ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

ನಿರಂತರ ಸಮಾರಂಭಗಳಿರುವ ಹಿನ್ನೆಲೆ ರಕ್ತದಾನ ಸಾಧ್ಯವಾಗುತ್ತಿಲ್ಲ.

Team Udayavani, May 2, 2024, 1:19 PM IST

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

ಮಹಾನಗರ: ಈ ಮೊದಲು ಸರಾಸರಿ 600ರಿಂದ 700 ಯುನಿಟ್‌ ರಕ್ತ ಸಂಗ್ರಹವಿರುತ್ತಿದ್ದ “ರೆಡ್‌ಕ್ರಾಸ್‌’ ಬ್ಲಡ್‌ ಬ್ಯಾಂಕ್‌ನಲ್ಲಿ ರಕ್ತದ ಲಭ್ಯತೆ ದಿನೇ ದಿನೇ ಕಡಿಮೆಯಾಗುತ್ತಿದೆ. ಇದು ಕೇವಲ ರೆಡ್‌ ಕ್ರಾಸ್‌ನಲ್ಲಿ ಎದುರಾಗಿರುವ ಅಭಾವವಲ್ಲ. ಜಿಲ್ಲೆಯ ಎಲ್ಲ ಬ್ಲಡ್‌ ಬ್ಯಾಂಕ್‌ಗಳಲ್ಲೂ ಎದುರಾಗಿರುವ ಸಮಸ್ಯೆ!

ಸರಿಸುಮಾರು 8 ಮೆಡಿಕಲ್‌ ಕಾಲೇಜುಗಳು, ಹತ್ತಾರು ಬ್ಲಡ್‌ ಬ್ಯಾಂಕ್‌ ಗಳಿರುವ ದ.ಕ. ಜಿಲ್ಲೆಯಲ್ಲಿ ಇದೀಗ ರಕ್ತದ ಕೊರತೆ
ಎದುರಾಗಿದೆ. ಮಂಗಳೂರು ನಗರದಲ್ಲೇ ರಕ್ತ ಸಂಗ್ರಹ ಕೊರತೆ ಎಂಬುವುದು ಸದ್ಯದ ಮಾಹಿತಿ. ಲಭ್ಯತೆಗಿಂತ ಬೇಡಿಕೆ ವಿಪರೀತ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಮಾಸಿಕ ಸರಿಸುಮಾರು 6ರಿಂದ 7 ಸಾವಿರ ಯುನಿಟ್‌ಗೂ ಅಧಿಕ ರಕ್ತ ಬೇಕಾಗುತ್ತಿದ್ದು, ಪ್ರಸ್ತುತ ರಕ್ತ ಸಂಗ್ರಹಣೆ ಬಹುತೇಕ ಕಡಿಮೆಯಾಗಿದೆ. ಅದರಲ್ಲೂ “ಒ’ ಗ್ರೂಪ್‌ನ ರಕ್ತವಂತೂ ತೀರಾ ವಿರಳ. ಜನಸಾಮಾನ್ಯರು ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.

ಚುನಾವಣೆ, ಕಾಲೇಜುಗಳಿಗೆ ರಜೆ ಎಫೆಕ್ಟ್!
ಲೋಕಸಭಾ ಚುನಾವಣೆಯ ಕಾರ್ಯಗಳಲ್ಲಿ ಪಕ್ಷದ ಕಾರ್ಯಕರ್ತರು ತೊಡಗಿಸಿಕೊಂಡ ಕಾರಣ ದಾನಿಗಳು ಸಿಗುತ್ತಿಲ್ಲ. ಮತ್ತೂಂದೆಡೆ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ, ಬೇಸಗೆ ರಜೆ. ಈ ಎಲ್ಲ ಕಾರಣಗಳಿಂದಾಗಿ ಮಾರ್ಚ್‌ ತಿಂಗಳ ಬಳಿಕ ರಕ್ತದಾನ ಶಿಬಿರಗಳು ನಡೆಯದೆ ನಿರೀಕ್ಷಿತ ಪ್ರಮಾಣದಲ್ಲಿ ರಕ್ತ ಸಂಗ್ರಹಿಸಲು ಸಾಧ್ಯವಾಗಿಲ್ಲ. ರೋಗಿಗಳ ಕುಟುಂಬ ಸದಸ್ಯರು ರಕ್ತ ನೀಡಲು ಹಿಂದೇಟು ಹಾಕುತ್ತಿದ್ದು, ಸಮಸ್ಯೆಗೆ ಕಾರಣ. ಮತ್ತೂಂದೆಡೆ ಮದುವೆ ಸೇರಿದಂತೆ ನಿರಂತರ ಸಮಾರಂಭಗಳಿರುವ ಹಿನ್ನೆಲೆ ರಕ್ತದಾನ ಸಾಧ್ಯವಾಗುತ್ತಿಲ್ಲ.

ಬಿಸಿಲ ಬೇಗೆ: ನಿರ್ಜಲೀಕರಣದ ಆತಂಕ ಬೇಡ!
ಜಿಲ್ಲೆಯಲ್ಲಿ ವಿಪರೀತ ಬಿಸಿಲು ಏರಿಕೆಯಾಗುತ್ತಿರುವ ಕಾರಣದಿಂದಾಗಿ ಜನ ಮನೆಯಿಂದ ಹೊರ ನಡೆಯಲು ಹಿಂದೇಟು ಹಾಕುತ್ತಿದ್ದಾರೆ. ಶಿಬಿರಗಳನ್ನು ಆಯೋಜಿಸುವ ಕೇಂದ್ರಗಳಲ್ಲೂ ವಿಪರೀತ ಸೆಕೆ ಇರುವ ಕಾರಣದಿಂದಾಗಿ ಜನರು ರಕ್ತ ನೀಡಲು
ಮುಂದಾಗುತ್ತಿಲ್ಲ. ವಿಪರೀತ ತಾಪಮಾನದೊಂದಿಗೆ ನಿರ್ಜಲೀಕರಣದಿಂದ ತೊಂದರೆಯಾಗಬಹುದೆನ್ನುವ ಆತಂಕ ಜನರಲ್ಲಿದೆ. ಇಂತಹ ಯಾವುದೇ ಆತಂಕ ಬೇಡ ಎಂಬುವುದು ವೈದ್ಯರ ಮಾತು.  ಕೇವಲ ಹವಾನಿಯಂತ್ರಿತ ಕೇಂದ್ರಗಳನ್ನು ಜನ ಅವಲಂಬಿಸಿರುವ ಕಾರಣ ಶಿಬಿರದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ರಕ್ತ ಸಂಗ್ರಹವಾಗುವುದು ಅನುಮಾನ.

ಯಾರಿಗೆ ತುರ್ತು ರಕ್ತ
ನಗರ ಸಹಿತ ಹೊರವಲಯಗಳಲ್ಲಿ ಅನೇಕ ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ ಕೆಲವರಿಗೆ ತುರ್ತು ರಕ್ತದ ಅಗತ್ಯವಿರುತ್ತದೆ. ಹೆರಿಗೆ ಸಂದರ್ಭ ರಕ್ತಸ್ರಾವವಾಗುವ ವೇಳೆ ರಕ್ತ ಬೇಕೇಬೇಕು. ರಕ್ತ ಹೀನತೆಯಿಂದ ಬಳಲುವವರಿಗೂ ಸಮಯಕ್ಕೆ ಸರಿಯಾಗಿ ರಕ್ತ ನೀಡಬೇಕು. ಇದನ್ನು ಹೊರತುಪಡಿಸಿ ಶಸ್ತ್ರಚಿಕಿತ್ಸೆ, ವಿವಿಧ ರೀತಿಯ ಗಂಭೀರ ಕಾಯಿಲೆಗಳಿಂದ ಬಳಲುವವರಿಗೆ ತಕ್ಷಣ ರಕ್ತದ ಆವಶ್ಯಕತೆ ಇರುತ್ತದೆ. ಇಂತಹ ವೇಳೆ ರಕ್ತನಿಧಿಗಳೇ ನೆರವಾಗುವುದು.

ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗಿವೆ. ಈ ಕಾರಣದಿಂದಾಗಿ ರಕ್ತ, ಪ್ಲೇಟ್‌ ಲೆಟ್‌ಗಳು ಹೆಚ್ಚು ಬಳಕೆಯಾಗುತ್ತಿವೆ. ಇದರಿಂದಾಗಿ ರಕ್ತದ ಬೇಡಿಕೆ ಹೆಚ್ಚಾಗಿದೆ. ಸಾರ್ವಜನಿಕರು ರಕ್ತದಾನ ಮಾಡುವು ಮೂಲಕ ಕೊರತೆ ನೀಗಿಸಬಹುದು. ಪ್ರಸ್ತುತ ರೋಗಿಗಳ ಕುಟುಂಬಸ್ಥರ ಮೂಲಕವೇ ರಕ್ತ ಸಂಗ್ರಹಿಸುವ ಕಾರ್ಯವಾಗುತ್ತಿದೆ.

ಜಾಗೃತಿ ಅಗತ್ಯ
ಮಂಗಳೂರಿನಲ್ಲಿ ಅನೇಕ ಸಂದರ್ಭಗಳಲ್ಲಿ ರೋಗಿಗಳ ಜತೆ ಇರುವವರು ರಕ್ತ ನೀಡಲು ಹಿಂಜರಿಯುತ್ತಾರೆ. ಇತರರನ್ನೇ
ಅವಲಂಬಿಸಿಕೊಳ್ಳುತ್ತಾರೆ. ಅವರದೇ ಕುಟುಂಬಸ್ಥರು ರಕ್ತ ನೀಡಿದ್ದಲ್ಲಿ ಸಮಸ್ಯೆ ಎದುರಾಗದು. ಯುವ ಜನತೆ ರಕ್ತದಾನದ ಬಗ್ಗೆ ಜಾಗೃತರಾಗಬೇಕು. ರಕ್ತದಾನದಿಂದ ಇನ್ನೊಬ್ಬರಿಗೆ ಮರು ಜೀವ ನೀಡಲು ಸಾಧ್ಯ. ರಕ್ತ ನೀಡಿದವರಿಗೆ ಯಾವುದೇ ಅಡ್ಡ ಪರಿಣಾಮಗಳಾಗದು ಎಂಬುವುದು ರೆಡ್‌ ಕ್ರಾಸ್‌ನ ಪ್ರಮುಖರ ಮಾತು.

ಸಮಸ್ಯೆ ಎದುರಾಗದಂತೆ ಕ್ರಮ
ಪ್ರಸ್ತುತ ಎಲ್ಲ ಕಡೆಗಳಲ್ಲೂ ರಕ್ತದ ಅಗತ್ಯ ಅಧಿಕವಾಗಿದೆ. ದ.ಕ. ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜು ಗಳು, ಬ್ಲಿಡ್‌ ಬ್ಯಾಂಕ್‌ಗಳು ಸಾಕಷ್ಟಿರುವ ಕಾರಣ ದೊಡ್ಡ ಸಮಸ್ಯೆ ಇಲ್ಲ. ಎಲ್ಲರೊಂದಿಗೆ ಸಂಪರ್ಕ ದಲ್ಲಿದ್ದು, ಸಮಸ್ಯೆ ಎದುರಾಗದಂತೆ ನಿರ್ವಹಣೆಗೆ
ಕ್ರಮ ವಹಿಸಲಾಗುತ್ತಿದೆ.
*ಡಾ| ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ರಕ್ತ ಕೊರತೆಯಾಗದು
ರಕ್ತ ಲಭ್ಯತೆ ಕಡಿಮೆ ಇದ್ದರೂ ರೋಗಿಗಳಿಗೆ ಸಮಸ್ಯೆಯಾಗದಂತೆ ದಾನಿಗಳನ್ನು ಹುಡುಕಿ ವ್ಯವಸ್ಥೆ ಮಾಡುತ್ತಿದ್ದೇವೆ. ಹೆಚ್ಚಿನವರು ರೆಡ್‌ ಕ್ರಾಸ್‌ ಸಂಸ್ಥೆ ಅವಲಂಬಿಸಿಕೊಂಡಿದ್ದಾರೆ. ಲೇಡಿಗೋಶನ್‌ಗೆ ಉಚಿತವಾಗಿ ರಕ್ತ ಪೂರೈಸುತ್ತಿದ್ದೇವೆ. ಯಾವುದೇ ರೋಗಿಗೂ ರಕ್ತದ ಸಮಸ್ಯೆಯಾಗದಂತೆ ನಿರ್ವಹಿಸುತ್ತಿದ್ದೇವೆ. ಪ್ರಸ್ತುತ 130 ಯುನಿಟ್‌ ರಕ್ತ ಸಂಗ್ರಹಿಸಿದ್ದೇವೆ.
*ಸಿಎ ಶಾಂತಾರಾಮ್‌ ಶೆಟ್ಟಿ,
ಚೇರ್ಮನ್‌, ಇಂಡಿಯನ್‌ ರೆಡ್‌ಕ್ರಾಸ್‌ ದಕ್ಷಿಣ ಕನ್ನಡ ಜಿಲ್ಲೆ

ಆರೋಗ್ಯವಂತರು ರಕ್ತದಾನ ಮಾಡಿ
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು. ಬೇಸಗೆ ಎಂಬ ಹಿಂಜರಿಕೆ ಬೇಡ. ರಕ್ತದಾನದಿಂದ ಯಾವುದೇ
ಅಡ್ಡಪರಿಣಾಮಗಳಿಲ್ಲ. 18ರಿಂದ 60 ವರ್ಷದ ಆರೋಗ್ಯವಂತರು ರಕ್ತದಾನ ಮಾಡಬಹುದು.
*ಡಾ| ದೀಪಾ ಅಡಿಗ, ನಿರ್ದೇಶಕರು,
ಕೆಎಂಸಿ ಅತ್ತಾವರ ಬ್ಲಿಡ್‌ ಸೆಂಟರ್‌

*ಸಂತೋಷ್‌ ಮೊಂತೇರೊ

ಟಾಪ್ ನ್ಯೂಸ್

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

Mangaluru: ಕರಾವಳಿಯ ವೃತ್ತಿಪರರಿಗೆ ವಿಶ್ವದೆಲ್ಲೆಡೆ ಮನ್ನಣೆ

Mangaluru: ಕರಾವಳಿಯ ವೃತ್ತಿಪರರಿಗೆ ವಿಶ್ವದೆಲ್ಲೆಡೆ ಮನ್ನಣೆ

Mangaluru: ಪಿಲಿಕುಳ ಕಂಬಳ; ಮೂಲಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

Mangaluru: ಪಿಲಿಕುಳ ಕಂಬಳ; ಮೂಲಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.