G- 20 ಭದ್ರತೆಗೆ ಹೊಟೇಲ್‌ಗಳಲ್ಲೂ ಶಸ್ತ್ರಾಗಾರ
26/11 ಮಾದರಿಯ ಸಂಭಾವ್ಯ ದಾಳಿಯನ್ನು ತಡೆಯಲು ಭಾರತದ ಭದ್ರತಾಪಡೆಗಳು ಸದಾ ಸನ್ನದ್ಧ
Team Udayavani, Sep 7, 2023, 10:51 PM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಜಿ20 ರಾಷ್ಟ್ರಗಳ ಸಮ್ಮೇಳನ ಸೆ.9, 10ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಿದ್ಧತೆಗಳು, ಭದ್ರತಾ ವ್ಯವಸ್ಥೆಗೆ ಭಾರೀ ಮಹತ್ವ ನೀಡಲಾಗಿದೆ. ದೆಹಲಿಯಲ್ಲಿ ಹಿಂದೆಂದೂ ಕಂಡರಿಯದ ಬಿಗಿಭದ್ರತೆ ಏರ್ಪಟ್ಟಿದೆ.
ಪ್ರಸಕ್ತ ಸಾಲಿನ ಜಿ20 ರಾಷ್ಟ್ರಗಳ ಸಮ್ಮೇಳನ ಹೊಸದಿಲ್ಲಿಯಲ್ಲಿ ನಡೆ ಯು ತ್ತಿದೆ. ಅಮೆರಿಕ, ಬ್ರಿಟನ್ ಸೇರಿ ದಂತೆ 40 ಸರ್ಕಾರಗಳ ಮುಖ್ಯ ಸ್ಥರು, ನಿಯೋಗಗಳ ಸದಸ್ಯರು ಆಗಮಿಸುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯೂ ಬಲು ಬಿಗಿಯಾಗಿದೆ. 26/11 ಮಾದರಿಯಂಥ ದಾಳಿ ನಡೆಯದೇ ಇರುವ ನಿಟ್ಟಿನಲ್ಲಿ ಅತಿ ಗಣ್ಯ ವ್ಯಕ್ತಿಗಳು ವಾಸ್ತವ್ಯ ಹೂಡುವ ಹೊಟೇಲ್‌ಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಕೋಠಿಗಳನ್ನು ತಾತ್ಕಾಲಿಕ ನೆಲೆಯಲ್ಲಿ ನಿರ್ಮಿ ಸಲಾಗಿದೆ.
ಹೊಟೇಲ್‌ಗಳಲ್ಲಿ ಇರುವ ಸರಕು ಸಂಗ್ರಹಣಾ ಕೊಠಡಿಗಳಲ್ಲಿ ಗುಂಡು ಗಳು, ಸ್ಟೆನ್‌ಗನ್‌ಗಳು, ಸ್ಮೋಕ್ ಗ್ರೆನೇ ಡ್‌ಗಳು, ವೈರ್‌ಲೆಸ್ ಚಾರ್ಜರ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ಸಂಗ್ರಹಿಸಿ ಇರಿಸಲಾ ಗಿದೆ. 26/11 ದಾಳಿಯ ಬಳಿಕ ಭದ್ರತೆಗೆ ಸಂಬಂಧಿಸಿದಂತೆ ಆ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರು ಪಂಚತಾರಾ ಹೊಟೇಲ್‌ಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಇರಿಸುವ ಬಗ್ಗೆ ಸಲಹೆ ಮಾಡಿದ್ದರು. ಅದನ್ನು ಈ ಸಂದರ್ಭದಲ್ಲಿ ಅನುಷ್ಠಾನ ಮಾಡಲಾಗಿದೆ.
ಇಂಥ ಶಸ್ತ್ರಾಸ್ತ್ರ ಸಂಗ್ರಹಗಳನ್ನು ಮಾಡಿದಾಗ, ಸಂಭವನೀಯ ದಾಳಿಯ ಸಂದರ್ಭದಲ್ಲಿ ಉಗ್ರರ ವಿರುದ್ಧ ಹೋರಾಟ ನಡೆಸಲು ಅನುಕೂಲವಾಗಿ ಪರಿಣಮಿಸಲಿದೆ. ಕಮಾಂಡೊಗಳು ಇರುವ ಆಯು ಧಗಳ ಮೂಲಕ ದಾಳಿ ಕೋರ ರನ್ನು ಎದುರಿಸಿ ಹಿಮ್ಮೆಟ್ಟಿಸುವ ಸಂದ ರ್ಭದಲ್ಲಿ ಹೊರಗಿನಿಂದ ಇತರ ಭದ್ರತಾ ತಂಡಗಳು ಅಲ್ಲಿಗೆ ಸೇರಿಕೊಳ್ಳಲು ಸಹಾಯಕವಾ ಗುತ್ತದೆ. ಒಟ್ಟು ಹದಿನಾರು ಹೊಟೇಲ್‌ಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.
ಯಾರು ಎಲ್ಲಿ ತಂಗುವರು?
ಅಮೆರಿಕ, ಬ್ರಿಟನ್ ಸೇರಿದಂತೆ ಜಿ20 ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರು, ನಿಯೋಗದ ಸದಸ್ಯರಿಗೆ ಈಗಾಗಲೇ ಹಲವು ಪಂಚತಾರಾ ಹೊಟೇಲ್‌ಗಳನ್ನು ಕಾಯ್ದಿರಿಸಲಾಗಿದೆ. ಐಟಿಸಿ ಮೌರ್ಯದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ವಾಸ್ತವ್ಯ ಹೂಡಲಿದ್ದಾರೆ. ಈ ಉದ್ದೇಶಕ್ಕಾಗಿಯೇ 400 ಕೊಠಡಿಗಳನ್ನು ಅಲ್ಲಿ ಕಾಯ್ದಿರಿಸಲಾಗಿದೆ.
ಬ್ರಿಟನ್ ಪ್ರಧಾನಿ ರಿಷಿ ಸುನಕ್: ಬ್ರಿಟನ್ ಪ್ರಧಾನಮಂತ್ರಿ ರಿಷಿ ಸುನಕ್ ಅವರಿಗೆ ಶಾಂಗ್ರಿಲಾ ಹೊಟೇಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನಕ್ಕೆ ಬರುವ ಪ್ರಮುಖ ನಾಯಕರ ಪೈಕಿ ಅವರೇ ಮೊದಲು ಹೊಸದಿಲ್ಲಿಗೆ ಆಗಮಿಸಲಿದ್ದಾರೆ. ಅವರನ್ನು ಕೇಂದ್ರ ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ ಸ್ವಾಗತಿಸಲಿದ್ದಾರೆ.
ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ: ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ಅವರು ಸೆ.8ರಂದು ಹೊಸದಿಲ್ಲಿಗೆ ಆಗಮಿಸಲಿ ದ್ದಾರೆ. ಅವರನ್ನೂ ಕೇಂದ್ರ ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ ಸ್ವಾಗತಿಸಲಿದ್ದಾರೆ.
ಚೀನ ನಿಯೋಗ: ಚೀನ ಪ್ರಧಾನಿ ಲಿ ಖೀಯಾಂಗ್ ನೇತೃತ್ವದಲ್ಲಿ ಚೀನ ನಿಯೋಗ ಆಗಮಿಸಲಿದೆ. ಅವರಿಗಾಗಿ ದೆಹಲಿಯ ತಾಜ್ ಹೊಟೇಲ್‌ನಲ್ಲಿ ಏರ್ಪಾಡುಗಳನ್ನು ಮಾಡಲಾಗಿದೆ. ಕೇಂದ್ರ ಸಹಾಯಕ ಸಚಿವ ಮೇ.ಜ.(ನಿ)ವಿ.ಕೆ.ಸಿಂಗ್ ಸ್ವಾಗತಿಸಲಿದ್ದಾರೆ. ಅಧ್ಯಕ್ಷ ಜಿನ್‌ಪಿಂಗ್ ಗೈರಿನ ನಿಮಿತ್ತ ಖೀಯಾಂಗ್ ಹಾಜರಾಗಲಿದ್ದಾರೆ.
ಕೆನಡಾ ಪ್ರಧಾನಿ ಜಸ್ಟಿನ್ ತ್ರುದೌ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಆಸಿಯಾನ್ ಸಮ್ಮೇಳನದ ಬಳಿಕ ಕೆನಡಾ ಪ್ರಧಾನಿ ಜಸ್ಟಿನ್ ತ್ರುದೌ ಅವರು ನೇರವಾಗಿ ಹೊಸದಿಲ್ಲಿಗೆ ಆಗಮಿಸಲಿದ್ದಾರೆ. ಅವರು ಲಲಿತ್ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅವರನ್ನು ರಾಜೀವ್ ಚಂದ್ರಶೇಖರ್ ಸ್ವಾಗತಿಸಲಿದ್ದಾರೆ.
ಸಮಸ್ಯೆ, ಸಾಂಘಿಕ ಹೋರಾಟ
ಸಾಮಾನ್ಯವಾಗಿ ಜಿ20 ಸಮ್ಮೇಳನಗಳಲ್ಲಿ ನಿರ್ದಿಷ್ಟವಾದ ಅಜೆಂಡಾವನ್ನು ಪ್ರಕಟಿಸುವುದಿಲ್ಲ. ಈ ವರ್ಷ ಭಾರತದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ “ವಸುಧೈವ ಕುಟುಂಬಕಂ: ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಧ್ಯೇಯವಾಕ್ಯವಿದೆ. ಹೀಗಾಗಿ ಜಿ20 ರಾಷ್ಟ್ರಗಳನ್ನು ಕಾಡುತ್ತಿರುವ ಸಮಸ್ಯೆಗಳನ್ನು ಒಂದಾಗಿ ಎದುರಿಸಲು ತೀರ್ಮಾನಗಳನ್ನು ಮಾಡಲಾಗುತ್ತದೆ. ಜಾಗತಿಕ ಸಮಸ್ಯೆಗಳನ್ನು ಸಾಂ ಕವಾಗಿ ಎದುರಿಸುವುದು, ಪರಿಸರ ಸ್ನೇಹಿ ಇಂಧನಕ್ಕೆ ಹೊರಳಿಕೊಳ್ಳುವುದು, ಹವಾಮಾನ್ಯ ವೈಪರೀತ್ಯದ ವಿರುದ್ಧ ಹೋರಾಡುವುದು, ರಷ್ಯಾ-ಉಕ್ರೇನ್ ಯುದ್ಧದಿಂದ ಎದುರಾಗಿರುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ನಿಭಾಯಿಸುವುದು ಇಲ್ಲಿನ ಮುಖ್ಯ ಉದ್ದೇಶ ಎಂದು ಅಮೆರಿಕ ಅಧ್ಯಕ್ಷ ಬೈಡೆನ್ ಹೇಳಿದ್ದಾರೆ. ಭಾರತ ಅಶಕ್ತ ರಾಷ್ಟ್ರಗಳಿಗೆ ಧ್ವನಿಯಾಗುತ್ತೇನೆಂದು ಹೇಳಿಕೊಂಡಿದೆ.
ಸುಳ್ಳು ಸುದ್ದಿಗಳನ್ನು ನಂಬದಿರಿ
ಜಿ20 ರಾಷ್ಟ್ರಗಳ ಸಮ್ಮೇಳನ ಹಿನ್ನೆಲೆಯಲ್ಲಿ ಸಮುದಾಯವೊಂದು ಆಯೋಜನೆ ಮಾಡಿರುವ ಮೆರವಣಿಗೆಗೆ ನಿಷೇಧ ಹೇರಲಾಗಿದೆ ಎಂಬ ವರದಿಗಳನ್ನು ದೆಹಲಿ ಪೊಲೀಸ್ ಇಲಾಖೆ ನಿರಾಕರಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಪೊಲೀಸ್ “ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಆಗಿರುವ ಅಂಶಗಳು ಸತ್ಯಕ್ಕೆ ದೂರವಾದ ಅಂಶ. ಮೆರವಣಿಗೆ ನಿಷೇಧ ಮಾಡಲಾಗಿರುವ ಬಗ್ಗೆ ಯಾವುದೇ ಆದೇಶ ನೀಡಲಾಗಿಲ್ಲ’ ಎಂದು ಬರೆದುಕೊಳ್ಳಲಾಗಿದೆ.
ಜಿ20 ಆ್ಯಪ್‌ನಲ್ಲಿ ಏನೇನಿದೆ?
ವಿಶ್ವಸಂಸ್ಥೆಯ ವ್ಯಾಪ್ತಿಯಲ್ಲಿ ಇರುವ ಇಂಗ್ಲಿಷ್, ಹಿಂದಿ, ಜರ್ಮನ್, ಜಪಾನಿ, ಪೋರ್ಚುಗೀಸ್ ಭಾಷೆಗಳನ್ನು ಒಳಗೊಂಡಿದೆ.
ಕೇಂದ್ರ ವಿದೇಶಾಂಗ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ಆ್ಯಪ್ ಸಿದ್ಧಪಡಿಸಲಾಗಿದೆ. 25 ಸಾವಿರಕ್ಕಿಂತಲೂ ಹೆಚ್ಚಿನವರಿಂದ ಡೌನ್‌ಲೋಡ್.
ಭಾರತ ಹೊಂದಿರುವ ಜಿ20 ರಾಷ್ಟ್ರಗಳ ಅಧ್ಯಕ್ಷತೆಯ ಅವಧಿ ಮುಕ್ತಾಯದ ವರೆಗೆ ಕಾರ್ಯರ್ವಹಣೆ
ಭಾಷೆಗಳ ಭಾಷಾಂತರ ವ್ಯವಸ್ಥೆ, ಹೊಸದಿಲ್ಲಿಯ ಪ್ರಮುಖ ಸ್ಥಳಗಳು, ಸಮ್ಮೇಳನ ನಡೆಯುವ ಭಾರತ ಮಂಟಪಮ್‌ಗೆ ಸಂಚಾರ ವ್ಯವಸ್ಥೆಯ ವಿವರಗಳು ಇವೆ.
ಸಮ್ಮೇಳನಕ್ಕೆ ಸಂಬಂಧಿಸಿದ ವಿಡಿಯೊಗಳು, ಚರ್ಚೆಗಳು, ದಾಖಲೆಗಳು, ನಿರ್ಣಯಗಳ ವಿವರಗಳು ಅದರಲ್ಲಿ ಲಭ್ಯವಾಗಲಿವೆ.
ಡ್ರೋನ್ ನಿಗ್ರಹ ಸಾಧನ ಅಳವಡಿಕೆ
ಜಿ20 ನಡೆಯಲಿರುವ ಭಾರತ ಮಂಟಪಂನಲ್ಲಿ ಸಂಭವನೀಯ ಡ್ರೋನ್ ದಾಳಿಯನ್ನು ತಡೆಯಲು ಭಾರತ ಸಿದ್ಧವಾಗಿದೆ. ಶತ್ರುಗಳ ಡ್ರೋನ್‌ಗಳನ್ನು ಹೊಡೆದುರುಳಿಸಲು ಡ್ರೋನ್ ನಿಗ್ರಹ ಸಾಧನವನ್ನು ಡಿಆರ್‌ಡಿಒ ಅಳವಡಿಸಿದೆ. “ಡಿಆರ್‌ಡಿಒ, ಭಾರತೀ ಯ ಸೇನೆ ಹಾಗೂ ಇತರೆ ಸಾರ್ವಜನಿಕ ಸಂಸ್ಥೆ ಗಳ ಡ್ರೋನ್ ವಿರೋಧಿ ಸಾಧನಗಳು ಸಂಭವನೀಯ ವಾಯು ಬೆದರಿಕೆಯನ್ನು ಹತ್ತಿಕ್ಕಲು ದಿನದ 24 ಗಂಟೆಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.