ಆ್ಯಶಸ್ ಸರಣಿ: ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಮಳೆ
Team Udayavani, Jan 6, 2022, 5:10 AM IST
ಸಿಡ್ನಿ: ಆ್ಯಶಸ್ ಸರಣಿಯ ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಮಳೆ ಯಿಂದ ಅಡಚಣೆಯಾಗಿದೆ. ಮೊದಲ ದಿನ ಕೇವಲ 46.5 ಓವರ್‌ಗಳ ಆಟ ನಡೆದಿದ್ದು, ಆಸ್ಟ್ರೇಲಿಯ 3 ವಿಕೆಟಿಗೆ 126 ರನ್ ಗಳಿಸಿದೆ.
ಡೇವಿಡ್ ವಾರ್ನರ್ 30, ಮಾರ್ಕಸ್ ಹ್ಯಾರಿಸ್ 38 ಮತ್ತು ಮಾರ್ನಸ್ ಲಬುಶೇನ್ 28 ರನ್ ಮಾಡಿ ಔಟಾಗಿದ್ದಾರೆ. ಕ್ರೀಸಿನಲ್ಲಿರುವವರು ಸ್ಟೀವನ್ ಸ್ಮಿತ್ (6) ಮತ್ತು ಉಸ್ಮಾನ್ ಖ್ವಾಜಾ (4). ಇಂಗ್ಲೆಂಡ್ 3 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರೂ ಒಟ್ಟಾರೆ ಬೌಲಿಂಗ್ ಕಳಪೆಯಾಗಿತ್ತು. 20 ರನ್ ಎಕ್ಸ್‌ಟ್ರಾ ರೂಪದಲ್ಲೇ ಬಂದಿದೆ. ಇದರಲ್ಲಿ 12 ವೈಡ್, 4 ನೋಬಾಲ್ ಸೇರಿವೆ. ಆ್ಯಂಡರ್ಸನ್, ಬ್ರಾಡ್ ಮತ್ತು ವುಡ್ ಯಶಸ್ವಿ ಬೌಲರ್.
ಸರಣಿಯ ಮೊದಲ ಮೂರೂ ಟೆಸ್ಟ್ ಪಂದ್ಯಗಳನ್ನು ಗೆದ್ದ ಆಸ್ಟ್ರೇಲಿಯ ಈಗಾಗಲೇ ಆ್ಯಶಸ್ ವಶಪಡಿಸಿಕೊಂಡಿದ್ದು, ಉಳಿದೆರಡು ಟೆಸ್ಟ್ ಇಂಗ್ಲೆಂಡ್ ಪಾಲಿಗೆ ಪ್ರತಿಷ್ಠೆಯ ಪಂದ್ಯಗಳಾಗಿವೆ.
ಇದನ್ನೂ ಓದಿ:ಜೊಹಾನ್ಸ್‌ಬರ್ಗ್ ಟೆಸ್ಟ್: ಸರಣಿ ಇತಿಹಾಸವೋ? ಸಮಬಲವೋ?
ಎಕ್ಸ್‌ಟ್ರಾ ಇನ್ನಿಂಗ್ಸ್
-1992ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪುನರ್ ಪ್ರವೇಶ ಪಡೆದ ಬಳಿಕ ದಕ್ಷಿಣ ಆಫ್ರಿಕಾ ಒಮ್ಮೆಯಷ್ಟೇ 240 ಹಾಗೂ ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಬೆನ್ನಟ್ಟಿ ಗೆದ್ದಿದೆ. ಅದು ಆಸ್ಟ್ರೇಲಿಯ ಎದುರಿನ 2001-02ರ ಡರ್ಬನ್ ಟೆಸ್ಟ್ ಪಂದ್ಯವಾಗಿದ್ದು, ದಕ್ಷಿಣ ಆಫ್ರಿಕಾ 335 ರನ್ ಬಾರಿಸಿ ಜಯ ಸಾಧಿಸಿತ್ತು.
– ಭಾರತದ ವಿರುದ್ಧ 4ನೇ ಇನ್ನಿಂಗ್ಸ್‌ನಲ್ಲಿ ಕೇವಲ 2 ಸಲ 240 ಪ್ಲಸ್ ಮೊತ್ತವನ್ನು ಬೆನ್ನಟ್ಟಿ ಗೆದ್ದ ದಾಖಲೆ ನಿರ್ಮಾಣವಾಗಿದೆ. 1977-78ರ ಪರ್ತ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ 339 ರನ್; 1987-88ರ ಹೊಸದಿಲ್ಲಿ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ 276 ರನ್ ಬಾರಿಸಿ ಗೆದ್ದಿತ್ತು.
– ಜೊಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದ 4ನೇ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ರನ್ ಬಾರಿಸಿ ಗೆದ್ದ ದಾಖಲೆ ಆಸ್ಟ್ರೇಲಿಯದ್ದಾಗಿದೆ. ಅದು 2011-12ರಲ್ಲಿ 310 ರನ್ ಹಾಗೂ 2005-06ರಲ್ಲಿ 292 ರನ್ ಬಾರಿಸಿ ಜಯ ಸಾಧಿಸಿತ್ತು.
-ಜೊಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದ 4ನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಅತ್ಯುತ್ತಮ ಚೇಸಿಂಗ್ ದಾಖಲೆ 217 ರನ್. ಇದು 2005-06ರ ನ್ಯೂಜಿಲ್ಯಾಂಡ್ ಎದುರಿನ ಪಂದ್ಯವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.