![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Dec 22, 2023, 11:23 PM IST
ಮೆಲ್ಬರ್ನ್: ಊಸರವಳ್ಳಿ ಬಣ್ಣ ಬದಲಿಸುವುದು ಗೊತ್ತು. ಆದರೀಗ ಕ್ರಿಕೆಟ್ ಸ್ಟಂಪ್‌ಗಳು ಬಣ್ಣ ಬದಲಿಸುವ ಕಾಲ ಬಂದಿದೆ. ಜಾಗತಿಕ ಕ್ರಿಕೆಟನ್ನು ವರ್ಣಮಯಗೊಳಿಸಿದ ಆಸ್ಟ್ರೇಲಿಯ ಇಂಥದೊಂದು ಪ್ರಯೋಗದಿಂದ ಸುದ್ದಿಯಾಗಿದೆ. ಕ್ರಿಕೆಟಿನ 5 “ಪ್ರಕ್ರಿಯೆ”ಗಳಿಗೆ 5 ರೀತಿಯಲ್ಲಿ ಬಣ್ಣ ಬದಲಿಸುವ “ಎಲೆಕ್ಟ್ರಾ ಸ್ಟಂಪ್”ಗಳ ನೂತನ ತಂತ್ರಜ್ಞಾನವನ್ನು ಪ್ರಯೋಗಿಸಿದೆ.
ವನಿತಾ ಬಿಗ್ ಬಾಶ್ ಲೀಗ್‌ನ ಸಿಡ್ನಿ ಸಿಕ್ಸರ್ ಮತ್ತು ಅಡಿಲೇಡ್ ಸ್ಟ್ರೈಕರ್ ನಡುವಿನ ಪಂದ್ಯದ ವೇಳೆ ಮೊದಲ ಬಾರಿಗೆ ಈ ಸ್ಟಂಪ್‌ಗ್ಳು ಬಣ್ಣ ಬದಲಿಸುತ್ತಿರುವುದನ್ನು ಕಂಡು ಕ್ರಿಕೆಟ್ ವೀಕ್ಷಕರು ರೋಮಾಂಚನಗೊಂಡರು. ಮಾರ್ಕ್ ವೋ ಸೇರಿದಂತೆ ಕ್ರಿಕೆಟಿನ ಮಾಜಿ, ಹಾಲಿ ಆಟಗಾರರೆಲ್ಲ ಇದೊಂದು ಕ್ರಾಂತಿಕಾರಿ ಹೆಜ್ಜೆ ಎಂಬುದಾಗಿ ಬಣ್ಣಿಸಿದ್ದಾರೆ.
ಸ್ಟಂಪ್‌ಗಳು ಈ ರೀತಿ ಬಣ್ಣ ಬದಲಿಸುವ ಸಂದರ್ಭದಲ್ಲಿ, ಅಂಗಳದಲ್ಲಿ ನಡೆಯುವ ವಿದ್ಯಮಾನಗಳು ವೀಕ್ಷಕರಿಗೆ ನಿಖರವಾಗಿ ತಿಳಿಯುತ್ತದೆ. ಚೆಂಡು ಬಡಿದಾಗಲೆಲ್ಲ ಸ್ಟಂಪ್ಸ್ ಕೆಂಪು ಬಣ್ಣಕ್ಕೆ ತಿರುಗುವ ತಂತ್ರಜ್ಞಾನ ಈಗಾಗಲೇ ಚಾಲ್ತಿಯಲ್ಲಿದೆ. ಇದೀಗ ಸುಧಾರಣೆಗೊಂಡು “ಬಹುರೂಪ”ಕ್ಕೆ ತಿರುಗಿದೆ.
ಕೆರ್ರಿ ಪ್ಯಾಕರ್ ಪ್ರಭಾವ
ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯ ಏನೆಲ್ಲ ವರ್ಣಪ್ರಯೋಗ ಮಾಡಿದೆಯೋ, ಅಲ್ಲೆಲ್ಲ ಕೆರ್ರಿ ಪ್ಯಾಕರ್ ಪ್ರಭಾವ ದಟ್ಟವಾಗಿ ಗೋಚರಿಸುತ್ತದೆ. ಬಣ್ಣದ ಜೆರ್ಸಿ, ಹೊನಲು ಬೆಳಕಿನ ಆಟವೆಲ್ಲ ಪ್ಯಾಕರ್ ಅವರ ಕ್ರಾಂತಿಕಾರಿ ಹೆಜ್ಜೆಗಳಾಗಿದ್ದವು. 1992ರ ವಿಶ್ವಕಪ್ ವೇಳೆ ಆಸ್ಟ್ರೇಲಿಯ ಮೊದಲ ಸಲ ಇದನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಯೋಗಿಸಿ ಭರ್ಜರಿ ಯಶಸ್ಸು ಕಂಡಿತು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲೀಗ ಕಲರ್‌ಫುಲ್ ಜೆರ್ಸಿ, ಫ್ಲಡ್‌ಲೈಟ್ ಖಾಯಂ ಆಗಿದೆ. ಇದೀಗ ಎಲೆಕ್ಟ್ರಾ ಸ್ಟಂಪ್ಸ್ ಸರದಿ.
ತೆರೆಯಲಿದೆ ವರ್ಣಲೋಕ
ಈ ಸ್ಟಂಪ್ಸ್ 5 ಬೇರೆ ಬೇರೆ ಸಂದರ್ಭಗಳಲ್ಲಿ ವಿವಿಧ ಬಣ್ಣಗಳನ್ನು ಹೊಮ್ಮಿಸುತ್ತದೆ. ಬೌಂಡರಿ, ಸಿಕ್ಸರ್, ನೋಬಾಲ್, ಔಟ್ ಹಾಗೂ ಓವರ್ ಬದಲಾಗುವ ವೇಳೆ ಸ್ಟಂಪ್‌ಗಳ ಬಣ್ಣ ಬದಲಾಗುತ್ತವೆ. ಈ ವರ್ಣಮಯ ಚಿತ್ತಾರ ಹೀಗಿದೆ…
ಔಟ್ ಆದಾಗ: ಮೂರೂ ಸ್ಟಂಪ್‌ಗಳು ಬೆಂಕಿಯುಗುಳುವ ಕೆಂಪು ಬಣ್ಣಕ್ಕೆ ಪರಿವರ್ತನೆಗೊಳ್ಳುತ್ತವೆ.
ಬೌಂಡರಿ ಬಿದ್ದಾಗ: ಇಲ್ಲಿ ವರ್ಣಗಳ ಸಂಗಮವಾಗುತ್ತದೆ. ಒಂದರ ಹಿಂದೊಂದರಂತೆ ಬೇರೆ ಬೇರೆ ಬಣ್ಣಗಳು ಮೂಡಿಬರುತ್ತವೆ.
ಸಿಕ್ಸರ್ ಸಿಡಿದಾಗ: ಇಲ್ಲಿ ಹತ್ತಾರು ಬಣ್ಣಗಳು ದೀಪಗಳ ಸರಮಾಲೆಯಂತೆ ಝಗಮಗಿಸುತ್ತವೆ.
ನೋ ಬಾಲ್ ಆದಾಗ: ಸ್ಟಂಪ್‌ಗಳು ಬಿಳಿ ಮತ್ತು ಕೆಂಪು ಬಣ್ಣಕ್ಕೆ ಪರಿವರ್ತನೆ ಆಗುತ್ತವೆ.
ಓವರ್ ಪೂರ್ತಿ ಆದಾಗ: ಸ್ಟಂಪ್‌ಗಳು ನೇರಳೆ ಮತ್ತು ನೀಲಿ ಬಣ್ಣಗೆ ತಿರುಗುತ್ತವೆ.
“ಈ ಸ್ಟಂಪ್ಸ್ ಕ್ರಿಕೆಟಿಗರಿಗೆ ಮತ್ತು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಕ್ರಿಸ್ಮಸ್ ಉಡುಗೊರೆಯಾಗಿದೆ”
– ಮಾರ್ಕ್ ವೋ (ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ)
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.