![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Dec 2, 2023, 11:57 PM IST
ಚೆನ್ನೈ: ಸ್ನೇಹಿತೆಯನ್ನು ಹತ್ಯೆ ಮಾಡಿ, ಮೃತದೇಹದ ದೃಶ್ಯವನ್ನು ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿಕೊಂಡ ಕಿಡಿಗೇಡಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಕೃತ್ಯವೆಸಗಿದಾತನನ್ನು ಆಶಿಕ್ ಎಂದು ಗುರುತಿಸ ಲಾಗಿದೆ. ಅಸುನೀಗಿದಾಕೆ ಕಾಲೇಜೊಂದರಲ್ಲಿ ನರ್ಸಿಂಗ್ ಅಧ್ಯಯನ ಮಾಡುತ್ತಿದ್ದಳು. ಐದು ವರ್ಷಗಳಿಂದ ಅವರಿಬ್ಬರು ಸ್ನೇಹಿತರಾಗಿದ್ದರು. ಮೂರು ದಿನಗಳಿಂದ ಯುವತಿ ತರಗತಿಗೆ ಹಾಜರಾಗದೇ ಇದ್ದದ್ದು ಆಕೆಯ ಗೆಳತಿಯರಲ್ಲಿ ಸಂಶಯಕ್ಕೆ ಕಾರಣವಾಯಿತು. ಈ ಬಗ್ಗೆ ಆಶಿಕ್ ಬಳಿ ವಿಚಾರಿಸಿದ್ದರು.
ಒಂದು ಹಂತದಲ್ಲಿ ಆಶಿಕ್‌ನ ವಾಟ್ಸ್‌ಆ್ಯಪ್ ಸ್ಟೇಟಸ್ ಕಂಡಾಗ ಗೆಳತಿಯರು ಹೌಹಾರಿದರು. ಅದರ ಆಧಾರದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಚೆನ್ನೈಯ ಹೊಟೇಲ್‌ನಲ್ಲಿ ರೂಂನಲ್ಲಿ ಇದ್ದ ವೇಳೆ ಕೊಂದ ಬಗ್ಗೆಯೂ ಆಶಿಕ್ ವಿವರಿಸಿದ್ದಾನೆ. ಪೊಲೀಸರು ಹೇಳುವಂತೆ ಆಶಿಕ್‌ಗೆ ಮತ್ತೂಬ್ಬಳ ಜತೆಗೆ ಸಂಬಂಧವಿತ್ತು. ಈ ವಿಚಾರಕ್ಕೆ ಜಗಳ ಉಂಟಾಗಿ ಟಿಶರ್ಟ್‌ನಿಂದ ಕತ್ತು ಹಿಸುಕಿ ಯುವತಿಯನ್ನು ಕೊಂದೆ ಎಂದು ತಪ್ಪೊಪ್ಪಿಕೊಂಡಿ ದ್ದಾನೆ. ಅಸುನೀಗಿದ ಯುವತಿ ಜತೆಗಿನ ಸಂಬಂಧದಿಂದ ಮಗುವೊಂದು ಜನಿಸಿತ್ತು ಮತ್ತು ಅದನ್ನು ದತ್ತು ಸ್ವೀಕಾರಕ್ಕೆ ನೀಡಿದ್ದರು ಎನ್ನಲಾಗಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.