ಸೇನಾ ನೇಮಕಾತಿ ರ‍್ಯಾಲಿ: 2ನೇ ದಿನವೂ ಉತ್ತಮ ಸ್ಪಂದನೆ
Team Udayavani, Mar 19, 2021, 5:25 AM IST
ಉಡುಪಿ: ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರ್ಯಾಲಿಗೆ ಎರಡನೇ ದಿನವಾದ ಗುರುವಾರವೂ ಅತ್ಯುತ್ತಮ ಸ್ಪಂದನೆ ವ್ಯಕ್ತವಾಯಿತು.
ದೈಹಿಕ ಪರೀಕ್ಷೆ 2ನೇ ಸುತ್ತಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು 1,600 ಮೀ. ಓಟ, ಝಿಗ್-ಝಾಗ್, ಪುಲ್‌ಅಪ್ಸ್, ಲಾಂಗ್ ಜಂಪ್ ಸ್ಪರ್ಧೆಗೆ ಕಳುಹಿಸಲಾಯಿತು. ಅಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ನೇರವಾಗಿ ದೇಹದ ಅಳತೆ ಪರೀಕ್ಷೆಗೆ ಕಳುಹಿಸಲಾಯಿತು.
2,000 ಮಂದಿ ತೇರ್ಗಡೆ
ಬಾಗಲಕೋಟೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಪಾಲ್ಗೊಂಡಿ ದ್ದರು. 2ನೇ ದಿನದ ಪರೀಕ್ಷೆಯಲ್ಲಿ ಒಟ್ಟು 7,000 ಮಂದಿ ಭಾಗವಹಿಸಿದ್ದು, 2,000 ಮಂದಿ ತೇರ್ಗಡೆಗೊಂಡರು. ವೈದ್ಯಕೀಯ ಪರೀಕ್ಷೆ ಶುಕ್ರವಾರ ನಡೆಯಲಿದೆ.
ವಾಹನದಲ್ಲೇ ರಾತ್ರಿ ಕಳೆದ ಅಭ್ಯರ್ಥಿಗಳು
ಅಭ್ಯರ್ಥಿಗಳಿಗೆ ಜಿಲ್ಲಾಡಳಿತದ ವತಿಯಿಂದ ಆಯ್ದ ಕೆಲವೆಡೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಬಹುತೇಕ ಹೆಚ್ಚಿನ ಮಂದಿ ತಾವು ಆಗಮಿಸಿದ ವಾಹನದಲ್ಲಿಯೇ ರಾತ್ರಿ ಕಳೆದರು. ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಹೀಗೆ ಮಾಡಬೇಕಾಯಿತು ಎಂದು ಕೆಲವು ಮಂದಿ ಅಭ್ಯರ್ಥಿಗಳು ತಿಳಿಸಿದರು.
ಅಜ್ಜರಕಾಡು ಪಾರ್ಕ್ ಸಹಿತ ರಸ್ತೆ ಬದಿಗಳಲ್ಲಿ ಅನ್ಯ ಜಿಲ್ಲೆಯಿಂದ ಆಗಮಿ ಸಿದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.
ಕೋವಿಡ್-19 ನಿಯಮ ಉಲ್ಲಂಘನೆ
ಒಂದೆಡೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹೆಚ್ಚಳವಾಗುತ್ತಿದ್ದು, ಹಲವಾರು ನಿಯಂತ್ರಣ ಕ್ರಮಗಳನ್ನು ಜಿಲ್ಲಾಡಳಿತ ಹೊರಡಿಸುತ್ತಿದ್ದರೂ ಅಜ್ಜರಕಾಡು ಬಳಿ ಸೇನಾ ನೇಮಕಾತಿ ರ್ಯಾಲಿಗೆ ಆಗಮಿಸಿದವರು ಮಾಸ್ಕ್ ಧರಿಸದೆ ಸಂಪೂರ್ಣವಾಗಿ ನಿಯಮಾವಳಿಗಳನ್ನು ಉಲ್ಲಂ ಸಿ ದ್ದರು. ಪಾರ್ಕ್, ರಸ್ತೆಬದಿ, ಆಟೋ ರಿಕ್ಷಾಗಳಲ್ಲಿ ಅಭ್ಯರ್ಥಿಗಳು ಮಾಸ್ಕ್ ಧರಿಸದೆ ಪ್ರಯಾಣಿಸುತ್ತಿದ್ದರು. ಸಾಮಾಜಿಕ ಅಂತರವೂ ಮರೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.