Apple employee;ಕೋಟ್ಯಂತರ ರೂ.ವಂಚನೆ; Apple ಕಂಪನಿ ಉದ್ಯೋಗಿಗೆ 3 ವರ್ಷ ಜೈಲುಶಿಕ್ಷೆ
ಉನ್ನತ ಹುದ್ದೆಯಲ್ಲಿದ್ದ ಪ್ರಸಾದ್ ವಿಶ್ವಾಸದ್ರೋಹ ಎಸಗಿದ್ದಾನೆ.
Team Udayavani, Apr 29, 2023, 3:43 PM IST
ವಾಷಿಂಗ್ಟನ್: ಭಾರೀ ಪ್ರಮಾಣದ ಹಣಕಾಸು ವಂಚನೆ ಮಾಡಿರುವ ಪ್ರಕರಣಕ್ಕೆ ಸಂಂಧಿಸಿದಂತೆ Apple ಕಂಪನಿಯ ಭಾರತೀಯ ಮೂಲದ ಉದ್ಯೋಗಿಗೆ ಕೋರ್ಟ್ ಮೂರು ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
“Apple ಕಂಪನಿಯ ಹೆಸರಿನಲ್ಲಿ ಕಿಕ್ಸ್ ಬ್ಯಾಕ್ಸ್, ಫೋನ್ ನ ಬಿಡಿ ಭಾಗಗಳ ಕಳ್ಳತನ, ಇನ್ ವಾಯ್ಸ್ ಗಳಲ್ಲಿ ವಂಚನೆ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ಹಣವನ್ನು ಲಪಟಾಯಿಸಿರುವುದಾಗಿ ಅಪರಾಧಿ ಧೀರೇಂದ್ರ ಪ್ರಸಾದ್ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಸ್ಪರ್ಧಿ ಎರಡು ಕಂಪನಿಗಳ ಮಾಲೀಕರ ಜತೆ ಸೇರಿ ಪಿತೂರಿ ಮಾಡಿರುವುದಾಗಿ ಹೇಳಿರುವ ಪ್ರಸಾದ್ ಆದಾಯದ ಮೇಲಿನ ತೆರಿಗೆಯನ್ನು ವಂಚಿಸಿರುವುದಾಗಿ ವರದಿ ತಿಳಿಸಿದೆ. ಪ್ರಸಾದ್ Apple ಕಂಪನಿಯಲ್ಲಿ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ಬಯಲಿಗೆ ಬಾರದಂತೆ ತಡೆಯಲು ಕಂಪನಿಯ ಆಂತರಿಕ ವಂಚನೆ ಪತ್ತೆ ತಂತ್ರಗಾರಿಕೆಯನ್ನು ಬಳಸಿಕೊಂಡಿರುವುದಾಗಿ ಅಮೆರಿಕದ ಜಸ್ಟೀಸ್ ಡಿಪಾರ್ಟ್ ಮೆಂಟ್ ಆರೋಪಿಸಿದೆ.
ಕಂಪನಿಯ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಪ್ರಸಾದ್ ಗೆ ಅವಕಾಶ ನೀಡಲಾಗಿತ್ತು. ಈ ನಿಟ್ಟಿನಲ್ಲಿ ಕಂಪನಿಯ ಉನ್ನತ ಹುದ್ದೆಯಲ್ಲಿದ್ದ ಪ್ರಸಾದ್ ವಿಶ್ವಾಸದ್ರೋಹ ಎಸಗಿದ್ದಾನೆ. ತಾನು ಶ್ರೀಮಂತನಾಗಬೇಕೆಂಬ ದುರಾಸೆಯಿಂದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ಪ್ರಕಟಣೆಯಲ್ಲಿ ದೂರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.