ಕೋವಿಡ್ ಗಂಡಾಂತರ: ವಾಂತಿಯ ಕುರಿತಾದ ಭಯಕ್ಕಿಂತ ಉಗುಳಿನ ಭಯ ದೊಡ್ಡದಾದಾಗ…!

ಲಘು ಬರಹ

Team Udayavani, Apr 21, 2020, 11:04 PM IST

ಕೋವಿಡ್ ಗಂಡಾಂತರ: ವಾಂತಿಯ ಕುರಿತಾದ ಭಯಕ್ಕಿಂತ ಉಗುಳಿನ ಭಯ ದೊಡ್ಡದಾದಾಗ…!

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ವಿಶ್ವವನ್ನೇ ಕಂಗೆಡಿಸಿರುವ ಮಹಾಮಾರಿ ಕೋವಿಡ್ 19 ವೈರಸ್ ತನ್ನಲ್ಲಿರುವ ತೀವ್ರ ವ್ಯಾಪಕ ಗುಣಗಳಿಂದ ಜನರಲ್ಲೆಲ್ಲಾ ಒಂದು ಅವ್ಯಕ್ತ ಭಯವನ್ನು ಮೂಡಿಸಿದೆ. ಮೊದಲೆಲ್ಲಾ ಎಲ್ಲಿ ಬೇಕೆಂದರಲ್ಲಿ ಕೆಮ್ಮುತ್ತಿದ್ದ, ಸೀನುತ್ತಿದ್ದ ಮತ್ತು ಉಗುಳುತ್ತಿದ್ದವರೆಲ್ಲಾ ಇಂದು ಬಾಯಿ ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿಯನ್ನು ಈ ಅಗೋಚರ ವೈರಾಣು ತಂದೊಡ್ಡಿದೆ. ಇದೇ ರೀತಿಯಲ್ಲಿ ಇತ್ತೀಚೆಗೆ ಉಡುಪಿಯ ಆಸ್ಪತ್ರೆಯಲ್ಲಿ ತಾವು ಕಂಡ ಘಟನೆಯೊಂದನ್ನು ಮನೋಜ್ ಕಡಬ ಅವರು ಸ್ವಾರಸ್ಯಕರವಾಗಿ ಇಲ್ಲಿ ಅಕ್ಷರ ರೂಪಕ್ಕಿಳಿಸಿದ್ದಾರೆ, ಓದಿಕೊಳ್ಳಿ…

‘ಇತ್ತೀಚೆಗೆ ಉಡುಪಿಯ ಆಸ್ಪತ್ರೆಯೊಂದಕ್ಕೆ ಅನಿವಾರ್ಯ ಕಾರಣಗಳಿಂದ ಭೇಟಿ ಕೊಡಬೇಕಾದ ಪರಿಸ್ಥಿತಿ ಒದಗಿಬಂದಿತ್ತು. ಆಸ್ಪತ್ರೆಯ ಲಿಫ್ಟಿನ ಬಳಿ ನಿಂತಿದ್ದ ಸಂದರ್ಭದಲ್ಲಿ ಅಲ್ಲಿ ಯಾರೋ ಉಗುಳಿದ್ದು ಕಂಡು ಬಂತು. ಕೂಡಲೇ ಲಿಫ್ಟ್ ಆಪರೇಟರ್ ಪಕ್ಕದಲ್ಲಿದ್ದ ವಾರ್ಡಿನ ದಾದಿಯನ್ನು ಕರೆದರು, ಅವರು ತಮ್ಮ ಸೂಪರ್ ವೈಸರನ್ನು ಕರೆದರು, ಅವರು ಸೆಕ್ಯೂರಿಟಿ ಸೂಪರ್ ವೈಸರನ್ನು ಕರೆದರು, ಅವರು ಆಸ್ಪತ್ರೆಯ ಮೆನೇಜರನ್ನು ಕರೆದರು, ಅವರು ಆಸ್ಪತ್ರೆಯ ನಿರ್ದೇಶಕರನ್ನು ಕರೆದರು. ಅಷ್ಟೊತ್ತಿಗಾಗಲೇ ಸಂಬಂಧಪಟ್ಟವರೆಲ್ಲರೂ ಅಲ್ಲಿಗೆ ಧಾವಿಸಿ ಬಂದಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಂಡೇ ಉಗುಳಿದ ವ್ಯಕ್ತಿ ಯಾರಿರಬಹುದು ಎಂದು ಅತ್ತಿತ್ತ ಬಹಳಷ್ಟು ಹುಡುಕಾಡಿದರು, ಆದರೆ ನೋ ಯೂಸ್.

ಕಡೆಗೆ ವೈದ್ಯಕೀಯ ನಿರ್ದೇಶಕರು ಮೂರು ಕೈಗವಸು, ಎರಡು ಮಾಸ್ಕ್, ಉದ್ದದ ಒರಸುವ ಕೋಲು, ಬಳಸಿ ಎಸೆಯಲು ಹಳೆಯ ಬಕೆಟ್, ಅದರಲ್ಲಿ, ವಿಶೇಷವಾದ ಕ್ರಿಮಿನಾಶಕ ಔಷಧಿ ಸಿಂಪಡಿಸಿದ ನೀರು ಸೇರಿದಂತೆ ಇನ್ನೇನೋ ಮುಂಜಾಗೃತಾ ಕ್ರಮಗಳನ್ನು ಸ್ವಚ್ಛತಾ ಸಿಬ್ಬಂದಿಗೆ ವಿವರಿಸಿ, ಆ ಎಂಜಲು ಬಿದ್ದ ಸ್ಥಳವನ್ನು ಸ್ವಚ್ಛ ಮಾಡುವಂತೆ ಸೂಚಿಸಿದರು. ಹೀಗೆ ಸ್ವಲ್ಪ ಸಮಯದ ಬಳಿಕ ವಾತಾವರಣ ತಿಳಿಯಾಯ್ತು.

ಇದಾದ ಅರ್ಧ ಗಂಟೆಯ ಬಳಿದ ಅದೇ ಜಾಗದ ಪಕ್ಕದಲ್ಲಿ ಇನ್ನೊಂದು ಘಟನೆ ನಡೆಯಿತು. ವಾರ್ಡಿನೊಳಗಿಂದ ಗಾಲಿ ಕುರ್ಚಿಯ ಮೇಲೆ ರೋಗಿಯೊಬ್ಬರನ್ನು ಕರೆದುಕೊಂಡು ಬಂದರು. ಆ ರೋಗಿಗೆ ಲಿಫ್ಟ್ ಬಳಿ ಬಂದಾಗ ಇದ್ದಕ್ಕಿದ್ದಂತೆ ವಾಂತಿ ಮಾಡಿಕೊಳ್ಳಲಾರಂಭಿಸಿದರು. ತಕ್ಷಣ ರೋಗಿಯ ಜೊತೆಗಿದ್ದ ನರ್ಸ್ ಒಬ್ಬರು ಅವರಿಗೆ ಮಾಡಬೇಕಾಗಿದ್ದ ಆರೈಕೆಯನ್ನು ಮಾಡಿ, ಬಳಿಕ ‘ಅಕ್ಕಾ ಕ್ಲೀನ್ ಮಾಡಿ’ ಎಂದು ಆಯಾ ಒಬ್ಬರನ್ನು ಕರೆದು ಐದೇ ನಿಮಿಷದಲ್ಲಿ ಅದನ್ನೆಲ್ಲಾ ಕ್ಲೀನ್ ಮಾಡಿಸಿದರು.

ಈಗ ನನ್ನಲ್ಲಿ ಕಾಡಿದ ದೊಡ್ಡ ಪ್ರಶ್ನೆ ‘ಉಗುಳಿನ ಕುರಿತಾದ ಭಯ ದೊಡ್ಡದೋ ಅಥವಾ ವಾಂತಿಯ ಕುರಿತಾದ ಭಯದ ತೀವ್ರತೆಯೋ?’ ಉತ್ತರ ಬಹಳ ಸುಲಭ…

ಈ ಪ್ರಕರಣದಲ್ಲಿ ವಾಂತಿ ಮಾಡಿದವರು ಯಾರು ಮತ್ತು ಅವರಿಗಿದ್ದ ಕಾಯಿಲೆ ಏನೆಂದು ಅಲ್ಲಿದ್ದವರಿಗೆ ತಿಳಿದಿದ್ದ ಕಾರಣ ಇಲ್ಲಿ ವಾಂತಿಯ ಕುರಿತಾಗಿದ್ದ ಭಯ ಸಣ್ಣದೇ. ಆದರೆ, ಕೋವಿಡ್ ಎಂಬ ಮಹಾಮಾರಿ ವ್ಯಾಪಿಸಿರುವ ಈ ಸಂದರ್ಭದಲ್ಲಿ ಉಗುಳಿದ ವ್ಯಕ್ತಿ ಯಾರು, ಅಲ್ಲೇಕೆ ಉಗುಳಿದರು, ಆ ವ್ಯಕ್ತಿಗೆ ಏನು ಸಮಸ್ಯೆ ಇದ್ದಿರಬಹುದು ಎಂಬೆಲ್ಲಾ ವಿಷಯ ಇಲ್ಲಿ ಅಗೋಚರವೇ ಆಗಿರುವ ಕಾರಣ ರೋಗಿ ಮಾಡಿದ ವಾಂತಿಯ ಭಯಕ್ಕಿಂತ ಅಪರಿಚಿತ ವ್ಯಕ್ತಿಯ ಉಗುಳಿನ ಬಗ್ಗೆ ಇರುವ ಭಯ ದೊಡ್ಡದಾಗಿ ಪರಿಣಮಿಸಿತು ಎಂಬುದು ನಾನು ಆ ಕ್ಷಣದಲ್ಲಿ ಕಂಡುಕೊಂಡ ಸತ್ಯ.’

ಹಾಗಾಗಿ ಕಂಡಕಂಡಲ್ಲಿ ಉಗುಳುವ ಮೂಲಕ ವೈರಸ್ ಕಾಟದ ಈ ಸಂದರ್ಭದಲ್ಲಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಯಾಗಲು ನಾವ್ಯಾರು ಕಾರಣರಾಗದಿರೋಣ ಎಂಬ ಕಾಳಜಿಯಷ್ಟೇ ನನ್ನದು.

– ಮನೋಜ್ ಕಡಬ

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.