ಅರ್ಚಕರ ತಸ್ತೀಕ್ ಶೀಘ್ರದಲ್ಲೇ “ಮೊಬೈಲ್ ಆ್ಯಪ್”
Team Udayavani, Sep 30, 2023, 11:25 PM IST
ಬೆಂಗಳೂರು: ಅರ್ಚಕರ “ತಸ್ತೀಕ್’ ಮತ್ತು ವರ್ಷಾಸನ ಹಣ ವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸುವ ಸಲುವಾಗಿ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಶೀಘ್ರದಲ್ಲೇ ಹೊಸ “ಮೊಬೈಲ್ ಆ್ಯಪ್ ಅಪ್ಲಿಕೇಷನ್’ ಅಭಿವೃದ್ಧಿಪಡಿಸಲಿದೆ.
ರಾಜ್ಯದ ದೇವಸ್ಥಾನಗಳ ಪೂಜಾ ಕಾರ್ಯ ಇತ್ಯಾದಿಗಳ ಕೆಲಸಕ್ಕೆಂದು ಸರಕಾರ ಬಿಡುಗಡೆ ಮಾಡುವ “ತಸ್ತೀಕ್’ ಹಣಕ್ಕೂ ಖಜಾನೆ ಗುಮಾಸ್ತ, ಶಿರಸ್ತೇದಾರರು ಮತ್ತು ಟ್ರಜರಿ ಅಧಿಕಾರಿಗಳು ಪರ್ಶೇಂಟೇಜ್ ಕೇಳುತ್ತಿದ್ದಾರೆಂದು ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ಅರ್ಚಕರ ಸಂಘ ಇತ್ತೀಚೆಗೆ ಆರೋಪಿಸಿತ್ತು. ಇದನ್ನು ಸಚಿವ ರಾಮಲಿಂಗಾ ರೆಡ್ಡಿ ಗಮನಕ್ಕೂ ತರಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಆ್ಯಪ್ ಅಭಿವೃದ್ಧಿಪಡಿಸುವ ನಿರ್ಧಾರಕ್ಕೆ ಬಂದಿದೆ.
ಚಾಮರಾಜ ಪೇಟೆಯ ಧಾರ್ಮಿಕ ದತ್ತಿ ಇಲಾಖೆ ಕಚೇರಿಯಲ್ಲಿ ಶನಿ ವಾರ ಇಲಾಖೆ ಆಯುಕ್ತ ಎಚ್.ಬಸವ ರಾಜೇಂದ್ರ ನೇತೃತ್ವದಲ್ಲಿ ಧಾರ್ಮಿಕ ದತ್ತಿ ಇಲಾಖೆ ಕಾರ್ಯಗಳ ಪ್ರಗತಿ ಪರಿಶೀಲನೆ ಕಾರ್ಯಕ್ರಮ ನಡೆಯಿತು. ರಾಜ್ಯವ್ಯಾಪಿ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು/ತಹಶೀಲ್ದಾರ್‌ಗಳು, ಧಾರ್ಮಿಕ ದತ್ತಿ ಇಲಾಖೆ ತಹಶೀಲ್ದಾರ್, ಎಲ್ಲ ಜಿಲ್ಲೆಗಳ ದತ್ತಿ ಇಲಾ ಖೆಯ ಕಿರಿಯ ಅಧಿಕಾರಿಗಳು, ಸಹಾಯಕ ದರ್ಜೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ವೇಳೆ ತಸ್ತೀಕ್ ಹಣ ವರ್ಗಾವಣೆ ಸಂಬಂಧ ಚರ್ಚೆ ನಡೆಯಿತು.
ಮೊಬೈಲ್ ಅಪ್ಲಿಕೇಷನ್‌ನಲ್ಲಿ ಅರ್ಚಕರ ಮಾಹಿತಿ
ಹೊಸ ಮೊಬೈಲ್ ಅಪ್ಲಿಕೇಷನ್‌ನಲ್ಲಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳ ಅರ್ಚಕರ ಮಾಹಿತಿಯನ್ನು ಸಂಪೂರ್ಣವಾಗಿ ಅಳವಡಿಸಲಾಗುತ್ತದೆ. ಜತೆಗೆ ದೇವಸ್ಥಾನದಲ್ಲಿ ಲಭ್ಯವಿರುವ ಪೂಜೆ ಸಹಿತ ಇನ್ನಿತರ ಕಾರ್ಯಗಳ ಫೋಟೋಗಳನ್ನು° ಅರ್ಚಕರು ಅಪ್‌ಲೋಡ್ ಮಾಡಬೇಕಾಗುತ್ತದೆ. ಜಿಪಿಎಸ್ ಅಳವಡಿಸಿರುವುದರಿಂದ ದೇವಸ್ಥಾನದ ಲೋಕೇಷನ್ ಕೂಡ ಅಪ್ಲಿಕೇಷನ್‌ನಲ್ಲಿ ತೋರಿಸಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.