ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಪಾಕಿಸ್ಥಾನವನ್ನು ಕೆಡವಿ ಕಂಚು ಗೆದ್ದ ಭಾರತ
Team Udayavani, Dec 23, 2021, 5:20 AM IST
ಢಾಕಾ: ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಬದ್ಧ ಎದುರಾಳಿ ಪಾಕಿಸ್ಥಾನವನ್ನು 4-3 ಗೋಲುಗಳಿಂದ ಕೆಡವಿದ ಭಾರತ ಕಂಚಿನ ಪದಕ ಜಯಿಸಿದೆ. ಈ ಎರಡೂ ತಂಡಗಳು ಕಳೆದ ಸಲದ ಜಂಟಿ ಚಾಂಪಿಯನ್‌ಗಳಾಗಿದ್ದವು.
ಭಾರತ, ಪಾಕಿಸ್ಥಾನಗಳೆರಡೂ ಸೆಮಿಫೈನಲ್‌ನಲ್ಲಿ ಸೋತು ಬುಧವಾರ 3ನೇ ಸ್ಥಾನದ ಸ್ಪರ್ಧೆಗೆ ಇಳಿದಿದ್ದವು. ಪಂದ್ಯದ್ದುಕ್ಕೂ ಸಮಬಲದ ಹೋರಾಟ ಕಂಡುಬಂತು. ಪೆನಾಲ್ಟಿ ಕಾರ್ನರ್‌ಗಳ ಪ್ರವಾಹವೇ ಹರಿದು ಬಂತು. ಅದೃಷ್ಟ ಭಾರತದ ಕೋಟೆಯಲ್ಲಿ ಅವಿತಿತ್ತು. ಇದು ಈ ಕೂಟದಲ್ಲಿ ಪಾಕ್ ಎದುರು ಮನ್‌ಪ್ರೀತ್ ಸಿಂಗ್ ಪಡೆ ಸಾಧಿಸಿದ 2ನೇ ಗೆಲುವು. ಲೀಗ್ ಹಂತದಲ್ಲಿ ಭಾರತ 3-1 ಅಂತರದಿಂದ ಗೆದ್ದು ಬಂದಿತ್ತು.
ಮೊದಲ ನಿಮಿಷದಲ್ಲೇ ಗೋಲ್
ಭಾರತ ಮೊದಲ ನಿಮಿಷದಲ್ಲೇ ಗೋಲು ಬಾರಿಸಿ ಮುನ್ನಡೆ ಗಳಿಸಿತು. ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಖಾತೆ ತೆರೆದರು. 10ನೇ ನಿಮಿಷದಲ್ಲಿ ಪಾಕಿಸ್ಥಾನ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಅಫ್ರಾಜ್ ಅವರಿಂದ ಈ ಗೋಲು ದಾಖಲಾಯಿತು. ಅರ್ಧ ಹಾದಿ ಕ್ರಮಿಸುವಾಗ ಇತ್ತಂಡಗಳು 1-1 ಸಮಬಲದಲ್ಲಿದ್ದವು.
3ನೇ ಕ್ವಾರ್ಟರ್‌ನ 3ನೇ ನಿಮಿಷದಲ್ಲಿ ಅಬ್ದುಲ್ ರಾಣಾ ಸಿಡಿಸಿದ ಗೋಲಿನಿಂದ ಪಾಕಿಸ್ಥಾನ ಮುನ್ನಡೆ ಸಾಧಿಸಿತು. ಭಾರತ ಒತ್ತಡಕ್ಕೆ ಸಿಲುಕಿತು. ಈ ಹಂತ ಮುಗಿಯಲು ಕೆಲವೇ ಸೆಕೆಂಡ್‌ಗಳಿರುವಾಗ ಸುಮಿತ್ ಸಿಡಿಸಿದ ಗೋಲಿನಿಂದ ಪಂದ್ಯ ಮತ್ತೆ ಸಮಬಲಕ್ಕೆ ಬಂತು.
ಇದನ್ನೂ ಓದಿ:ಪ್ರೊ ಕಬಡ್ಡಿ: ಬುಲ್ಸ್ ಗೆ ತಿವಿದ ಯು ಮುಂಬಾ
ಅಂತಿಮ ಹಂತದ ಪೈಪೋಟಿ
ಅಂತಿಮ ಕ್ವಾರ್ಟರ್‌ನಲ್ಲಿ ಪೈಪೋಟಿ ತೀವ್ರ ಗೊಂಡಿತು. 53ನೇ ನಿಮಿಷದಲ್ಲಿ ವರುಣ್ ಕುಮಾರ್, 57ನೇ ನಿಮಿಷದಲ್ಲಿ ಆಕಾಶ್‌ದೀಪ್ ಸಿಂಗ್ ಸೇರಿಕೊಂಡು ಭಾರತಕ್ಕೆ 4-2 ಮುನ್ನಡೆ ಕೊಡಿಸುವಲ್ಲಿ ಯಶಸ್ವಿಯಾದರು.
ಮರು ಗಳಿಗೆಯಲ್ಲೇ ಪಾಕ್ ತಿರುಗಿ ಬಿತ್ತು. 57ನೇ ನಿಮಿಷದಲ್ಲೇ ಅಹ್ಮದ್ ನದೀಮ್ 3ನೇ ಗೋಲು ಬಾರಿಸಿದರು. ಉಳಿದ 3 ನಿಮಿಷಗಳನ್ನು ಎಚ್ಚರಿಕೆಯಿಂದ ಕಳೆದ ಭಾರತ ಕಂಚು ಗೆಲ್ಲುವಲ್ಲಿ ಯಶಸ್ವಿಯಾಯಿತು. ಕೊನೆಯ ಕೆಲವು ನಿಮಿಷಗಳಲ್ಲಿ ಭಾರತ ಹತ್ತೇ ಆಟಗಾರರೊಂದಿಗೆ ಹೋರಾಟ ಸಂಘಟಿಸಬೇಕಾಯಿತು. ಹಾರ್ದಿಕ್ ಸಿಂಗ್, ಸುಮಿತ್ ಅವರಿಗೆ ಹಳದಿ ಕಾರ್ಡ್ ನೀಡಲಾಗಿತ್ತು.
ದಕ್ಷಿಣ ಕೊರಿಯಾ ಚಾಂಪಿಯನ್
ಭಾರೀ ಪೈಪೋಟಿಯೊಡ್ಡಿದ ಜಪಾನ್ ತಂಡವನ್ನು ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಮಣಿಸಿದ ದಕ್ಷಿಣ ಕೊರಿಯಾ ನೂತನ ಏಶ್ಯನ್ ಹಾಕಿ ಚಾಂಪಿಯನ್ ಎನಿಸಿತು. ನಿಗದಿತ ವೇಳೆಯಲ್ಲಿ ಇತ್ತಂಡಗಳು 3-3 ಸಮಬಲ ಸಾಧಿಸಿದ್ದವು.
ಭಾರತ, ಪಾಕಿಸ್ಥಾನ ಹೊರತುಪಡಿಸಿ 3ನೇ ತಂಡವೊಂದು ಇಲ್ಲಿ ಚಾಂಪಿಯನ್ ಆಗಿ ಮೂಡಿಬಂದ ಮೊದಲ ನಿದರ್ಶನ ಇದಾಗಿದೆ. ಕೊರಿಯಾ ಫೈನಲ್ ಪ್ರವೇಶಿಸಿದ್ದು ಕೂಡ ಇದೇ ಮೊದಲು. ಜಪಾನ್ 2013ರಲ್ಲಿ ಫೈನಲ್ ಪ್ರವೇಶಿಸಿ ಪಾಕಿಸ್ಥಾನಕ್ಕೆ ಶರಣಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.