರಿದ ಸಮಾಜ ಎನಿಸಬೇಕಾದಲ್ಲಿ ತನ್ನ ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಮತ್ತು ಅದಕ್ಕಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಅಧ್ಯಕ್ಷ ಟಿ.ವಿ. ಮೋಹನದಾಸ ಪೈ ಹೇಳಿದ್ದಾರೆ.
ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನ ಆಶ್ರಯದಲ್ಲಿ ರವಿವಾರ ಜರಗಿದ ವಾರ್ಷಿಕ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಸಮ್ಮಾನಿತರನ್ನು ಆನ್‌ಲೈನ್ ಮೂಲಕ ಅಭಿನಂದಿಸಿ ಅವರು ಮಾತನಾಡಿದರು.
ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ, ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ, ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ್ ಹಾಗೂ ಬಸ್ತಿ ವಾಮನ ಶೆಣೈ ಸೇವಾ ಪುರಸ್ಕಾರಗಳನ್ನು ಪ್ರದಾನ ಮಾಡಿದ ಜ್ಞಾನಪೀಠ ಪುರಸ್ಕೃತ ಕೊಂಕಣಿ ಸಾಹಿತಿ ದಾಮೋದರ ಮೌಜೊ ಅವರು ಮಾತನಾಡಿ, ತನ್ನ ಕಾದಂಬರಿ “ಸುನಾಮಿ ಸೈಮನ್’ಗೆ 2012ರಲ್ಲಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭವನ್ನು ಸ್ಮರಿಸಿ ಈ ಪ್ರಶಸ್ತಿಯಿಂದ ದೊರಕಿದ ಸ್ಫೂರ್ತಿಯಿಂದ ತನ್ನ ಸಾಹಿತ್ಯ ಕೃಷಿಯಲ್ಲಿ ವಿಶೇಷವಾದ ಸೇವೆ ಸಾಧ್ಯವಾಯಿತು. ಇದರಿಂದಲೇ ತನಗೆ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಸೇರಿದಂತೆ ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೊರಕಲು ಸಾಧ್ಯವಾಯಿತು ಎಂದರು.
ಪ್ರಶಸ್ತಿ ಪ್ರದಾನ
2021ನೇ ಸಾಲಿನ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರವನ್ನು “ಮಾಸಾಂ’ ಕಥಾ ಸಂಕಲನಕ್ಕಾಗಿ ಆಂಟನಿ ಬಾಕೂìರ್ ಅವರಿಗೆ, ಇಂದ್ರಧೊಣು ಉದೇಂವ್ ಕೊಂಕಣಿ ಕವಿತಾ ಸಂಕಲನಕ್ಕಾಗಿ ಕವಿ ಉದಯ್ ಮ್ಹಾಂಬರೋ ಅವರಿಗೆ ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ, ಕೊಂಕಣಿ ಭಾಷೆ ಮತ್ತು ಸಂಸ್ಕೃತಿಗೆ ಜೀವಮಾನದ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನವನ್ನು ಕೊಂಕಣಿ ವ್ಯಾಕರಣ ಮತ್ತು ನಿಘಂಟುಕಾರ ಸುರೇಶ ಜಯವಂತ ಬೋರಕಾರ್ ಅವರಿಗೆ ನೀಡಲಾಯಿತು.
ಸಮಾಜ ಸೇವೆ ಸಲ್ಲಿಸಿದ ಕೊಂಕಣಿ ಸಾಧಕರಿಗೆ ಕೊಡಮಾಡುವ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಪುರಸ್ಕಾರವನ್ನು ನಿರ್ಗತಿಕರ ಸೇವೆಗೆ ಮುಡಿಪಾಗಿಟ್ಟ ವೈಟ್‌ಡೊವ್ ಸಂಸ್ಥೆಯ ಮುಖ್ಯಸ್ಥೆ ಕೊರೀನ್ ಎ. ರಸಿVನ್ಹಾ ಅವರಿಗೆ ನೀಡಲಾಯಿತು. ಕಾರ್ಡಿಯಾಲಜಿ ಎಟ್ ಡೋರ್ ಸ್ಟೆಪ್ ಸಂಸ್ಥೆಯ ಮೂಲಕ ಹಳ್ಳಿ ಹಳ್ಳಿಗಳಿಗೆ ಹೃದ್ರೋಗ ರೋಗ ಪತ್ತೆ ವ್ಯವಸ್ಥೆಯನ್ನು ತಲುಪಿಸುತ್ತಿರುವ ಡಾ| ಪದ್ಮನಾಭ ಕಾಮತ್ ಅವರಿಗೆ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ನೀಡಲಾಯಿತು. ಈ ಎಲ್ಲ ಪ್ರಶಸ್ತಿಗಳೂ ತಲಾ 1 ಲಕ್ಷ ರೂ. ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿವೆ.
ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಸ್ವಾಗತಿಸಿದರು. ಜ್ಞಾನಪೀಠದ ಗರಿಮೆಯಿಂದ ಕೊಂಕಣಿ ಸಾಹಿತ್ಯದ ಕೀರ್ತಿಯನ್ನು ಉತ್ತುಂಗ ಕ್ಕೇರಿಸಿದಕ್ಕೋಸ್ಕರ ದಾಮೋದರ ಮೌಜೊ ಅವರನ್ನು ನಂದಗೋಪಾಲ ಶೆಣೈಯವರು ಟೆಂಪಲ್ಸ್ ಆಫ್ ಗೋವಾ ಕಾಫಿ ಟೇಬಲ್ ಪುಸ್ತಕವನ್ನು ನೀಡಿ ಅಭಿನಂದಿಸಿದರು.
ಟ್ರಸ್ಟಿಗಳಾದ ಮೆಲ್ವಿನ್ ರಾಡ್ರಿಗಸ್, ಪಯ್ಯನೂರು ರಮೇಶ ಪೈ, ಗಿಲ್ಬರ್ಟ್ ಡಿ’ಸೋಜಾ, ಬಿ.ಆರ್. ಭಟ್ ಮತ್ತು ಡಾ| ಕಿರಣ್ ಬುಡ್ಕುಳೆ ಅವರುಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ಅಕಾಡೆಮಿ ಅಧ್ಯಕ್ಷ ಡಾ| ಕೆ. ಜಗದೀಶ ಪೈ, ವಿಶ್ವಕೊಂಕಣಿ ಕೇಂದ್ರದ ರಮೇಶ್ ನಾಯಕ್, ಶಕುಂತಳಾ ಕಿಣಿ, ಗುರುದತ್ ಬಂಟ್ವಾಳ್‌ಕಾರ್, ಸಿ.ಡಿ. ಕಾಮತ್ ಉಪಸ್ಥಿತರಿದ್ದರು.
ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯದರ್ಶಿ ಗಿರಿಧರ ಕಾಮತ್ ವಂದಿಸಿದರು. ಸ್ಮಿತಾ ಶೆಣೈ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.