ಚಳಿಗಾಲದಲ್ಲೂ ಸೇನೆ ನಿಯೋಜನೆ : ಸಂಸದೀಯ ಮಂಡಳಿಗೆ ಸಿಡಿಎಸ್ ಮಾಹಿತಿ
Team Udayavani, Aug 12, 2020, 2:27 PM IST
ಹೊಸದಿಲ್ಲಿ: ಎಲ್ಎಸಿಯ ಬಿಕ್ಕಟ್ಟನ್ನು ದೀರ್ಘಾವಧಿವರೆಗೆ ಎದುರಿಸಲು ಭಾರತ ಸನ್ನದ್ಧವಾಗಿದೆ. ಕಠಿನ ಚಳಿಗಾಲದಲ್ಲೂ ಸೈನಿಕರ ನಿಯೋಜನೆಗೆ ಸೇನೆ ಸಿದ್ಧವಾಗಿದೆ ಎಂದು ಉನ್ನತ ಮಟ್ಟದ ಸೇನಾಧಿಕಾರಿಗಳು ಸಂಸದೀಯ ಮಂಡಳಿಗೆ ಅಧಿಕೃತವಾಗಿ ಮಾಹಿತಿ ಒಪ್ಪಿಸಿದ್ದಾರೆ.
ಮುಖ್ಯ ರಕ್ಷಣಾ ಸಿಬಂದಿ (ಸಿಡಿಎಸ್) ಜನರಲ್ ಬಿಪಿನ್ ರಾವತ್ ನೇತೃತ್ವದಲ್ಲಿ ಉನ್ನತಾಧಿಕಾರಿಗಳು ಭಾರತ- ಚೀನ ನಡುವಿನ ಬಿಕ್ಕಟ್ಟು ಶೀಘ್ರವೇ ಬಗೆಹರಿಯುವುದಿಲ್ಲ. ಉದ್ವಿಗ್ನತೆ ತಣ್ಣಗಾಗಲು ಹೆಚ್ಚಿನ ಸಮಯ ಹಿಡಿಸುತ್ತದೆ ಎಂದು ವಾಸ್ತವ ತಿಳಿಸಿದ್ದಾರೆ.
ಗಡಿಯಲ್ಲಿ ಎದುರಾಳಿಗಳಿಂದ ಯಾವುದೇ ಸವಾಲು ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಸೇನೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ಚಳಿಗಾಲಕ್ಕೆ ಅಗತ್ಯವಾದ ರಕ್ಷಣಾ ಉಡುಪುಗಳ ಕಿಟ್, ಆಹಾರ ಸಾಮಗ್ರಿ, ಯುದ್ದೋಪಕರಣಗಳ ಸಂಗ್ರಹ ಮತ್ತು ಖರೀದಿಯನ್ನು ಸೇನೆ ಚುರುಕುಗೊಳಿಸಿದೆ.
ಚೀನ ಕ್ಷಿಪಣಿ ನಿಯೋಜನೆ: ಭಾರತ ವಿರುದ್ಧದ ಗಡಿಬಿಕ್ಕಟ್ಟನ್ನು ಚೀನ ಇನ್ನಷ್ಟು ತೀವ್ರಗೊಳಿಸುವ ಯೋಚನೆಯಲ್ಲಿದೆ. ಭಾರತದ ಉತ್ತರ ಮತ್ತು ಪೂರ್ವ ಗಡಿ ವಲಯಗಳಲ್ಲಿ ಕ್ಷಿಪಣಿಗಳನ್ನು ನಿಯೋಜಿ ಸುತ್ತಿರುವುದು ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟವಾಗಿದೆ ಎಂದು ಓಪನ್ ಸೋರ್ಸ್ ಇಂಟೆಲಿಜೆನ್ಸ್ (ಓಎಸ್ಐಎನ್ಟಿ) ಎಚ್ಚರಿ ಸಿದೆ. ಹೊತಾನ್ ಮತ್ತು ಕಾಷ್ಪರ್ನಲ್ಲಿ ಎಚ್-6 ಬಾಂಬರ್ ಯುದ್ಧವಿಮಾನಗಳನ್ನು ನಿಯೋಜಿಸಿರುವ ಬಗ್ಗೆಯೂ ಈ ಹಿಂದೆ ಎಚ್ಚರಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Panaji: ಕಲಂಗುಟ್ ಬೀಚ್ ನಲ್ಲಿ ಪ್ರವಾಸಿ ಕೊಲೆ
Glass Bridge: ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗಾಜಿನ ಸೇತುವೆ ಉದ್ಘಾಟನೆ
Rane’s Remark: ಕೇರಳ ʼಮಿನಿ ಪಾಕಿಸ್ಥಾನʼವೆಂದ ಸಚಿವ ನಿತೇಶ್ ರಾಣೆ; ಸಿಎಂ ಪಿಣರಾಯಿ ಖಂಡನೆ
ರಾಜ್ಯದ ಜನರಲ್ಲಿ ಕ್ಷಮೆಯಾಚಿಸುತ್ತೇನೆ… ಮಣಿಪುರ ಹಿಂಸಾಚಾರದ ಕುರಿತು ಸಿಎಂ ಬಿರೇನ್ ಸಿಂಗ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.