ಭಾರತದ ಜಿಡಿಪಿಗಿಂತಲೂ ಆ್ಯಪಲ್ ಮೌಲ್ಯ ಹೆಚ್ಚು!
3 ಲಕ್ಷ ಕೋಟಿಗೆ ಏರಿಕೆ ಆದ ಮಾರುಕಟ್ಟೆ ಮೌಲ್ಯ; ದೇಶದ ಜಿಡಿಪಿ 2.72 ಲಕ್ಷ ಕೋಟಿ ಡಾಲರ್
Team Udayavani, Jan 5, 2022, 6:50 AM IST
ಹೊಸದಿಲ್ಲಿ: ಅಮೆರಿಕದ ಬಹುರಾಷ್ಟ್ರೀಯ ಟೆಕ್ನಾಲಜಿ ಕಂಪೆನಿಯಾದ ಆ್ಯಪಲ್‌ನ ಮಾರುಕಟ್ಟೆ ಮೌಲ್ಯವು ಸೋಮವಾರ 3 ಲಕ್ಷಕೋಟಿ ಡಾಲರ್‌ಗೆ ಏರಿಕೆಯಾಗಿದ್ದು, ಇದು ಭಾರತ ಸೇರಿದಂತೆ ಹಲವು ಪ್ರಮುಖ ದೇಶಗಳ ಜಿಡಿಪಿ(ಒಟ್ಟು ದೇಶೀಯ ಉತ್ಪನ್ನ)ಗಿಂತಲೂ ಹೆಚ್ಚು ಎಂದು ಬಣ್ಣಿಸಲಾಗಿದೆ.
ಭಾರತದ ಜಿಡಿಪಿ 2.72 ಲಕ್ಷ ಕೋಟಿ ಡಾಲರ್ ಆಗಿದ್ದರೆ, ಯುಕೆ ಜಿಡಿಪಿ 2.83 ಲಕ್ಷ ಕೋಟಿ ಡಾಲರ್ ಆಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ದತ್ತಾಂಶದ ಪ್ರಕಾರ, ಕೇವಲ ನಾಲ್ಕು ರಾಷ್ಟ್ರಗಳ (ಅಮೆರಿಕ, ಚೀನ, ಜಪಾನ್ ಮತ್ತು ಜರ್ಮನಿ) ಜಿಡಿಪಿ ಮಾತ್ರ ಆ್ಯಪಲ್ ಕಂಪೆನಿಯ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿವೆ.
ಇದನ್ನೂ ಓದಿ:ದೇಶದಲ್ಲಿ ಹೆಚ್ಚಲಿದೆ ಆನ್‌ಲೈನ್ ಖರೀದಿ : 2025ರ ವೇಳೆಗೆ ಶೇ.17ಕ್ಕೆ ಏರಿಕೆ ಸಾಧ್ಯತೆ
ಅಮೆರಿಕದ ಜಿಡಿಪಿ 20.72 ಲಕ್ಷಕೋಟಿ ಡಾಲರ್ ಆಗಿದ್ದರೆ, ಚೀನದ್ದು 13.4 ಲಕ್ಷಕೋಟಿ ಡಾಲರ್, ಜಪಾನ್‌ನದ್ದು 4.97 ಲಕ್ಷಕೋಟಿ ಡಾಲರ್, ಜರ್ಮನಿಯದ್ದು 4 ಲಕ್ಷಕೋಟಿ ಡಾಲರ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.