ಖರಾಬು ಟ್ಯೂನ್ ಸುತ್ತ …
Team Udayavani, May 25, 2020, 4:22 AM IST
ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಖರಾಬು ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಮಾಸ್ ಪ್ರಿಯರು ಸಖತ್ ಇಷ್ಟಪಟ್ಟಿದ್ದಾ ರೆ. ಈಗ ಈ ಚಿತ್ರದ ಸಣ್ಣ ವಿವಾದವೊಂದು ಎದ್ದಿ ದೆ. ಅದು ಚಿತ್ರದ ಟ್ಯೂನ್ ಕುರಿತು. ಚಿತ್ರದ ಟ್ಯೂನ್ ತೆಲುಗು ಹಾಗೂ ತಮಿಳಿನ ಚಿತ್ರವೊಂದರ ಟ್ಯೂನ್‌ನಂತಿದೆ ಎಂದು. ಆ ಟ್ಯೂನ್ ಅನ್ನು ಖರಾಬು ಟ್ಯೂನ್‌ಗೆ ಸಾಮ್ಯತೆ ಇದೆ ಎಂದು.
ಆದರೆ, ಚಿತ್ರತಂಡ ಮಾತ್ರ ಇದನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಇದು ಒರಿಜಿನಲ್ ಟ್ಯೂನ್ ಆಗಿದ್ದು, ಬೇರೆ ಯಾವುದೇ ಸಿನಿಮಾದ ಟ್ಯೂನ್ ಅನ್ನು ಹೋಲುತ್ತಿಲ್ಲ ಎಂದಿದೆ. ಜೊತೆಗೆ ಇವತ್ತು ಕಾಪಿ ರೈಟ್ ಕಾಯ್ದೆ ಕಠಿಣವಾಗಿದ್ದು, ಆ ತರಹ ಏನಾದರೂ ಬಳಸಿಕೊಂಡರೆ ಖಂಡಿತಾ ಕೇಸ್ ಹಾಕಬಹುದು ಎಂದು ಚಿತ್ರತಂಡ ಹೇಳಿದೆ. ಜೊತೆಗೆ ತೆಲುಗು-ತಮಿಳು ಟ್ಯೂನ್‌ಗೆ ಇರುವ ವ್ಯತ್ಯಾಸ ಹಾಗೂ ತಮ್ಮ ಖರಾಬು ಸಾಂಗ್‌ನ ಟ್ಯೂನ್‌ಗೆ ಇರುವ ವ್ಯತ್ಯಾಸವನ್ನು ಚಿತ್ರತಂಡ ವಿವರಿಸಿದೆ.
ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರದಲ್ಲಿ ರಶ್ಮಿ ಕಾ ಮಂದಣ್ಣ ನಾಯಕಿ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಡೈಲಾಗ್ ಟೀಸರ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಧ್ರುವ ನಟನೆಯ ಭರ್ಜರಿ ಚಿತ್ರ 2017ರಲ್ಲಿ ಬಿಡುಗಡೆಯಾಗಿದ್ದು, ಆ ನಂತರ ಅವರ ಯಾವ ಸಿನಿಮಾವೂ ಬಿಡುಗಡೆಯಾಗಿಲ್ಲ. ಈಗ ಪೊಗರು ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
ಧ್ರುವ ಬಗ್ಗೆ ಹರಿಪ್ರಿಯಾ ಮಾತು: ಲಾಕ್‌ಡೌನ್‌ನಿಂದ ಸಿನಿಮಾ ಶೂಟಿಂಗ್ ಇಲ್ಲದೇ ಮನೆಯಲ್ಲೇ ಕುಳಿತಿರುವ ಹರಿಪ್ರಿಯಾ ಅವರು, ತಮ್ಮ ಬೇಬ್ ನೋಸ್ ಬ್ಲಾಗ್‌ನಲ್ಲಿ ಕಥೆಗಳನ್ನು ಅವರ ಅನುಭವಗಳನ್ನು ಬರೆಯುತ್ತಿರುತ್ತಾರೆ. ಹೀಗೆ ಹರಿಪ್ರಿಯಾ ತಮ್ಮ ಬ್ಲಾಗ್‌ನಲ್ಲಿ ನಟ ಧ್ರುವ ಸರ್ಜಾ ಅವರ ಬಗ್ಗೆ ಬರೆದಿದ್ದು, ಧ್ರುವ ಸಿಂಪಲ್ ಹುಡುಗ ಎಂದು ಹಾಡಿಹೊಗಳಿದ್ದಾರೆ. ಜೊತೆಗೆ ಲಾಕ್‌ಡೌನ್ ನಡುವೆ ಧ್ರುವ ಸರ್ಜಾಗೆ ಕರೆ ಮಾಡಿ ಮಾತನಾಡಿರುವ ಹರಿಪ್ರಿಯಾ, ಆ ಸಂಭಾಷಣೆಯನ್ನು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.
ನಾನು ನನ್ನ ಫೋನಿಗೆ ಯಾವುದೇ ಅಂಜನೇಯನ ಫೋಟೋ ಬಂದ್ರೆ ಅದನ್ನು ಧ್ರುವಗೆ ಕಳುಹಿಸುತ್ತೇನೆ. ಹಾಗೇ ಇತ್ತೀಚೆಗೆ ಧ್ರುವಗೆ ಒಂದು ಅಂಜನೇಯನ ಫೋಟೋ ಕಳುಹಿಸಿದೆ. ಆಗ ಅವರು ಥ್ಯಾಂಕ್ಸ್ ರೀ ಎಂದು ರಿಪ್ಲೆ ಮಾಡಿದರು. ಅವರು ರೀ ಎಂದು ರೇಗಿಸುತ್ತಾರೆ ಎಂದು ಹರಿಪ್ರಿಯಾ ಹೇಳಿದ್ದಾರೆ. ಧ್ರುವ ರೀ ಎಂದು ಯಾಕೆ ರೇಗಿಸುತ್ತಾರೆ ಎಂದು ಹೇಳಿರುವ ಹರಿಪ್ರಿಯಾ, ಒಂದು ದಿನ ಶೂಟಿಂಗ್‌ನಲ್ಲಿ ನಾವಿಬ್ಬರೂ ಫೋಟೋಶೂಟ್‌ಗೆ ಹೋಗಬೇಕಿತ್ತು.
ನಾನು ಫೋನಿನಲ್ಲಿ ಬ್ಯುಸಿ ಇದ್ದೇ ಫೋಟೋಗ್ರಾಫರ್ ಧ್ರುವ ಸರ್ಜಾ ಅವರು ಬಂದ ಮೇಲೆ ಅವರನ್ನು ಕರೆದುಕೊಂಡು ಬನ್ನಿ ಎಂದು ಹೇಳಿ ಹೋದರು. ನಂತರ ಬಂದ ಧ್ರುವಗೆ ನಾನು ಫೋನ್ ನೋಡಿಕೊಂಡೇ ಫೋಟೋಶೂಟ್‌ಗೆ ಹೋಗಬೇಕಂತೆ ಬನ್ರಿ ಎಂದೆ, ಆಗಿನಿಂದ ಅವರು ನನ್ನನ್ನು ರೀ ಎಂದು ರೇಗಿಸುತ್ತಾರೆ ಎಂದು ಹರಿಪ್ರಿಯ ತಿಳಿಸಿದ್ದಾರೆ. ನನಗೆ ಜಿರಳೆ ಕಂಡರೆ ಭಯ ಹಾಗೇ ಧ್ರುವ ಅವರಿಗೆ ಎತ್ತರ ಜಾಗ ಎಂದರೆ ಭಯಪಡುತ್ತಾರೆ ಎಂದು ಹೇಳಿರುವ ಹರಿಪ್ರಿಯಾ,
ನಾವು ಭರ್ಜರಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ಆ ಸಿನಿಮಾದ ಹಾಡಿನ ಶೂಟಿಂಗ್ ಮಾಡಲು ನಾವು ಸ್ಲೊವೆನಿಯಾಗೆ ಹೋಗಿದ್ದೇವು. ಅಲ್ಲಿ ಎತ್ತರ ಪ್ರದೇಶದ ತುದಿಯಲ್ಲಿ ನಿಂತು ನಟಿಸಬೇಕಿತ್ತು. ಆಗ ಧ್ರುವ ಅವರು ಭಯದಿಂದ ನಡುಗುತ್ತಿದ್ದರು ಎಂದು ಹರಿಪ್ರಿಯ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.