Army Day: ಇಂದು ಭಾರತೀಯ ಸೇನಾ ದಿನ; ಸೈನಿಕರಿಗೆ ಸಲಾಂ
ಪ್ರತೀ ವರ್ಷ ಜ.15ರಂದು ಭಾರತೀಯ ಸೇನಾ ದಿನ ಆಚರಣೆಯ ಮಹತ್ವ ಗೊತ್ತಾ?
Team Udayavani, Jan 15, 2025, 3:46 AM IST
ಮಳೆ, ಗಾಳಿ, ಬಿಸಿಲು, ಕೊರೆಯುವ ಚಳಿ ಯಾವುದಕ್ಕೂ ಅಂಜದೆ, ಜೀವವನ್ನು ಪಣಕ್ಕಿಟ್ಟು “ಸೇವಾ ಪರಮೋಧರ್ಮ’ ಎಂಬ ತತ್ತ್ವದೊಂದಿಗೆ ಸದಾ ದೇಶದ ರಕ್ಷಣೆಯಲ್ಲಿ ತೊಡಗಿರುವ ದೇಶದ ಸೈನಿಕರ ಸಮರ್ಪಣೆಯನ್ನು ಗೌರವಿಸಲು, ಹುತಾತ್ಮ ಯೋಧರನ್ನು ಸ್ಮರಿಸಲು ಹಾಗೂ ಸ್ವಾತಂತ್ರ್ಯದ ಬಳಿಕ ಬ್ರಿಟಿಷರಿಂದ ಸೇನಾ ಆಡಳಿತವು ಭಾರತದ ತೆಕ್ಕೆಗೆ ಹಸ್ತಾಂತರಗೊಂಡ ದಿನದ ಪ್ರಾಮುಖ್ಯವಾಗಿ ಪ್ರತೀ ವರ್ಷ ಜ.15ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ದಿನದ ಮಹತ್ವ ಹಾಗೂ ಭಾರತೀಯ ಸೇನೆಯ ಕೆಲವು ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.
ದಿನದ ಮಹತ್ವ
1947ರಲ್ಲಿ ಭಾರತ ಸ್ವತಂತ್ರವಾದ ಸುಮಾರು ಒಂದೂ ವರೆ ವರ್ಷಗಳ ಬಳಿಕ 1949ರ ಜ.15ರಂದು ಬ್ರಿಟಿಷರ ಆಳ್ವಿಕೆಯಿಂದ ಭಾರತೀಯ ಭೂಸೇನೆಗೆ, ಭಾರತೀಯ ಮುಖ್ಯಸ್ಥರಿಗೆ ಸೇನಾ ಆಡಳಿತವನ್ನು ಹಸ್ತಾಂತರಿ ಸಲಾಯಿತು. ಈ ದಿನದ ನೆನಪಿಗಾಗಿ ಪ್ರತೀ ವರ್ಷ ಈ ದಿನವನ್ನು ಭಾರತೀಯ ಸೇನಾ ದಿನವೆಂದು ಆಚರಿಸಲಾಗುತ್ತಿದೆ.
ಭಾರತೀಯ ಮುಖ್ಯಸ್ಥ
1949ರಲ್ಲಿ ಭಾರತಕ್ಕೆ ಸಂಪೂರ್ಣ ವಾಗಿ ಅಧಿಕಾರ ಹಸ್ತಾಂತರವಾದಾಗ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ವತಂತ್ರ ಭಾರತದ ಸೇನೆಯ ಮೊದಲ ಮುಖ್ಯಸ್ಥರಾಗಿ ನೇಮಕಗೊಂಡರು. ಕರ್ನಾಟಕದ ಕೊಡಗಿನವರಾದ ಕಾರ್ಯಪ್ಪ ಅವರು ಸುಮಾರು 3 ದಶಕಗಳ ಕಾಲ ಸೇವಾವಧಿಯಲ್ಲಿದ್ದರು. ಸ್ಯಾಮ್ ಮಾಣಿಕ್ ಷಾರವರ ಅನಂತರ ಫೀಲ್ಡ್ ಮಾರ್ಷಲ್ ಪಡೆದ ಎರಡನೇ ಜನರಲ್ ಇವರು.
ಸಶಸ್ತ್ರ ಪಡೆಗಳ ಮುಖ್ಯಸ್ಥ
2019ರಲ್ಲಿ ದೇಶದ ಮೂರು ಸಶಸ್ತ್ರ ಪಡೆಗಳಿಗೆ ಮುಖ್ಯಸ್ಥರನ್ನು ನೇಮಿಸಲಾಯಿತು. 2021ರಲ್ಲಿ ವಿಮಾನ ದುರಂತದಲ್ಲಿ ಅವರ ನಿಧನದ ಬಳಿಕ 2022ರಲ್ಲಿ
ಜ| ಅನಿಲ್ ಚೌವ್ಹಾಣ್ ಅವರನ್ನು ನೇಮಿಸಲಾಯಿತು.
ಇಂದು ಪುಣೆಯಲ್ಲಿ ಪರೇಡ್
ಸೇನಾದಿನದ ಅಂಗವಾಗಿ ಜ.15ರಂದು ಮಹಾರಾಷ್ಟ್ರದ ಪುಣೆಯಲ್ಲಿ ಭಾರತೀಯ ರಕ್ಷಣ ಪಡೆ ಗಳಿಂದ ವಿಶೇಷ ಪರೇಡ್, ಸೇನಾ ಶಕ್ತಿ ಪ್ರದರ್ಶನ, ಸೇನಾ ಮಾಹಿತಿಗಳ ವಸ್ತು ಪ್ರದರ್ಶನ ನಡೆಯ ಲಿದೆ. ಇದೇ ಪ್ರಪ್ರಥಮ ಬಾರಿಗೆ ಭಾರತೀಯ ಸೇನೆಯ ಹೊಸ ತಂತ್ರಜ್ಞಾನದ ರೋಬೋಟಿಕ್ಸ್ ಮ್ಯೂಲ್ಸ್‌ಗಳು ಹಾಗೂ ಸಂಪೂರ್ಣ ಮಹಿಳಾ ಎನ್‌ಸಿಸಿ ಕೆಡೆಟ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಅತೀ ದೊಡ್ಡ ರಕ್ಷಣ ಪಡೆ
14 ಲಕ್ಷಕ್ಕೂ ಹೆಚ್ಚಿನ ಸೇನಾ ವೀರರನ್ನು ಹೊಂದಿರುವ ಭಾರತದ ಸೇನೆ ಪ್ರಪಂಚದ ಅತೀ ದೊಡ್ಡ ರಕ್ಷಣ ಪಡೆ ಹೊಂದಿರುವ ರಾಷ್ಟ್ರಗಳ ಪೈಕಿ ಚೀನ ಬಳಿಕ ಎರಡನೇ ಸ್ಥಾನದಲ್ಲಿದೆ. ಅಲ್ಲದೇ ಅತೀ ಶಕ್ತಿಯುತ ಸೇನಾ ಪಡೆಯಲ್ಲಿ 5ನೇ ಸ್ಥಾನ ಹಾಗೂ ಅತೀ ದೊಡ್ಡ ಸೇನಾ ಬಜೆಟ್ ಹೊಂದಿರುವ ಮೂರನೇ ರಾಷ್ಟ್ರ ಭಾರತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಒಕ್ಕಲಿಗ ಸಮುದಾಯದ ಡಿಕೆಶಿಯನ್ನೇ ನೇಮಿಸಲಿ
Fertility Rate Down: ಮಕ್ಕಳಿರಲವ್ವ ಮನೆ ತುಂಬ!; ಹೆಚ್ಚು ಮಕ್ಕಳ ಹೆರಲು ನಾನಾ ಆಫರ್‌ಗಳು
ನಿಸರ್ಗದ ದಿವ್ಯಾರಾಧನೆಯ ಪ್ರತೀಕ ಮಕರ ಸಂಕ್ರಾಂತಿ
Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ
ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ
MUST WATCH
ಹೊಸ ಸೇರ್ಪಡೆ
C.T.Ravi ಪರವಾಗಿ ಸ್ವಾಮಿ ಕೊರಗಜ್ಜನ ಮೊರೆ ಹೋದ ಬಿಜೆಪಿ ಕಾರ್ಯಕರ್ತರು
Kittur: ನಿಯಂತ್ರಣ ತಪ್ಪಿ ಮರಕ್ಕೆ ಬೈಕ್ ಡಿಕ್ಕಿ: ಇಬ್ಬರು ಯುವಕರು ಸಾ*ವು
BJP ನಾಯಕನಿಂದ ಪಕ್ಷದ ಕಾರ್ಯಕರ್ತೆಯ ಅತ್ಯಾಚಾ*ರ;ಬಂಧನ,ಪಕ್ಷದಿಂದ ಉಚ್ಚಾಟನೆ
PoK ಇಲ್ಲದೆ ಜಮ್ಮು ಮತ್ತು ಕಾಶ್ಮೀರವು ಅಪೂರ್ಣ: ಪಾಕ್ ಗೆ ರಾಜನಾಥ್ ಎಚ್ಚರಿಕೆ
Congress; ಗೊಂದಲಗಳ ಮಧ್ಯೆ ದೆಹಲಿ ಪ್ರವಾಸ ಕೈಗೊಂಡ ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.