IMEC ಗೆ ಟರ್ಕಿಯಿಂದ ಪ್ರತ್ಯಸ್ತ್ರ
Team Udayavani, Sep 24, 2023, 12:17 AM IST
ಹೊಸದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯ ವೇಳೆ ಚೀನದ ಬೆಲ್ಟ್ ಆ್ಯಂಡ್ ರೋಡ್ ಯೋಜನೆಗೆ ಪ್ರತಿಯಾಗಿ ಭಾರತ- ಮಧ್ಯಪ್ರಾಚ್ಯ- ಯುರೋಪ್ ಕಾರಿಡಾರ್(ಐಎಂಇಸಿ) ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಭಾರತ, ಯುಎಇ, ಸೌದಿ ಅರೇಬಿಯಾ, ಅಮೆರಿಕ, ಜಪಾನ್, ಐರೋಪ್ಯ ಒಕ್ಕೂಟ, ಫ್ರಾನ್ಸ್, ಇಟಲಿ, ದೇಶಗಳು ಸೇರಿ ಹೊಸದಾಗಿ ಭಾರ ತ-ಮಧ್ಯ ಪ್ರಾಚ್ಯ-ಐರೋಪ್ಯ ರಾಷ್ಟ್ರಗಳೊಂದಿಗೆ ಸಂಪರ್ಕ ಕೊಂಡಿ ಯಾಗಿ ಈ ಆರ್ಥಿಕ ಕಾರಿಡಾರ್ ರಚಿ ಸುವ ತೀರ್ಮಾನಕ್ಕೆ ಬರಲಾಗಿದೆ. ಆದರೆ ಈ ಬಗ್ಗೆ ಟರ್ಕಿ ಅಸಮಾಧಾನಗೊಂಡಿದೆ. ಸದ್ಯ ಟರ್ಕಿಯು ತನ್ನ ಮಿತ್ರರಾಷ್ಟ್ರಗಳನ್ನು ಒಗ್ಗೂಡಿಸಿಕೊಂಡು ಪರ್ಯಾಯವಾಗಿ ಹೊಸ ಕಾರಿಡಾರ್ ರಚನೆಯ ಕಾರ್ಯದಲ್ಲಿ ತೊಡಗಿ ಕೊಂಡಿದೆ. ಟರ್ಕಿಯ ಅಸಮಾಧಾನಕ್ಕೆ ಕಾರಣವೇನು?, ಟರ್ಕಿಯ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಟರ್ಕಿ ಅಸಮಾಧಾನಕ್ಕೆ ಕಾರಣ?
ಜಿ20 ಶೃಂಗಸಭೆಯ ವೇಳೆ ಕೈಗೊಂಡ ನಿರ್ಣಯದಲ್ಲಿ ಹೊಸ ಆರ್ಥಿಕ ಕಾರಿಡಾರ್‌ನಲ್ಲಿ ಚೀನದ ಬೆಲ್ಟ್ ಆ್ಯಂಡ್ ರೋಡ್ ಯೋಜನೆಗೆ ಬೆಂಬಲವಾಗಿದ್ದ ಟರ್ಕಿಯನ್ನು ಹೊರಗಿಡಲಾಗಿತ್ತು. ಈ ಬಗ್ಗೆ ಶೃಂಗಸಭೆಯ ಬಳಿಕ ಪ್ರತಿಕ್ರಿಯೆ ನೀಡಿದ್ದ ಟರ್ಕಿಯ ಅಧ್ಯಕ್ಷ ರಿಸೆಪ್ ತಯಿಪ್ ಎಡ್ರೊಗೆನ್ ಅವರು, ಟರ್ಕಿಯನ್ನು ಹೊರತುಪಡಿಸಿ ಯಾವುದೇ ಕಾರಿಡಾರ್ ರಚಿಸಲು ಸಾಧ್ಯವಿಲ್ಲ. ಪೂರ್ವದಿಂದ ಪಶ್ಚಿಮಕ್ಕೆ ವ್ಯಾಪಾರಕ್ಕೆ ತೆರಳಲು ಸೂಕ್ತವಾದ ಮಾರ್ಗವೆಂದರೆ ಟರ್ಕಿ ಮೂಲಕ ತೆರಳುವುದು ಎಂದಿದ್ದರು. ಹಿಂದಿನಿಂದಲೂ ಪೂರ್ವ ಮತ್ತು ಪಶ್ವಿಮ ರಾಷ್ಟ್ರಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಟರ್ಕಿಗೆ ಹೊಸ ಕಾರಿಡಾರ್ ರಚನೆಯ ನಿರ್ಧಾರ ಆಘಾತ ನೀಡಿತ್ತು.
ಟರ್ಕಿಯಿಂದ ಹೊಸ ಯೋಜನೆ
ಭಾರತ- ಮಧ್ಯಪ್ರಾಚ್ಯ- ಯುರೋಪ್ ಕಾರಿಡಾರ್‌ಗೆ ಪರ್ಯಾಯವಾಗಿ ಸುಮಾರು 17 ಬಿಲಿಯನ್ ಡಾಲರ್ ಮೊತ್ತದ ಹೊಸ ಮಾರ್ಗದ ಬಗ್ಗೆ ಇರಾಕ್ ಡೆವಲಪ್‌ಮೆಂಟ್ ರೋಡ್ ಇನಿಶಿಯೇಟಿವ್ ಯೋಜನೆ ರೂಪಿಸಿದೆ. ಕತಾರ್, ಯುಎಇ ಮತ್ತು ಇರಾಕ್ ರಾಷ್ಟ್ರಗಳ ಮಧ್ಯೆ ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ಟರ್ಕಿಯ ವಿದೇಶಾಂಗ ಸಚಿವ ಹ್ಯಾಕನ್ ಪೈಢನ್ ಹೇಳಿದ್ದಾರೆ.
ದಕ್ಷಿಣ ಇರಾಕ್‌ನ ಗ್ರ್ಯಾಂಡ್ ಫಾ ಬಂದರಿನಿಂದ ಹೊರಟು ಇರಾಕ್‌ನ 10 ಪ್ರಾಂತಗಳನ್ನು ದಾಟಿ ಟರ್ಕಿಯನ್ನು ತಲುಪುವ ಬಗ್ಗೆ ಬಾಗ್ಧಾದ್ ಸರಕಾರ ಬಿಡುಗಡೆ ಮಾಡಿದ ನೀಲನಕ್ಷೆಯಲ್ಲಿ ತಿಳಿಸಿದೆ. ಮೂರು ಹಂತದಲ್ಲಿ ಈ ಯೋಜನೆ ನಿರ್ಮಾಣವಾಗಲಿದ್ದು, 2028ರಲ್ಲಿ ಮೊದಲ ಹಂತ ಪೂರ್ಣಗೊಂಡರೆ, ಕೊನೆಯ ಹಂತ 2050ರಲ್ಲಿ ಮುಗಿಯಲಿದೆ. ಭಾರತ- ಮಧ್ಯಪ್ರಾಚ್ಯ- ಯುರೋಪ್ ಕಾರಿಡಾರ್ ಪೂರ್ಣಗೊಳ್ಳಲೂ ಹಲವು ದಶಕಗಳು ಬೇಕಾಗಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಕತಾರ್, ಯುಎಇಯಿಂದ ಬೆಂಬಲ ನಿರೀಕ್ಷೆ
ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಟರ್ಕಿಯು ಆರ್ಥಿಕ ಸಮಸ್ಯೆ ಎದುರಿ ಸುತ್ತಿದೆ. ಈ ಹಿನ್ನೆಲೆಯಲ್ಲಿ ಯುಎಇ ಮತ್ತು ಕತಾರ್‌ನ ಬೆಂಬಲದ ನಿರೀಕ್ಷೆ ಯಲ್ಲಿದೆ. ಈ ಯೋಜನೆಯಲ್ಲಿ ಗಲ್ಫ್ ರಾಷ್ಟ್ರಗಳು ಹೂಡಿಕೆ ಮಾಡುವಂತೆ ಮನ ವೊಲಿಸಬೇಕಾಗಿದೆ ಎಂದು ಯುರೇಷ್ಯಾ ಥಿಂಕ್ -ಟ್ಯಾಂಕ್‌ನ ಯುರೋಪ್ ನಿರ್ದೇಶಕ ಎಮ್ರೆ ಪೆಕರ್ ಹೇಳಿದ್ದಾರೆ.
ರಂಜಿನಿ, ಮಿತ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.