T-20: ಫಾರ್ಮ್‌ನಲ್ಲೇ ಇಲ್ಲದ ಕ್ರಿಕೆಟಿಗ ಸೂರ್ಯಕುಮಾರ್ ನಾಯಕತ್ವದ ಸುತ್ತಮುತ್ತ…
ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿ- ಸ್ಯಾಮ್ಸನ್, ಚಹಲ್ ಕೈಬಿಟ್ಟಿದ್ದಕ್ಕೆ ಆಕ್ರೋಶ
Team Udayavani, Nov 21, 2023, 11:14 PM IST
ಮುಂಬಯಿ: “ಸೂರ್ಯ ಕುಮಾರ್ ಯಾದವ್ ಯಾವ ಸೀಮೆಯ ನಾಯಕ?’… ಹೀಗೆಂದು ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿ ಗಳು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ. ಅಜಿತ್ ಅಗರ್ಕರ್ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೇಲೆ ಹರಿಹಾಯ್ದಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಮುಂಬರುವ ಟಿ20 ಸರಣಿಗಾಗಿ ಆರಿಸಲಾದ ತಂಡದ ಬಗ್ಗೆಯೂ ಅಸಮಾಧಾನ ವ್ಯಕ್ತವಾ ಗಿದೆ. ಇದು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದೆ.
ಸೂರ್ಯಕುಮಾರ್ ಯಾದವ್ ಭಾರತದ ವಿಶ್ವಕಪ್ ತಂಡದ ಆಟಗಾರ ನಾಗಿದ್ದರು. ಆದರೆ ಸಾಧಿಸಿದ್ದೇನೂ ಇಲ್ಲ. ಕೂಟದಲ್ಲಿ ಒಂದೇ ಒಂದು ಅರ್ಧ ಶತಕವನ್ನೂ ಬಾರಿಸಲಿಲ್ಲ. ಫೈನಲ್‌ನಲ್ಲಿ ಮಿಂಚುವ ಉತ್ತಮ ಅವಕಾಶ ಇತ್ತಾದರೂ ಇದನ್ನು ವ್ಯರ್ಥ ಗೊಳಿಸಿದರು. ಈ ಎಲ್ಲ ವೈಫಲ್ಯದ ಹೊರತಾಗಿಯೂ ಅವರನ್ನು ಟಿ20 ತಂಡದ ನಾಯಕರನ್ನಾಗಿ ನೇಮಿಸುವ ಅಗತ್ಯ ಏನಿತ್ತು, ಇದರ ಔಚಿತ್ಯವೇನು ಎಂಬುದಾಗಿ ಪ್ರಶ್ನಿಸಿದ್ದಾರೆ.
ಸೂರ್ಯಕುಮಾರ್ ಟಿ20 ಸ್ಪೆಷಲಿಸ್ಟ್ ನಿಜ. ಆದರೆ ಅವರನ್ನು ನಾಯಕನನ್ನಾಗಿ ನೇಮಿಸುವ ಅಗತ್ಯ ಇರಲಿಲ್ಲ ಎಂಬುದು ಕ್ರಿಕೆಟ್ ಪ್ರೇಮಿಗಳ ವಾದ. ಹಾಗೆಯೇ ರುತುರಾಜ್ ಗಾಯಕ್ವಾಡ್‌ಗೆ
ಉಪನಾಯಕ್ವ ನೀಡಿದ್ದು ಕೂಡ ಸರಿಯಲ್ಲ ಎಂದು ಚರ್ಚಿಸಲಾಗುತ್ತಿದೆ. ಸೂರ್ಯ ಮತ್ತು ಗಾಯಕ್ವಾಡ್‌ಗಿಂತಲೂ ಸೀನಿಯರ್ ಆಟಗಾರನಾಗಿರುವ ಅಕ್ಷರ್ ಪಟೇಲ್ ತಂಡದಲ್ಲಿರುವಾಗ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಬೇಕಿತ್ತು ಎಂಬುದು ಬಹುತೇಕ ಮಂದಿಯ ವಾದ.
ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್ ಮತ್ತು ಲೆಗ್‌ಸ್ಪಿನ್ನರ್ ಯಜುವೇಂದ್ರ ಚಹಲ್ ಅವರನ್ನು ಕೈಬಿಟ್ಟದ್ದು ಕೂಡ ಭಾರೀ ಟೀಕೆಗೆ ಕಾರಣವಾಗಿದೆ. ಸ್ಯಾಮ್ಸನ್ ಕಳೆದ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆ ಯಾಗಿದ್ದರು. ಆದರೆ ಆಸೀಸ್ ಎದುರಿನ ಸರಣಿಗೆ ವಿನಾ ಕಾರಣ ಕೈಬಿಟ್ಟದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಗೆಲುವಿನಿಂದಲೇ ಉತ್ತರ
ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾ ಗಿದ್ದ ಭಾರತ ಈ ಅವಕಾಶವನ್ನು ಕಳೆದುಕೊಂಡು ಧರೆಗೆ ಕುಸಿದಿದೆ. ಬೆನ್ನಲ್ಲೇ ಆಸ್ಟ್ರೇಲಿಯ ಎದುರಿನ ಟಿ20 ಸರಣಿಯ ಕ್ಷಣಗಣನೆ ಆರಂಭವಾಗಿದೆ. ಇಲ್ಲಿ ಗೆದ್ದರೂ ಅದೇನೂ ಸೇಡಿಗೆ ಸಮನಾಗಲಾರದು. ಏಕೆಂದರೆ ವಿಶ್ವಕಪ್‌ಗೆ ಇನ್ನೊಂದು ವಿಶ್ವಕಪ್ ಮಾತ್ರವೇ ಸಾಟಿ. ಆದರೆ ಆಸ್ಟ್ರೇಲಿಯ ವಿರುದ್ಧ ಇನ್ನೊಂದು ಮುಖಭಂಗವನ್ನು ಅನುಭವಿಸುವ ಸ್ಥಿತಿಯಲ್ಲಿ ಭಾರತದ ಕ್ರಿಕೆಟ್ ಅಭಿಮಾನಿ ಗಳಿಲ್ಲ. ಇದನ್ನು ಸಹಿಸಲಿಕ್ಕೂ ಆಗದು. ಇದನ್ನು ಆಯ್ಕೆ ಸಮಿತಿ ಅರಿತು ತುಸು ಬಲಿಷ್ಠ ತಂಡವನ್ನೇ ಆರಿಸಬೇಕಿತ್ತು ಎಂಬ ವಾದದಲ್ಲಿ ಹುರುಳಿಲ್ಲದಿಲ್ಲ.
ಶ್ರೇಯಸ್ ಅಯ್ಯರ್ ಕೊನೆಯ 2 ಪಂದ್ಯಗಳಿಗೆ ಲಭ್ಯರಿರುತ್ತಾರೆ. ಅದೂ ಉಪನಾಯಕರಾಗಿ. ಅಂದರೆ ಸೂರ್ಯ ಕುಮಾರ್ ಅವರ “ಡೆಪ್ಯುಟಿ’. ಇದೆಲ್ಲಿಯ ನ್ಯಾಯ ಎಂಬುದು ಎಲ್ಲರ ಪ್ರಶ್ನೆ. ಸಾಮಾನ್ಯ ತಂಡದ ವಿರುದ್ಧವಾದರೆ ಇಂಥ ಆಯ್ಕೆ, ಇಂಥ ಪ್ರಯೋಗ ಓಕೆ. ಆದರೆ ವಿಶ್ವಕಪ್ ಗೆದ್ದ ಹುರುಪಿನಲ್ಲಿರುವ ಆಸ್ಟ್ರೇಲಿಯದಂಥ ಕ್ಲಾಸ್ ತಂಡದ ವಿರುದ್ಧ ಇಂಥ ಪ್ರಯೋಗ ದೊಡ್ಡ ಬ್ಲಿಂಡರ್ ಆಗುವ ಅಪಾಯವಿದೆ.
ಭಾರತಕ್ಕಿಂತ ಬಲಿಷ್ಠ
ಆಸ್ಟ್ರೇಲಿಯ ತಂಡ ಭಾರತಕ್ಕಿಂತಲೂ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ. ಭಾರತ ತಂಡಕ್ಕಿಂತ ಹೆಚ್ಚಿನ ಅನುಭವಿ ಹಾಗೂ ಅಪಾಯಕಾರಿ ಆಟಗಾರರನ್ನು ಇದು ಹೊಂದಿದೆ. ಮ್ಯಾಥ್ಯೂ ವೇಡ್ ನೇತೃತ್ವದ ಈ ತಂಡದಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚಿನ ವಿಶ್ವಕಪ್ ಹೀರೋಗಳಿದ್ದಾರೆ. ಟ್ರ್ಯಾವಿಸ್ ಹೆಡ್, ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿ ನಿಸ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್, ಸೀನ್ ಅಬೋಟ್, ಆ್ಯಡಂ ಝಂಪ ಮೊದಲಾದವರು ಇನ್ನೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗಿದ್ದಾರೆ. ಭಾರತ ತಂಡದಲ್ಲಿರುವ ವಿಶ್ವಕಪ್ ಆಟಗಾರರ ಸಂಖ್ಯೆ ಕೇವಲ ಮೂರು. ಇದರಲ್ಲಿ ಯಶಸ್ಸು ಕಂಡವರು ಯಾರೂ ಇಲ್ಲ. ಇದೊಂಥರ ಐಪಿಎಲ್ ಟೀಮ್‌ನಂತಿದೆ. ಆಸ್ಟ್ರೇಲಿಯದ ಎದುರು ಈ ಯುವ ಪಡೆ ಸಿಡಿದು ನಿಂತೀತೇ? ಪ್ರಶ್ನೆ ಸಹಜ.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯಿ, ಆರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಆವೇಶ್ ಖಾನ್, ಮುಕೇಶ್ ಕುಮಾರ್.
ಆಸ್ಟ್ರೇಲಿಯ ತಂಡ: ಮ್ಯಾಥ್ಯೂ ವೇಡ್ (ನಾಯಕ), ಆರನ್ ಹಾರ್ಡಿ, ಜೇಸನ್ ಬೆಹೆÅಂಡಾಫ್ì, ಸೀನ್ ಅಬೋಟ್, ಟಿಮ್ ಡೇವಿಡ್, ನಥನ್ ಎಲ್ಲಿಸ್, ಟ್ರ್ಯಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘಾ, ಮ್ಯಾಟ್ ಶಾರ್ಟ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೋಯಿನಿಸ್, ಕೇನ್ ರಿಚರ್ಡ್‌ಸನ್, ಆ್ಯಡಂ ಝಂಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.