Asiad: ಏಷ್ಯಾಡ್‌ನಿಂದ ಭಾರತದ ಕ್ರೀಡಾಚಹರೆ ಬದಲಾಗುವ ಭರವಸೆ


Team Udayavani, Sep 23, 2023, 12:56 AM IST

asiad india

19ನೇ ಏಷ್ಯನ್‌ ಗೇಮ್ಸ್‌ ಶನಿವಾರ ಆರಂಭ. ಈಗಾಗಲೇ ಹಲವು ಸ್ಪರ್ಧೆಗಳು ನಡೆಯುತ್ತಿವೆ. ರವಿವಾರದಿಂದಲೇ ಭಾರತದ ಚಿನ್ನದ ಸದ್ದು ಕೇಳಿ ಬರಬಹುದು. ಭಾರತ ವುಶು ತಂಡಕ್ಕೆ ಚೀನ ವೀಸಾ ನಿರಾಕರಿಸಿದ ಸುದ್ದಿಯೂ ಬಂದಿದೆ. ಅದಕ್ಕೆ ಪ್ರತಿಯಾಗಿ ಭಾರತದ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಚೀನಕ್ಕೆ ಹೋಗುವುದಿಲ್ಲ ಅಂದಿದ್ದೂ ಆಗಿದೆ. ಚೀನ ದೇಶಕ್ಕೆ ಭಾರತದೊಂದಿಗೆ ತಕರಾರು ಮಾಡಿಕೊಳ್ಳದಿದ್ದರೆ ಸಮಾಧಾನ ಇರುವುದಿಲ್ಲ ಎನ್ನುವುದು ಇನ್ನೊಮ್ಮೆ ಸಾಬೀತಾಗಿದೆ. ಇವನ್ನೆಲ್ಲ ಬದಿಗಿಟ್ಟು ಕ್ರೀಡಾ ದೃಷ್ಟಿಕೋನದಿಂದ ನೋಡುವುದಾದರೆ ಭಾರತ ಏಷ್ಯಾಡ್‌ನ‌ಲ್ಲಿ ಬಲಿಷ್ಠ ತಂಡಗಳಲ್ಲೊಂದು. ಆದರೆ ಭಾರತದ ಜನಸಂಖ್ಯೆ ಮತ್ತು ಗೆಲ್ಲುವ ಪದಕಗಳಿಗೆ ಹೋಲಿಸಿದರೆ ಅಜಗಜಾಂತರ.

ಇದುವರೆಗಿನ ಅಷ್ಟೂ ಏಷ್ಯಾಡ್‌ಗಳನ್ನು ಪರಿಗಣಿಸಿದರೆ ಭಾರತ ಸಾರ್ವಕಾಲಿಕವಾಗಿ ಪದಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. 155 ಚಿನ್ನ, 201 ಬೆಳ್ಳಿ, 316 ಕಂಚು ಸೇರಿ ಒಟ್ಟು 672 ಪದಕಗಳನ್ನು ಗೆದ್ದಿದೆ. ಪದಕ ಸಾಧನೆಯನ್ನೇ ಗಣಿಸುವುದಾದರೆ ಚೀನ, ಜಪಾನ್‌, ದ.ಕೊರಿಯಾಗಳು ಕ್ರಮವಾಗಿ 3,187, 3,054, 2,235 ಪದಕಗಳನ್ನು ಗೆದ್ದು ಸಾರ್ವ ಕಾಲಿಕವಾಗಿ ಅಗ್ರ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಈ ವಿಚಾರದಲ್ಲಿ ಭಾರತ ಭಾರೀ ಪ್ರಮಾಣದಲ್ಲಿ ಹಿಂದುಳಿದಿದೆ. ಇವೆಲ್ಲ ಈ ಹಿಂದಿನ 18 ಏಷ್ಯಾಡ್‌ಗಳಲ್ಲಿನ ಭಾರತದ ಸಾಧನೆ. ಆದರೆ ಈಗ ಭಾರತ ಬದಲಾಗಿದೆ. ಎಲ್ಲ ವಿಭಾಗಗಳಲ್ಲೂ ಅದ್ಭುತ ಸಾಧನೆಗಳೊಂದಿಗೆ ಮುನ್ನುಗ್ಗುತ್ತಿದೆ. ಕ್ರೀಡೆಯಲ್ಲೂ ತನ್ನದೇ ಆದ ಛಾಪು ಮೂಡಿಸಲು ಭರದ ಸಿದ್ಧತೆ ಮಾಡಿಕೊಂಡಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶದ ಪದಕ ಗಳಿಕೆಯಲ್ಲಿ ಗಣನೀಯ ಸಾಧನೆಯಾಗಿದ್ದೇ ಈ ಆಶಾವಾದಕ್ಕೆ ಕಾರಣ.

ಹಲವು ದಶಕಗಳ ಬಳಿಕ ಭಾರತ ಪುರುಷರ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿತ್ತು. ಮೊದಲ ಬಾರಿಗೆ ಚಿನ್ನ, ಬೆಳ್ಳಿ, ಕಂಚು ಮೂರೂ ವಿಭಾಗಗಳಲ್ಲಿ ಪದಕ ಬಂದಿತ್ತು. ಒಲಿಂಪಿಕ್ಸ್‌ನಂತಹ ಜಗತ್ತಿನ ಬಲಿಷ್ಠ ದೇಶಗಳು ಸ್ಪರ್ಧಿಸುವ ಕೂಟದಲ್ಲೇ ಭಾರತ ಸುಧಾರಿತ ಪ್ರದರ್ಶನ ನೀಡಿರಬೇಕಾದರೆ, ಏಷ್ಯನ್‌ ಗೇಮ್ಸ್‌ನಲ್ಲಿ ಏಕೆ ಸಾಧ್ಯವಿಲ್ಲ?

ಸಾಧ್ಯವಿದೆ ಎಂಬ ಭರವಸೆಯಲ್ಲೇ ದೇಶದ ಕ್ರೀಡಾಸಂಸ್ಥೆಗಳು, ಕ್ರೀಡಾ ಸಚಿವಾಲಯಗಳು ಆ್ಯತ್ಲೀಟ್‌ಗಳ ತರಬೇತಿಗೆ ಹಣವನ್ನು ವೆಚ್ಚ ಮಾಡು ತ್ತಿವೆ, ಪರಿಶ್ರಮವನ್ನೂ ಹಾಕುತ್ತಿವೆ. ಇತ್ತೀಚೆಗಿನ ವರ್ಷಗಳಲ್ಲಿ ಭಾರತದ ಕ್ರೀಡಾಜಗತ್ತಿನಲ್ಲಿ ಕಂಡುಬಂದ ಆಶಾದಾಯಕ ಬೆಳವಣಿಗೆಯಿದು. ಪದಕ ಗೆದ್ದ ಮೇಲೆ ಕೋಟಿಗಟ್ಟಲೇ ಹಣ ಕೊಡುವ ಹಳೆ ಚಾಳಿಯ ಬದಲು, ಅದಕ್ಕಿಂತ ಮುನ್ನವೇ ಗುಣಮಟ್ಟದ ತರಬೇತಿಗೆ ಹಣ ನೀಡುವ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಮ್‌ ವ್ಯವಸ್ಥೆ ಜಾರಿಯಾಗಿದೆ.

ಕೇಂದ್ರ ಸರಕಾರ ಆರಂಭಿಸಿದ ಈ ಕ್ರಮಕ್ಕೆ ರಾಜ್ಯ ಸರಕಾರಗಳೂ ಬೆಂಬಲ ನೀಡಿವೆ. ಈ ಬಾರಿ ಪದಕ ಗೆಲ್ಲುವ ಬಲವಾದ ಭರವಸೆಯನ್ನು ಹಲವು ಸ್ಪರ್ಧಿಗಳು, ತಂಡಗಳು ಮೂಡಿಸಿವೆ. ಕ್ರಿಕೆಟ್‌, ಹಾಕಿ, ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನ ಗೆಲ್ಲುವುದು ಕಷ್ಟವೇ ಅಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಇನ್ನು ಫ‌ುಟ್‌ಬಾಲ್‌ನಲ್ಲಿ ಭಾರತ ಏಷ್ಯಾದ ಮಟ್ಟಿಗೆ ಬಲಿಷ್ಠ ತಂಡವೇ ಆದರೂ, ಈ ಕೂಟಕ್ಕೆ ಪೂರ್ಣ ಆಸಕ್ತಿಯಿಂದ ಭಾರತ ಸಿದ್ಧವಾಗಿಲ್ಲ ಎಂಬ ಸಂದೇಶವಂತೂ ಸ್ಪಷ್ಟವಾಗಿ ಸಿಕ್ಕಿದೆ. ಅದೇನೇ ಇದ್ದರೂ ಈ ಬಾರಿಯ ಏಷ್ಯಾಡ್‌ನಿಂದ ಭಾರತದ ಕ್ರೀಡಾ ಚಹರೆ ಬದಲಾಗಲಿದೆ ಎಂಬ ಬಲವಾದ ಭರವಸೆ ಹುಟ್ಟಿದೆ. ಭಾರತದ ಸ್ಪರ್ಧಿಗಳಿಗೆ ಶುಭಾಶಯಗಳು.

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.