ಆ್ಯಪ್ ಮಿತ್ರ: ಗೂಗಲ್ ಲೆನ್ಸ್
Team Udayavani, May 25, 2020, 4:51 AM IST
ಕೆಲ ಸ್ಮಾರ್ಟ್‌ಫೋನುಗಳಲ್ಲಿ, ಅವು ಫ್ಯಾಕ್ಟರಿಯಿಂದ ತಯಾರಾಗಿ ಬರುವಾ ಗಲೇ ಈ ಆ್ಯಪ್ ಇನ್ ಸ್ಟಾಲ್ ಆಗಿ ಬಂದಿರುತ್ತವೆ. ಇಲ್ಲದೇ ಇದ್ದವರು, ಪ್ಲೇಸ್ಟೋರಿನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಗೂಗಲ್ ಲೆನ್ಸ್, ಕೃತಕ ಬುದಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಹೊಂದಿ ರುವ ಆ್ಯಪ್. ಜಗತ್ತನ್ನು ಗೂಗಲ್ ಕಣ್ಣಿನಿಂದ ನೋಡುವ ಪ್ರಯತ್ನವದು.
ಬಳಕೆದಾರ ಮಾಡಬೇಕಿರುವುದಿಷ್ಟೆ: ಗೂಗಲ್ ಲೆನ್ಸ್ ಆ್ಯಪ್ ಅನ್ನು ಓಪನ್ ಮಾಡಿ, ಕ್ಯಾಮೆರಾವನ್ನು ಯಾವುದೇ ವಸ್ತುವಿನ ಮೇಲೆ ಫೋಕಸ್ ಮಾಡಿದರೆ, ಕ್ಯಾಮೆರಾ ಪರದೆ ಮೇಲೆ ಮೂಡುವ ಯಾವುದೇ ವಸ್ತುವಿನ ವಿವರವಾದ ಮಾಹಿತಿಯನ್ನು, ಗೂಗಲ್ ಬಳಕೆದಾರನ ಮುಂದೆ ಪ್ರಸ್ತುತಪಡಿಸುತ್ತದೆ. ಉದಾಹರಣೆಗೆ, ಬಳಕೆದಾರ ಒಂದು ಪುಸ್ತಕದ ಮುಖಪುಟದ ಮೇಲೆ ಫೋಕಸ್ ಮಾಡಿದರೆ, ಆ ಪುಸ್ತಕ ಕುರಿತ ವಿಮರ್ಶೆ, ಎಲ್ಲೆಲ್ಲಿ ಆ ಪುಸ್ತಕವನ್ನು ಖರೀದಿಸಬಹು ದು ಎಂಬ ಮಾಹಿತಿ, ಅದರ ಮೂಲಬೆಲೆ, ಕೃತಿಕಾರನ ಕುರಿತಾದ ಮಾಹಿತಿ…
ಇವೆಲ್ಲವನ್ನೂ ನೀಡುತ್ತದೆ. ಯಾವು ದಾ ದರೂ ವಸ್ತುವಿನ ಬಗ್ಗೆ ಮಾಹಿತಿ ಜಾಲಾಡಲು ಸಾಧ್ಯವಾಗದಿದ್ದರೆ, ಅದಕ್ಕೆ ಸಂಬಂಧಿಸಿದ ವಸ್ತುಗಳ ವಿವರಗಳನ್ನು ಒದಗಿಸುತ್ತದೆ. ಕೇವಲ ವಸ್ತುಗಳು ಮಾತ್ರವಲ್ಲ, ಕಟ್ಟಡ, ಸ್ಮಾರಕ, ಇಮಾರತ್ತು, ಮುಂತಾದ ಸ್ಥಳಗಳ ಮಾಹಿತಿ ಯನ್ನೂ ನೀಡುತ್ತದೆ.
ಉದಾಹರಣೆಗೆ, ಪ್ರವಾಸಿ ಗನಿಗೆ ತನ್ನ ಮುಂದಿರುವ ಕಟ್ಟಡ ಯಾವುದೆಂದು ತಿಳಿದುಕೊಳ್ಳಬೇಕೆನಿಸಿದರೆ, ಕ್ಯಾಮೆರಾವನ್ನು ಆ ಕಟ್ಟಡದತ್ತ ಫೋಕಸ್ ಮಾಡಿದರೆ ಸಾಕು; ಆ ಕಟ್ಟಡದ ಪೂರ್ಣ ಮಾಹಿತಿ ಒದಗಿಸುತ್ತದೆ. ವಿದೇಶಕ್ಕೆ ಹೋದ ಸಂದರ್ಭದಲ್ಲಿ, ಅಲ್ಲಿನ ಸೂಚನಾಫಲಕದಲ್ಲಿ ಏನು ಬರೆದಿದೆ ಎನ್ನುವುದು ತಿಳಿಯದೇ ಹೋದರೆ, ಗೂಗಲ್ ಲೆನ್ಸ್ ಫಲಕದಲ್ಲಿ ಬರೆದಿರುವುದನ್ನು ಭಾಷಾಂತರಿಸಿ ಬಳಕೆದಾರನಿಗೆ ಒದಗಿಸುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.