ರಾಜ್ಯ ಕಬಡ್ಡಿ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ
Team Udayavani, May 22, 2020, 5:36 AM IST
ಬೆಂಗಳೂರು: ಕರ್ನಾಟಕ ಅಮೆಚೂರ್ ಕಬಡ್ಡಿ ಸಂಸ್ಥೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಉದ್ಯಾನನಗರಿಯ ಕಂಠೀರವ ಕ್ರೀಡಾಂಗಣದಲ್ಲಿರುವ ರಾಜ್ಯ ಕಬಡ್ಡಿ ಸಂಸ್ಥೆಯ ಕೊಠಡಿ ಸಂಖ್ಯೆ 20 ಅನ್ನು ಇದೀಗ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಹಕಾರ ಇಲಾಖೆ ಮೇ19ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ನಿಗದಿತ ಸಮಯಕ್ಕೆ ಚುನಾವಣೆ ನಡೆಸದೇ ಇರುವುದು, ಕಳೆದೆರಡು ವರ್ಷಗಳಿಂದ ವಾರ್ಷಿಕ ಸಾಮಾನ್ಯ ಸಭೆ ನಡೆಸದೇ ಇರುವುದು ಹಾಗೂ ಆಡಳಿತ ಮಂಡಳಿಯು ಸಹಕಾರ ಸಂಘಗಳ ನಿಬಂಧಕರಿಗೆ ಲೆಕ್ಕಪತ್ರ ಮುಂತಾದ ದಾಖಲೆಗಳನ್ನು ನೀಡದೆ ಇರುವ ಹಿನ್ನೆಲೆಯಲ್ಲಿ ಸರಕಾರ ಶಿಸ್ತಿನ ಕ್ರಮ ತೆಗೆದುಕೊಂಡಿದೆ.
6 ತಿಂಗಳ ಉಸ್ತುವಾರಿ ಹೊರೆ
ಈ ಹಿಂದೆ ಈ ಬಗ್ಗೆ ರಾಜ್ಯ ಸರಕಾರ ಕರ್ನಾಟಕ ಅಮೆಚೂರ್ ಕಬಡ್ಡಿ ಸಂಸ್ಥೆಗೆ ಮೂರು ಸಲ ನೋಟಿಸ್ ನೀಡಿತ್ತಾದರೂ ಇದಕ್ಕೆ ಕಬಡ್ಡಿ ಸಂಸ್ಥೆ ಯಾವುದೇ ಉತ್ತರವನ್ನು ನೀಡಿರಲಿಲ್ಲ. ಹೀಗಾಗಿ ಸರಕಾರ ಇದೀಗ ಅಧಿಕೃತ ಕ್ರಮ ತೆಗೆದುಕೊಂಡಿದ್ದು ಮುಂದಿನ 6 ತಿಂಗಳು ಆಡಳಿತಾಧಿಕಾರಿ ಕಬಡ್ಡಿ ಸಂಸ್ಥೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.