Mundagod: ಅ.ಪ್ರ. ಮುಖ್ಯಮಂತ್ರಿ ಪೇಮಾ ಖಂಡು ಅವರನ್ನು ಸ್ವಾಗತಿಸಿದ ಟಿಬೆಟಿಯನ್ನರು
Team Udayavani, Nov 14, 2023, 3:59 PM IST
ಮುಂಡಗೋಡ: ತಾಲೂಕಿನ ಟಿಬೆಟಿಯನ್ ಕ್ಯಾಂಪಿಗೆ ನ.14ರ ಮಂಗಳವಾರ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಅವರನ್ನು ಟಿಬೆಟಿಯನ್ನರು ಅದ್ದೂರಿಯಾಗಿ ಬರಮಾಡಿಕೊಂಡರು.
ಹುಬ್ಬಳ್ಳಿಯಿಂದ ತಡಸ ಮಾರ್ಗವಾಗಿ ಮುಂಡಗೋಡದಿಂದ ಕ್ಯಾಂಪ್ ನ. 1 ಗಾದೇನ ಝಾಂಗ್ಸಗೆ ಬಂದರು. ಮುಖ್ಯಮಂತ್ರಿ ಅವರನ್ನು ಟಿಬೆಟಿಯನ್ನರು ಸಂಪ್ರಾದಯಿಕ ಉಡುಗೆ ತೊಟ್ಟು ಸರತಿಸಾಲಿನಲ್ಲಿ ನಿಂತು ಅದ್ದೂರಿಯಾಗಿ ಬರಮಾಡಿಕೊಂಡರು.
ಇದಕ್ಕೂ ಮೊದಲು ತಾಲೂಕಿನ ಗಡಿ ವಡಗಟ್ಟಾದಲ್ಲಿ ಜಿಲ್ಲಾಡಳಿತ ವತಿಯಿಂದ ಶಿರಶಿ ಎಸಿ ದೇವರಾಜ ಡಿ ಮತ್ತು ತಾಲೂಕು ತಹಶೀಲ್ದಾರ ಶಂಕರ ಗೌಡಿ ಅವರು ಹೂ ಗೂಚ್ಛಾ ನೀಡಿ ತಾಲೂಕಿಗೆ ಬರಮಾಡಿಕೊಂಡರು.
ಮುಖ್ಯಮಂತ್ರಿ ಪೇಮಾ ಖಂಡು ಮಂಗಳವಾರದಿಂದ ಗುರುವಾರದವರೆಗೆ ಟಿಬೆಟಿಯನ್ ವಿವಿಧ ಕ್ಯಾಂಪ್ ಗಳಿಗೆ ಭೇಟಿ ನೀಡಿ ಟಿಬೆಟಿಯನ್ ರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಪೊಲೀಸ್ ಬಿಗಿ ಭದ್ರತೆ: ಇಬ್ಬರು ಡಿವೈಎಸ್ಪಿ, 8 ಜನ ಸಿಪಿಐ,14 ಜನ ಪಿಎಸ್ಐ, 27ಜನ ಎಎಸೈ,147 ಕಾನ್ ಸ್ಟೇಬಲ್, 12 ಮಹಿಳಾ ಸಿಬ್ಬಂದಿಗಳು,1 ಕೆಎಸ್ಆರ್ ಪಿ ಮತ್ತು 2 ಡಿಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ankola: 10 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ತಡರಾತ್ರಿ ಸಾರ್ವಜನಿಕ ಸ್ಥಳಗಳಲ್ಲಿ ಹರಟೆ ಹೊಡೆಯುತ್ತಿದ್ದ ಯುವಕರ ಚಳಿ ಬಿಡಿಸಿದ ಪೊಲೀಸರು
Dandeli: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದವರಿಗೆ ಖಡಕ್ ಎಚ್ಚರಿಕೆ ನೀಡಿದ ಡಿವೈಎಸ್ಪಿ
Yakshagana; ಯಕ್ಷಗಾನದಲ್ಲಿ ಮೊದಲ ಬಾರಿ ಮಂಥರೆಯಾಗಿ ಮಿಂಚಿದ ಖ್ಯಾತ ನಟಿ ಉಮಾಶ್ರೀ
ಮೊದಲ ಬಾರಿಗೆ ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಲಿರುವ ನಟಿ ಉಮಾಶ್ರೀ