Karnataka: ರಾಜ್ಯದ 1.20 ಕೋಟಿ ಮನೆಗಳಿಗೆ ಸೇರಿತು ಅಯೋಧ್ಯೆ ರಾಮನ ಅನುಗ್ರಹ ಮಂತ್ರಾಕ್ಷತೆ
ಕಳೆದ ಮೂರು ವಾರಗಳಲ್ಲಿ 24,000 ಗ್ರಾಮಗಳಲ್ಲಿ ಮನೆಮನೆಗೆ ಶ್ರೀ ರಾಮ ಮಂತ್ರಾಕ್ಷತೆ
Team Udayavani, Jan 22, 2024, 5:27 AM IST
ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ರಾಜ್ಯದಲ್ಲಿ ರಾಮ ನಾಮ ಸ್ಮರಣೆಯ ಅನುಗ್ರಹ ಮಂತ್ರಾಕ್ಷತೆ 1.20 ಕೋಟಿ ಮನೆ ಬಾಗಿಲಿಗೆ ತಲುಪಿದೆ.
ರಾಜ್ಯದಲ್ಲಿ 2023ರ ಡಿಸೆಂಬರ್ ಕೊನೆಯ ವಾರದಲ್ಲಿ ಮನೆ ಬಾಗಿಲಿಗೆ ಶ್ರೀ ರಾಮ ಅಯೋಧ್ಯೆಯ ಅನುಗ್ರಹ ಮಂತ್ರಾಕ್ಷತೆ ತಲುಪಿಸುವ ಕಾರ್ಯ ಪ್ರಾರಂಭವಾಗಿದ್ದು, ಸೋಮವಾರದ (21ರ) ಸಂಜೆಯವರೆಗೂ ನಿರಂತರವಾಗಿ ಸಾಧ್ಯವಾದಷ್ಟು ಮನೆಗಳಿಗೆ ಮಂತ್ರಾಕ್ಷತೆ ತಲುಪಿಸುವ ಕೆಲಸಗಳನ್ನು ರಾಮಭಕ್ತರು ಮಾಡಿದ್ದಾರೆಂದು ವಿಶ್ವ ಹಿಂದೂ ಪರಿಷತ್ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಸೇವಾ ಸಂಸ್ಥೆ, ಬಜರಂಗದಳ, ವಿಶ್ವ ಹಿಂದು ಪರಿಷತ್ ಸೇರಿದಂತೆ ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ರಾಮಭಕ್ತರು ಕಳೆದ ಮೂರು ವಾರಗಳಿಂದ ರಾಜ್ಯದ 24,000 ಗ್ರಾಮಗಳಲ್ಲಿನ ಸುಮಾರು 1.20 ಕೋಟಿ ಮನೆಗಳಿಗೆ ತಲುಪಿದೆ. ಆ ಮೂಲಕ ಶೇ.85ರಷ್ಟು ಮನೆಗಳಿಗೆ ಅನುಗ್ರಹ ಮಂತ್ರಾಕ್ಷತೆ ನೀಡಲಾಗಿದೆ. ಮನೆಗಳ ಹೊರತಾಗಿ ಆಶ್ರಮ, ಅನಾಥಾಲಯ, ಕಂಪನಿಗಳ ಮೂಲಕ ಉದ್ಯೋಗಿಗಳಿಗೆ ತಲುಪಿಸುವ ಕಾರ್ಯವಾಗಿದೆ. ಇನ್ನೂ ಮಂತ್ರಾಕ್ಷತೆ ಸಿಗದವರಿಗೆ ಸಂಘ ಪರಿವಾರದ ಮೂಲಕ ಸಮೀಪದ ದೇವಾಲಯಗಳಲ್ಲಿ ವಿತರಿಸಲಾಗುತ್ತದೆ.
ವಿಶೇಷ ಕೋರಿಕೆ!: ಭಕ್ತರ ಮನೆ ಬಾಗಿಲಿಗೆ ಶ್ರೀರಾಮನ ಮಂತ್ರಾಕ್ಷತೆ ತಲುಪಿಸಿದ ರಾಮಭಕ್ತರು ಸಾರ್ವಜನಿಕರಲ್ಲಿ ಜ.22ರಂದು ದೇವರ ಮಂಟಪದಲ್ಲಿ ಅನುಗ್ರಹ ಮಂತ್ರಾಕ್ಷತೆಯನ್ನಿಟ್ಟು ಪೂಜಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಯ ಸಮಯ ಮನೆಗಳಲ್ಲಿ ಎರಡು ದೀಪಗಳನ್ನು ಬೆಳಗುವುದರ ಜತೆಗೆ ಸಿಹಿ ಹಂಚಿ ಸಂಭ್ರಮಿಸಿ ಎನ್ನುವುದಾಗಿ ಮನವಿಯನ್ನು ಸಹ ಮಾಡಿದ್ದಾರೆ.
ವಿದೇಶಕ್ಕೂ ತಲುಪಿದೆ: ಮೂಲತಃ ಕರ್ನಾಟಕದವರಾಗಿದ್ದು, ವಿದೇಶದಲ್ಲಿ ನೆಲೆಸಿದ ಹಿಂದೂಗಳಿಗೆ ಮಂತ್ರಾಕ್ಷತೆ ತಲುಪಿಸುವ ಕೆಲಸವಾಗಿದೆ. ಈಗಾಗಲೇ ಕರ್ನಾಟಕ್ಕೆ ಬಂದು ವಿದೇಶಕ್ಕೆ ಮರಳುತ್ತಿರುವವರ ಮೂಲಕ ಸಂಬಂಧಿಕರು ತಮ್ಮವರಿಗೆ ಅನುಗ್ರಹ ಮಂತ್ರಾಕ್ಷತೆಯನ್ನು ತಲುಪಿಸಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡು ಕೆಲವೊಬ್ಬರು ಸಂಭ್ರಮಿಸಿರುವುದು ಕಂಡು ಬಂದಿದೆ.
ಉತ್ತರ ಕರ್ನಾಟಕದಲ್ಲಿ 35 ಲಕ್ಷ ಮನೆಗೆ ಅಕ್ಷತೆ
ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಸುಮಾರು 35 ಲಕ್ಷ ಮನೆಗಳಿಗೆ ಅಯೋಧ್ಯೆ ಮಂತ್ರಾಕ್ಷತೆ, ಶ್ರೀರಾಮನ ಫೋಟೋ, ಆಹ್ವಾನ ಪತ್ರ ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ಧಾರವಾಡ ವಿಭಾಗ ಸಂಚಾಲಕ, ಮನೆ-ಮನೆಗೆ ಮಂತ್ರಾಕ್ಷತೆ ಅಭಿಯಾನದ ಧಾರವಾಡ ವಿಭಾಗ ಸಂಯೋಜಕ ವಿನಾಯಕ ತಲಗೇರಿ ತಿಳಿಸಿದ್ದಾರೆ. ಅನೇಕ ಕಡೆ ಮುಸ್ಲಿಂ-ಕ್ರೈಸ್ತರೂ ಸಹ ಮಂತ್ರಾಕ್ಷತೆಯನ್ನು ಭಕ್ತಿಯಿಂದ ಸ್ವೀಕರಿಸಿದ್ದಾರೆ. ಮೂರ್ತಿ ಪ್ರತಿಷ್ಠಾಪನೆ ಸಮಾರಂಭಕ್ಕೆ ಉತ್ತರ ಕರ್ನಾಟಕದ 100 ಮಠಾಧೀಶರಿಗೆ ಅಯೋಧ್ಯೆಯಿಂದಲೇ ಆಹ್ವಾನ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಮಂದಿರ ತೀರ್ಪು ನೀಡಿದ್ದ ನ್ಯಾಯಮೂರ್ತಿ ಭೂಷಣ್ ಮಾತ್ರವೇ ಉದ್ಘಾಟನೆಗೆ ಹಾಜರಿ
ರಾಮಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಪಂಚಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿಗಳ ಪೈಕಿ ನಿವೃತ್ತ ನ್ಯಾಯಮೂರ್ತಿ ಅಶೋಕ್ ಭೂಷಣ್ ಮಾತ್ರವೇ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ. ಪೀಠದಲ್ಲಿದ್ದ ಆಗಿನ ಸಿಜೆಐ ರಂಜನ್ ಗೊಗೋಯ್, ನಿವೃತ್ತ ಸಿಜೆಐ ಎಸ್.ಎ.ಬೋಬ್ಡೆ ,ಹಾಲಿ ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ನಿವೃತ್ತ ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್‌ಗೆ ಆಹ್ವಾನವಿದ್ದರೂ ವಿವಿಧ ಕಾರಣಗಳಿಂದಾಗಿ ಹಾಜರಾಗುತ್ತಿಲ್ಲ.
ಪ್ರತಿ 2 ಗಂಟೆಗೆ ದುಪ್ಪಟ್ಟಾಗುತ್ತಿದೆ ಮಂದಿರ ಅನುದಾನ
ಪ್ರಾಣ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ದೇಶದ ಮೂಲೆ-ಮೂಲೆಗಳಿಂದ ರಾಮಭಕ್ತರು ದೇಗುಲಕ್ಕೆ ದೇಣಿಗೆ ನೀಡುತ್ತಿದ್ದಾರೆ. ಭಾನುವಾರದ ವೇಳೆಗೆ ಭಕ್ತರು ನೀಡುತ್ತಿರುವ ದೇಣಿಗೆ ಪ್ರತಿ 2 ಗಂಟೆ ಗೊಮ್ಮೆ ದುಪ್ಪಟ್ಟಾಗುತ್ತಿದೆ ಎನ್ನಲಾಗಿದೆ.
ಮಲ್ಟಿಪ್ಲೆಕ್ಸ್, ಮಳಿಗೆಗಳಲ್ಲಿ ನೇರಪ್ರಸಾರಕ್ಕೆ ಕಾರ್ಪೋರೆಟ್ ಸಂಸ್ಥೆಗಳ ಸಹಕಾರ
ಅಯೋಧ್ಯೆಯ ಸಂಭ್ರಮವನ್ನು ದುಪ್ಪಟ್ಟಾಗಿಸಲು ನಡೆಸುತ್ತಿರುವ ಎಲ್ಲ ಪ್ರಯತ್ನಗಳಿಗೂ ಅಲ್ಲಿನ ಸ್ಥಳೀಯ ಕಾರ್ಪೋರೆಟ್ ಸಂಸ್ಥೆಗಳು ಕೈ ಜೋಡಿಸಿ,ದೊಡ್ಡ ದೊಡ್ಡ ಮಳಿಗೆಗಳಲ್ಲಿ, ರಸ್ತೆಗಳಲ್ಲಿ ಎಲ್‌ಇಡಿಗಳನ್ನು ಅಳವಡಿಸುವಂಥ ವಿವಿಧ ರೀತಿಯ ಕೆಲಸಗಳಲ್ಲಿ ಕೊಡುಗೆ ನೀಡುತ್ತಿವೆ. ಕೆಲವು ಸಂಸ್ಥೆಗಳು, ಮಳಿಗೆಗೆಳು ಸ್ವಯಂಪ್ರೇರಣೆಯಿಂದ ಕಟ್ಟಡಗಳನ್ನು ದೀಪಗಳಿಂದ ಅಲಂಕರಿಸಿ ಎಲ್‌ಇಡಿ ಪರದೆ ಗಳನ್ನೂ ಅಳವಡಿಸುವ ಮೂಲಕ ಅಯೋಧ್ಯೆ ಸಂಭ್ರಮ ಕಣ್ತುಂಬಿಕೊಳ್ಳಲು ಜನರಿಗೆ ಅವಕಾಶ ಮಾಡಿಕೊಟ್ಟಿವೆ. ಪಿವಿಆರ್ ಐನಾಕ್ಸ್ ಪ್ರಾಣ ಪ್ರತಿಷ್ಠೆ ಸಮಾರಂಭವನ್ನು ನೇರ ಪ್ರಸಾರ ಮಾಡಲಿದೆ.
ಅಯೋಧ್ಯೆಯಲ್ಲಿ ಹನುಮ ಮಂದಿರ ಶುಚಿಗೊಳಿಸಿದ ಕಂಗನಾ
ಬಾಲಿವುಡ್ ನಟಿ ಕಂಗನಾ ರಣಾವತ್ ಅಯೋಧ್ಯೆ ತಲುಪಿದ್ದು, ಶ್ರೀರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ಮುಗಿಯೋವರೆಗೂ ಅಯೋಧ್ಯೆಯಲ್ಲಿರೋದಾಗಿ ತಿಳಿಸಿದ್ದಾರೆ. “ರಾಮಮಂದಿರ ಕೇವಲ ಪ್ರತಿಮೆಯಲ್ಲ. ಈ ಘಳಿಗೆ ಭಾರತದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ’ ಎಂದಿರುವ ಕಂಗನಾ, “ಈ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲು ಸಾಧ್ಯವಾಗುವುದು ತಮ್ಮ ಹಿಂದಿನ ಜೀವನದ ಕರ್ಮದ ಫಲವಾಗಿ. ಈ ಮಹತ್ವದ ದಿನವನ್ನು ತರ ಲು ದೇಶವು ಒಗ್ಗೂಡಿದ್ದು, ಇಡೀ ರಾಷ್ಟ್ರಕ್ಕಿ ದು ಅದೃಷ್ಟ. ಅಯೋಧ್ಯೆಯ ದರ್ಶನ ಪಡೆಯಲು ಹಲವು ಜನ್ಮಗಳ ಪುಣ್ಯ ಮಾಡಿರಬೇಕು’ ಎಂದು ಹೇಳಿದ್ದಾರೆ. ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಗುರು ರಾಮಭದ್ರಾಚಾರ್ಯರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಕಂಗನಾ, ಹನುಮಾನ್ ಮಂದಿರವನ್ನು ಶುಚಿಗೊಳಿಸುವ ಕಾರ್ಯದಲ್ಲೂ ಭಾಗಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಮೈಕ್ರೋಫೈನಾನ್ಸ್ ಸಾಲ ಮೋಸ ಪ್ರಕರಣ ತನಿಖೆಗೆ ಮೂರು ತಂಡ ರಚನೆ: ಸತೀಶ ಜಾರಕಿಹೊಳಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು
Hubballi: ಸಿಲಿಂಡರ್ ಸ್ಫೋಟ ಪ್ರಕರಣ… ಮತ್ತೋರ್ವ ಕೊನೆಯುಸಿರು, ಮೃತರ ಸಂಖ್ಯೆ 8ಕ್ಕೆ ಏರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Assam; ಚಹಾರ್ ಜಿಲ್ಲೆ 4 ಗ್ರಾಮ ಬಾಲ್ಯ ವಿವಾಹ ಮುಕ್ತ: ಸಿಎಂ ಹಿಮಾಂತ್
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.