ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಸೆಮಿಫೈನಲ್: ಜಪಾನ್ ವಿರುದ್ಧ ಭಾರತವೇ ಫೇವರಿಟ್
ಪಾಕಿಸ್ಥಾನ-ಕೊರಿಯಾ ನಡುವೆ ಮತ್ತೊಂದು ಸೆಮಿಫೈನಲ್
Team Udayavani, Dec 21, 2021, 5:00 AM IST
ಢಾಕಾ: ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಕೂಟದ ಅಂತಿಮ ಲೀಗ್ ಪಂದ್ಯದಲ್ಲಿ ಜಪಾನ್ ವಿರುದ್ಧ ಜಬರ್ದಸ್ತ್ ಪ್ರದರ್ಶನ ನೀಡಿದ ಭಾರತವೀಗ ಮಂಗಳವಾರದ ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧವೇ ಸೆಣಸಾಟಕ್ಕಿಳಿಯಲಿದೆ.
ಮನ್‌ಪ್ರೀತ್ ಸಿಂಗ್ ಪಡೆ ಮತ್ತೆ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ.
ಮೊದಲ ಸೆಮಿಫೈನಲ್ ಪಂದ್ಯ ಕೊರಿಯಾ-ಪಾಕಿಸ್ಥಾನ ನಡುವೆ ಸಾಗಲಿದ್ದು, ಅಪರಾಹ್ನ 3 ಗಂಟೆಗೆ ಆರಂಭ ವಾಗಲಿದೆ. ಭಾರತ-ಜಪಾನ್ ಮುಖಾಮುಖಿ ಸಂಜೆ 6 ಗಂಟೆಗೆ ಮೊದಲ್ಗೊಳ್ಳಲಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಮೆರೆದ ಭಾರತ ಈ ಕೂಟದಲ್ಲಿ ಇದಕ್ಕೆ ತಕ್ಕ ಪ್ರದರ್ಶನ ನೀಡುತ್ತ ಬಂದಿದೆ. ತಂಡದ ಕೆಲವೇ ಮಂದಿ ಹಿರಿಯ ಆಟಗಾರರೊಂದಿಗೆ ಮೀಸಲು ಹಾಕಿಪಟುಗಳು ತಮ್ಮ ಸಾಮರ್ಥ್ಯ ತೋರುವಲ್ಲಿ ಯಶಸ್ವಿಯಾಗಿರುವುದು ಉಲ್ಲೇಖನೀಯ.
ಏಕೈಕ ಅಜೇಯ ತಂಡ
ಭಾರತ ಈ ಕೂಟದ ಏಕೈಕ ಅಜೇಯ ತಂಡವಾಗಿದ್ದು, ಜಂಟಿ ಹಾಲಿ ಚಾಂಪಿಯನ್ ಕೂಡ ಆಗಿದೆ. 4 ಪಂದ್ಯಗಳಲ್ಲಿ ಮೂರನ್ನು ಗೆದ್ದು ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇರಿಸಿದೆ. ಕೊರಿಯಾ ಎದುರಿನ ಆರಂಭಿಕ ಪಂದ್ಯ ವನ್ನು 2-2 ಡ್ರಾ ಮಾಡಿಕೊಂಡ ಬಳಿಕ ಮನ್‌ಪ್ರೀತ್ ಸಿಂಗ್ ಪಡೆ ಹಿಂದಿರುಗಿ ನೋಡಿದ್ದಿಲ್ಲ. ಬಾಂಗ್ಲಾದೇಶ (9-0), ಪಾಕಿಸ್ಥಾನ (3-1) ಮತ್ತು ಜಪಾನ್ ವಿರುದ್ಧ (6-0) ಅಧಿಕಾರಯುತ ಗೆಲುವನ್ನೇ ಸಾಧಿಸಿದೆ.
ಇನ್ನೊಂದೆಡೆ ಜಪಾನ್ ಏಶ್ಯನ್ ಚಾಂಪಿಯನ್ ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ ಕೂಟದಲ್ಲಿ ಇದಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದಕ್ಕೆ ಭಾರತದೆದುರು ಕೊನೆಯ ಲೀಗ್ ಪಂದ್ಯದಲ್ಲಿ ಅನು ಭವಿಸಿದ 6-0 ಪರಾಭವವೇ ಸಾಕ್ಷಿ. 4 ಪಂದ್ಯಗಳಲ್ಲಿ ಒಂದನ್ನಷ್ಟೇ ಜಯಿಸಿದೆ. ಒಂದರಲ್ಲಿ ಎಡವಿದ್ದು, ಎರಡನ್ನು ಡ್ರಾ ಮಾಡಿಕೊಂಡಿದೆ.
ಇದನ್ನೂ ಓದಿ:ಮತ್ತೆ ಪಾಕಿಸ್ಥಾನಕ್ಕೆ ಬರಲಿದೆ ಕಿವೀಸ್ ಕ್ರಿಕೆಟ್ ತಂಡ
ಅಪಾಯಕಾರಿ ಹರ್ಮನ್‌ಪ್ರೀತ್
ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಭಾರತದ ಕೀ ಪ್ಲೇಯರ್ ಆಗಿದ್ದು, ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿಸುವಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದ್ದಾರೆ. ಜಪಾನ್ ವಿರುದ್ಧದ ರವಿವಾರದ ಮುಖಾಮುಖೀಯಲ್ಲಿ ಅವರು ಪೆನಾಲ್ಟಿ ಕಾರ್ನರ್ ಮೂಲಕವೇ ಗೋಲು ಸಿಡಿಸಿದ್ದರು. ಹೀಗಾಗಿ ಹರ್ಮನ್‌ಪ್ರೀತ್ ಜಪಾನ್ ಪಾಲಿಗೆ ಮತ್ತೆ ಕಂಟಕವಾಗಿ ಕಾಡು ವುದರಲ್ಲಿ ಅನುಮಾನವಿಲ್ಲ.
ಭಾರತದ ಮಿಡ್‌ಫೀಲ್ಡ್ ಕೂಡ ಬಲಿಷ್ಠವಾಗಿದೆ. ನಾಯಕ ಮನ್‌ಪ್ರೀತ್ ಸಿಂಗ್ ಮತ್ತು ಹಾರ್ದಿಕ್ ಸಿಂಗ್ ಇಲ್ಲಿನ ಕಟ್ಟಾಳುಗಳು. ಫಾರ್ವರ್ಡ್ ಲೈನ್‌ನಲ್ಲಿ ದಿಲ್‌ಪ್ರೀತ್, ಜರ್ಮನ್‌ಪ್ರೀತ್, ಆಕಾಶ್‌ದೀಪ್ ಸಿಂಗ್, ಶಮ್ಶೆàರ್ ಸಿಂಗ್ ಉತ್ತಮ ಲಯದಲ್ಲಿದ್ದಾರೆ.
ಸೂರಜ್ ಕರ್ಕೇರ ಸಾಹಸ
ಹಾಗೆಯೇ ಯುವ ಗೋಲ್‌ಕೀಪರ್ ಸೂರಜ್ ಕರ್ಕೇರ ಅವರ ಸಾಹಸವನ್ನು ಮರೆಯುವಂತಿಲ್ಲ. ಆದರೆ ತಂಡದ ಡಿಫೆನ್ಸ್ ವಿಭಾಗದಲ್ಲಿ ಹೆಚ್ಚಿನ ಸುಧಾರಣೆ ಆಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.